ಸಿರಿಗೇರಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ”

ಸಂಜೆವಾಣಿ ವಾರ್ತೆ
ಸಿರಿಗೇರಿ ನ25. ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ವಾರ್ಷಿಕ 2ನೇ ಅವಧಿಯ ಪೋಷಕರ ಸಭೆ ನಡೆಸಲಾಯಿತು. ಎಸ್‍ಡಿಎಂಸಿ ಅಧ್ಯಕ್ಷ ಬಕಾಡೆ ಈರಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಸಹ ಶಿಕ್ಷಕಿ ಕವಿತ ಪೋಷಕರನ್ನು, ಅತಿಥಿಗಳನ್ನು ಅಹ್ವಾನಿಸಿ ಪ್ರಾಸ್ತಾವಿಕ ಮಾತನಾಡಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಶಾಲೆಯಲ್ಲಿ ಹಾಕಿಕೊಂಡಿರುವ ಯೋಜನೆಗಳ ಮತ್ತು ಪುರ್ವಭಾವಿ ತಯಾರಿಗಳ ಕುರಿತು ಪೋಷಕರಿಗೆ ತಿಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಬೇಕೆಂದು ಕೋರಿದರು.
ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಬಕಾಡೆಈರಯ್ಯ ಮಾತನಾಡಿ ತಾಲೂಕಿನಲ್ಲಿ ನಮ್ಮ ಶಾಲೆಯು ವಿದ್ಯಾಭ್ಯಾಸದಲ್ಲಿ, ಕ್ರೀಢೆಯಲ್ಲಿ ಉತ್ತಮ ಸ್ಥಾನದಲ್ಲಿದೆ. ಹಾಗೆಯೇ 10ನೇ ತರಗತಿಯಲ್ಲಿ ಈವರ್ಷ ಅತ್ಯುತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒತ್ತುನೀಡಿ ಪ್ರತಿದಿನ ಶಾಲೆಗೆ ಬರುವಂತೆ, ಮನೆಯಲ್ಲಿ ಓದಿಕೊಳ್ಳುವಂತೆ ನೋಡಿಕೊಳ್ಳಬೇಕೆಂದರು. ಪೋಷಕರ ಪರವಾಗಿ ನಾಗರಾಜ್ ಮಾತನಾಡಿ ಶಾಲೆ ಓದುವ ಸಮಯದಲ್ಲಿ ಎಸ್‍ಎಸ್‍ಎಲ್‍ಸಿ ಒಂದು ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಮೊಬೈಲ್‍ನಲ್ಲಿ, ಟಿವಿ ವೀಕ್ಷಣೆಯಲ್ಲಿ, ಊರುಗಳಿಗೆ, ಜಾತ್ರೆ, ಮದುವೆಗಳಿಗೆಂದು ಓಡಾಡಿ ಸಮಯ ಹಾಳು ಮಾಡಬಾರದೆಂದು ತಿಳಿಸಿದರು.
ಕೊನೆಯಲ್ಲಿ ಶಾಲೆಯ ಮುಖ್ಯಗುರು ಫರ್ವೇಜ್ ಅಹಮ್ಮದ್ ಮಾತನಾಡಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಹೊತ್ತಿರುವ ಜವಾಬ್ದಾರಿ, ಯೋಜನೆ, ಇತರೆ ವಿಷಯಗಳನ್ನು ತಿಳಿಸಿದರು. ನಿಮ್ಮ ಮಕ್ಕಳ ಬಗ್ಗೆ ನಾವು ಹೊಂದಿರುವ ಕಾಳಜಿಯಂತೆ ನಿಮ್ಮ ಮಕ್ಕಳ ಮೇಲೆ ನೀವು ವಿಶೇಷ ಕಾಳಜಿ ಹೊಂದಿ ಶಾಲೆ ತಪ್ಪಿಸದಂತೆ, ಮನೆಯಲ್ಲಿ ಸಮಯ ಹಾಳು ಮಾಡದಂತೆ ನೋಡಿಕೊಂಡು ದಿನಕ್ಕೆ ಕನಿಷ್ಟ 5 ತಾಸು ವಿದ್ಯಾಭ್ಯಾಸದಲಿ ತೊಡಗುವಂತೆ ನೋಡಿಕೊಳ್ಳಬೇಕೆಂದರು. ಇದೇವೇಳೆ ಸುತ್ತಲಿನ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳ ಸಮಸ್ಯೆ, ಹೆಚ್ಚು ಪುಸ್ತಕಗಳ ಭಾರದ ಸಮಸ್ಯೆ, ವಿದ್ಯಾರ್ಥಿ ವೇತನ (ಸ್ಕಾಲರ್‍ಶಿಪ್) ಸಮಸ್ಯೆಗಳನ್ನು ಮುಖ್ಯಗುರುಗಳ ಹತ್ತಿರ ಚರ್ಚಿಸಿದರು. ದೈಹಿಕ ಶಿಕ್ಷಕ ಕೃಷ್ಣಮೂರ್ತಿ, ಸಹ ಶಿಕ್ಷಕರಾದ ರೇಣುಕ, ರಂಗಪ್ಪ, ಗ್ರಾ.ಪಂ.ಸದಸ್ಯ ಕರಿಬಸಪ್ಪ, ಎಸ್‍ಡಿಎಂಸಿ ಸದಸ್ಯ ರೋಶನ್, ಪೋಷಕರು ಇದ್ದರು. ಶಿಕ್ಷಕ ದೊಡ್ಡಬಸಪ್ಪ ಕಾರ್ಯಕ್ರಮ ನಿರ್ವಹಿಸಿದರು.