ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯ ವೃದ್ಧಿ-ಕನಕರಾಯ ಭಜಂತ್ರಿ

ಸಂಜೆವಾಣಿ ವಾರ್ತೆ
ಕುಕನೂರು, ನ.13: ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯ ವೃದ್ಧಿ ಎಂದು ಮಾನಸಿಕ  ಆರೋಗ್ಯ ಕೇಂದ್ರ ಆಪ್ತ ಸಮಾಲೋಚಕ ಕನಕರಾಯ ಭಜಂತ್ರಿ ಹೇಳಿದರು.
ತಾಲೂಕಿನ ಲಕ್ಮಾಪುರ್  ಗ್ರಾಮದಲಿ ನಿಸರ್ಗ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಿರಿಧಾನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಧುನಿಕ ಜಗತ್ತಿನಲ್ಲಿ ರಾಸಾಯನಿಕ ಗೊಬ್ಬರವನ್ನು ಬೆಳೆಸಿ ಬೆಳೆಯುವ ಬೆಳೆಗಳನ್ನು ಉಪಯೋಗ ಮಾಡುವುದನ್ನು ಬಿಟ್ಟು ಸಾವಯುವ ಗೊಬ್ಬರದಿಂದ ಉತ್ಪಾದನೆಯಾಗುವ  ಸಿರಿ ಧಾನ್ಯಗಳನ್ನು ಉಪಯೋಗ ಮಾಡಿಕೊಂಡ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು ಅಲ್ಲದೆ ಸಿರಿಧಾನ್ಯಗಳಾದ ನವಣೆ, ಸಾಮೆ, ಸಜ್ಜೆ, ಆರಕ, ರಾಗಿಯಂತಹ ಸಿರಿಧಾನ್ಯ (ಕಿರುಧಾನ್ಯ)ಗಳ ಅಡುಗೆಗಳೆಂದರೆ ಹಾಗೆ. ರುಚಿ ಹೆಚ್ಚು, ಪೌಷ್ಟಿಕಾಂಶದಲ್ಲೂ ತುಸು ಮುಂದು. ಈ ಧಾನ್ಯಗಳ ಒಂದು ಉಂಡೆ, ಅರ್ಧ ರೊಟ್ಟಿ, ಅರ್ಧ ಲೋಟ ಪಾಯಸ ದೀರ್ಘಕಾಲ ಹಸಿವನ್ನು ಮುಂದೂಡುತ್ತವೆ. ಹೊಟ್ಟೆಗೆ ತಂಪು ನೀಡಿ, ದೇಹಕ್ಕೆ ಶಕ್ತಿ ತುಂಬುತ್ತವೆ. ಅದಕ್ಕಾಗಿಯೇ ಹಿರಿಯರು ಈ ಖಾದ್ಯಗಳನ್ನು ಸೇವಿಸಿದರೆ `ಜೀವಕ್ಕೆ ತಂಪು, ಜುಟ್ಟಿಗೆ ಭದ್ರ~ ಎನ್ನುತ್ತಾರೆ. ಸಿರಿಧಾನ್ಯಗಳಲ್ಲಿ ರೋಗಗಳನ್ನು ನಿಯಂತ್ರಿಸುವ ಫಿನೋಲಿಕ್ ಆಸಿಡ್, ಫ್ಲೆವನೋಯ್ಡ್ಸ ಹಾಗೂ ಫೈಟೊ ಆಲೆಕ್ಸಿನ್‌ನಂಥ ಫೈಟೊನ್ಯೂಟ್ರಿಯೆಂಟ್ಸ್‌ಗಳಿವೆ. ಅವು ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್‌ಗಳು. ಸಿರಿಧಾನ್ಯಗಳು ಕೇವಲ ಕಾರ್ಬೊಹೈಡ್ರೇಟ್ ಮಾತ್ರವಲ್ಲ; ಉತ್ತಮ ಗುಣಮಟ್ಟದ ಕೊಬ್ಬನ್ನೂ (good cholestral)ಪೂರೈಸುತ್ತವೆ. `ಉದಾಹರಣೆಗೆ ಸಜ್ಜೆಯಲ್ಲಿರುವ ಶೇ 5.3 ಕೊಬ್ಬಿನಲ್ಲಿ ಶೇ 2.8ರಷ್ಟು ಒಮೆಗಾ-3 ಕೊಬ್ಬಿನಾಮ್ಲ  ಅದಕ್ಕೆ ಇಂತಹ ಆಹಾರ ಸೇವೆಗಳಿಂದ ಆರೋಗ್ಯದ ವೃದ್ಧಿಯಾಗುತ್ತದೆ ಎಂದು ಹೇಳಿದರು  ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಜಯಮ್ಮ  ಮಾಲಿ ಪಾಟೀಲ್ ಮುಖ್ಯ ಅತಿಥಿಗಳು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ವಿಜಯಕುಮಾರ್  ಪಂಚಾಯಿತಿ ಸದಸ್ಯರಾದ  ಸಿದ್ದಲಿಂಗಪ್ಪ ಗುರಿಕಾರ್  ಸಿ ಎಸ್ ಸಿ ಆಪರೇಟರ್ ಗವಿಸಿದ್ದಪ್ಪ ತಾಲೂಕಿನ ಸಮನ್ವಯ ಅಧಿಕಾರಿ ಲಕ್ಷ್ಮಿ ಸುಣಗಾರ ಸೇವಾ ಪ್ರತಿನಿಧಿ ಲಲಿತಾ ಕೇಂದ್ರದ ಎಲ್ಲ ಸದಸ್ಯರು ಹಾಜರಿದ್ದರು.