ಸಿರುಗುಪ್ಪದಲ್ಲಿ ಜಿಟಿ ಜಿಟಿ ಮಳೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.26 : ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನದಿಂದ ಸಂಜೆಯ ವರೆಗೆ ಜಿಟಿಜಿಟಿ ಮಳೆ ಸುರಿಯಿತು.
ಬೆಳಿಗ್ಗೆನಿಂದಲೇ ಬಾರಿ ಬಿಸೀಲು ವಾತಾವರಣವಿದ್ದು, ಮಧ್ಯಾಹ್ನವೇ ಸ್ವಲ್ಪ ಬಿಸೀಲು ಮತ್ತು ಕತ್ತಲು ಕವಿದ ಮೋಡದೊಂದಿಗೆ ಗಾಳಿ ಸಹಿತ ಮಳೆ ಸುರಿಯಿತು.
ಕೆಲಸಕ್ಕೆ ಹೋಗುವವರು ತುಂತುರು ಮಳೆಯಲ್ಲಿ ನಡೆದು ಹೋಗುತ್ತಿದ್ದದ್ದು ಕಂಡುಬಂತು. ಕೆಲವರು ಕೊಡೆ ಹಿಡಿದು ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದರು. ಬೀದಿಬದಿ ವ್ಯಾಪಾರಿಗಳು ಪಕ್ಕದ ಅಂಗಡಿಗಳ ಮೊರೆ ಹೋದರು. ಜಿಟಿಜಿಟಿ ಮಳೆಯಿಂದ ತಂಪಾದ ವಾತಾವರಣ ಕಂಡುಬಂದಿತ್ತು.