ಸಿರಿಧಾನ್ಯ ಮಹತ್ವ ಬಿಂಬಿಸಿದ ಮೇಳ

ಬೀದರ್: ಜೂ.8:ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ನೆಹರೂ ಯುವ ಕೇಂದ್ರ ಹಾಗೂ ಬೀದರ್ ಮೈನಾರಿಟಿ ಸ್ಪೊಟ್ರ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಸಿರಿಧಾನ್ಯ ಆಹಾರ ಮೇಳವು ಸಿರಿಧಾನ್ಯದ ಮಹತ್ವ ಬಿಂಬಿಸಿತು.

ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಹೇಗೆ ಸಹಕಾರಿಯಾಗಲಿದೆ ಎನ್ನುವುದನ್ನು ಸಂಪನ್ಮೂಲ ವ್ಯಕ್ತಿಗಳು ಸಾರ್ವಜನಿಕರಿಗೆ ಮನವರಿಕೆ ಮಾಡಿದರು.

ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ನಿತ್ಯ ಆಹಾರದಲ್ಲಿ ಸಿರಿಧಾನ್ಯ ಬಳಸಬೇಕು ಎಂದು ಅಸೋಸಿಯೇಷನ್ ಲೆಕ್ಕಾಧಿಕಾರಿ ಷರೀಫ್ ಶೇಕ್ ಹೇಳಿದರು.

ಸಿರಿಧಾನ್ಯಗಳು ಅಧಿಕ ಪೌಷ್ಟಿಕಾಂಶಗಳಿಂದ ಕೂಡಿವೆ ಎಂದು ಮುಖಂಡ ಸಂಜುಕುಮಾರ ತಿಳಿಸಿದರು.

ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು, ಕೊರಲೆ ಮೊದಲಾದ ಸಿರಿಧಾನ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಡಾ. ಹರೀಶ್, ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ, ಪ್ರಮುಖರಾದ ಪ್ರದೀಪ್ ಕೋಟೆ, ಶಿವಾಜಿ, ಸಚಿನ್ ಬಿ, ಸುದರ್ಶನ, ಶ್ರೀನಿವಾಸ, ಶ್ರೀಮಂತ, ಅಮರ ಇದ್ದರು.