ಸಿರುಗುಪ್ಪದಲ್ಲಿ ಬಿಜೆಪಿ ಸೇರಿದ ಗ್ರಾ.ಪಂ.ಸದಸ್ಯರು

(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.01:  ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ, ಸುಗೂರು, ಹಚ್ಚೊಳ್ಳಿ ಗ್ರಾಮ ಪಂಚಾಯತಿ ಹಲವು  ಸದಸ್ಯರು  ಇಂದು ಅಧಿಕೃತವಾಗಿ ಬಿಜೆಪಿ  ಸೇರ್ಪಡೆಯಾದರು
ಭಾರತೀಯ ಜನತಾ ಪಾರ್ಟಿಯಿಂದ ಏರ್ಪಡಿಸಿದ್ದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ  ಪ್ರಚಾರದಲ್ಲಿ ಸ್ಥಳಿಯ ಶಾಸಕ ಸೋಮಲಿಂಗಪ್ಪ, ಮಂಡಲ ಅಧ್ಯಕ್ಷ ಆರ್. ಸಿ.ಪಂಪನ ಗೌಡ , ಮಂಡಲ ಪ್ರದಾನ ಕಾರ್ಯದರ್ಶಿ ಲಷ್ಕರ್ ಶೇಕಣ್ಣ , ಮಲ್ಲಿಕಾರ್ಜುನ  ಚುನಾವಣಾ ಉಸ್ತುವಾರಿಗಳು ಮೈನಾರಿಟಿ ಜಿಲ್ಲಾ ಅಧ್ಯಕ್ಷ  ಸಿ.ಇಬ್ರಾಹಿಂ ಬಾಬು, ಬುಡಾ ಅಧ್ಯಕ್ಷ ಪಿ. ಪಾಲಣ್ಣ, ಬಳ್ಳಾರಿ ಬಿಜೆಪಿ ನಗರ ಪ್ರದಾನ ಕಾರ್ಯದರ್ಶಿ ಕೆ. ರಾಮಂಜಿನಿ.  ಕೆ.ಸುಗುರ್ ಗ್ರಾಮಪಂಚಾಯಿತಿ ಅದ್ಯಕ್ಷರು ,ಸದ್ಯಸ್ಯರು ಸ್ಥಳೀಯ ಮಾಜಿ ಜಿಲ್ಲಾ ಪಂಚಯಿತಿ ಸದಸ್ಯರು ಭಾಗವಹಿಸಿದ್ದರು.