ಸಿರಿಗೇರಿ 3ನೇವಾರ್ಡು ಚರಂಡಿ ಸಮಸ್ಯೆ ಅಧಿಕಾರಿಗಳು ಭೇಟಿ”


ಸಂಜೆವಾಣಿ ವಾರ್ತೆ
ಸಿರಿಗೇರಿ ಏ.16. ಗ್ರಾಮದ 3ನೇವಾರ್ಡಿನಲ್ಲಿ ಕಳೆದ 10 ವರ್ಷಗಳ ಹಿಂದಿನಿಂದಲೂ ಚರಂಡಿ ಸಮಸ್ಯೆ ಇರುವುದನ್ನು ಇಲ್ಲಿಯವರೆಗೆ ಪರಿಹರಿಸಿಲ್ಲ. ಈಗ ತಕ್ಷಣ ಪರಿಹರಿಸದಿದ್ದರೆ 2023 ರ ವಿಧಾನಸಭಾ ಚುನಾವಣೆಯನ್ನು ಭಹಿಷ್ಕರಿಸಿ ಮತದಾನ ಮಾಡದಿರಲು ತೀರ್ಮಾನಿಸಿರುವುದಾಗಿ ಇಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ, ತಹಶಿಲ್ದಾರರಿಗೆ, ಗ್ರಾಮಾಡಳಿತಕ್ಕೆ ತಮ್ಮ ನಿರ್ಧಾರದ ಅರ್ಜಿಗಳನ್ನು ಗುಜರಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ತಾಲೂಕು ಪಂಚಾಯಿತಿ ಇಓ ಮಡಗಿನ ಬಸಪ್ಪ, ತಮ್ಮ ಸಹ ಅಧಿಕಾರಿಗಳೊಂದಿಗೆ ಸಿರಿಗೇರಿಯ 3ನೇವಾರ್ಡಿಗೆ ಭೇಟಿನೀಡಿ ಚುನಾವಣೆ ಮುಗಿದ ತಕ್ಷಣ ಚರಂಡಿ ಸಮಸ್ಯೆಯನ್ನು ಪರಿಹರಿಸಲಾಗುವುದು, ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಚುನಾವಣೆ ನಂತರ ಯಾವುದೇ ಕಾರಣಕ್ಕೂ ವಿಳಂಬ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿ, ಚುನಾವಣೆಯನ್ನು ಯಾವುದೇ ಕಾರಣಕ್ಕೂ ಬಹಷ್ಕಾರ ಮಾಡಬಾರದು, ಅದು ಭಾರತೀಯನ ಪ್ರಮುಖ ಕರ್ತವ್ಯವಾಗಿದೆ ಎಂದು ನಿವಾಸಿಗಳಲ್ಲಿ ಜಾಗೃತಿ ಮೂಡಿಸಿದರು. ಅದರೂ ನಿವಾಸಿಗಳು ಡಿಸಿ ಬಂದು ನಮಗೆ ಮಾಡಿಸಿಕೊಡುವ ಭರವಸೆ ನೀಡುವವರೆಗೆ ನಮ್ಮ ನಿರ್ಧಾರ ಬದಲಿಸುವುದಿಲ್ಲವೆಂದು ಪಟ್ಟು ಹಿಡಿದರು. ನಂತರ ಸರ್ಕಾರ ಮಟ್ಟದ ಜೆಇಗಳು ಬಂದು ಚರಂಡಿ ನಿರ್ಮಾಣದ ಅಂದಾಜು ನಕ್ಷೆಯನ್ನು ಮಾಡಿಕೊಂಡರು. ನಿವಾಸಿಗಳು ಈ ಕುರಿತು ಡಿಸಿಯವರನ್ನು ಭೇಟಿ ಮಾಡಲಾಗಿದೆ, ಚುನಾವಣೆ ನಂತರ ಮೊದಲ ಆದ್ಯತೆಯಲ್ಲಿ ಈ ಸಮಸ್ಯೆಯನ್ನು ಪರಿಹರಿಸವುದಾಗಿ ಭರವಸೆ ನೀಡಿದ್ದಾರೆಂದು ನಿವಾಸಿಗಳು ಮಾಹಿತಿ ನೀಡಿದರು.