ಸಿರಿಧಾನ್ಯಗಳ ಮೇಳ ಕೇ ಮೈಸೂರು ಜಿಲ್ಲೆಯ ಸುತ್ತಮುತ್ತ ಸಾವಿರಕ್ಕೂ ಹೆಚ್ಚು ರೈತರು ಭಾಗಿ

ಸಂಜೆವಾಣಿ ವಾರ್ತೆ
ಮೈಸೂರು ಡಿ11 : ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಿರಿಧಾನ್ಯ ಸಾವಯವ ಹಾಗೂ ನೈಸರ್ಗಿಕ ಕೃಷಿ ಕುರಿತು ವಿಚಾರ ಸಂಕಿರಣ ಮತ್ತು ಸಿರಿಧಾನ್ಯಗಳ ಮೇಳ ಕೇ ಮೈಸೂರು ಜಿಲ್ಲೆಯ ಸುತ್ತಮುತ್ತ ಸಾವಿರಕ್ಕೂ ಹೆಚ್ಚು ರೈತರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡಿಪುರಂ ವೃತ್ತದಲ್ಲಿ ಮೈಸೂರು ಆರ್ಟ್ ಆಫ್ ಲಿವಿಂಗ್ ವ್ಯಕ್ತಿ ವಿಕಾಸನ ಕೇಂದ್ರದ ವತಿಯಿಂದ ಶುಭ ಕೋರಲಾಯಿತು
ಇದೇ ಸಂದರ್ಭದಲ್ಲಿ ನಾಗರಹೊಳೆ ಕುರಿ & ಮೇಕೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷರಾದ ಯಶ್ವಂತ್, ಉಪಾಧ್ಯಕ್ಷರು ಶಿವಶಂಕರ್,ಸಿಇಒ ಕಾವ್ಯ, ಕಾರ್ಯದರ್ಶಿ ರವಿ,ವೆಂಕಟೇಶ್ ಅಪೂರ್ವ ಸುರೇಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಆನಂದ್, ದೂರ ರಾಜಣ್ಣ, ಶ್ರೀಕಾಂತ್ ಕಶ್ಯಪ್,ನಾಗರಹೊಳೆ ಕುರಿ & ಮೇಕೆ ರೈತ ಉತ್ಪಾದಕರ ಕಂಪನಿಯ ನಿರ್ದೇಶಕ ಮಂಡಳಿ ಹಾಗೂ ಇನ್ನಿತರ ರೈತ ಮುಖಂಡರು ಹಾಜರಿದ್ದರು