ಸಿರಿಗೇರಿ ಬಸವರಾಜ್ ಪುಣ್ಯತಿಥಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.09: ನಗರದ  ಆದರ್ಶ ಹಾರ್ಟ್ ಕೇರ್ ಸೆಂಟರ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು  ಪ್ರತಿ ವರ್ಷದಂತೆ ಸಿರಿಗೇರಿ ಬಸವರಾಜ್ ಅವರ 35 ನೇ ಪುಣ್ಯತಿಥಿ ಅಂಗವಾಗಿ. ಈ ವರ್ಷವೂ ಉಚಿತ ಹೃದಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರವನ್ನು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ  ಡಾಕ್ಟರ್ ಕೆ. ಸತೀಶ್ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕ  ಪನ್ನರಾಜ್ ಸಿರಿಗೇರಿ, ಬಸವರಾಜ ಪಲ್ಲೆದ್ ಹಾಗು ವೈದ್ಯ ಸಮೂಹದ  ಡಾ. ದಿವಾಕರಗಡ್ಡಿ, ಡಾ. ಕೊಟ್ರೇಶ್, ಡಾ. ಹರೀಶ್, ಡಾ. ಹಳ್ಳಿ ಕರಿಬಸಪ್ಪ ಡಾ. ಸುಪ್ರೀತಾ ಸಿರಿಗೇರಿ ಹಾಗೂ ಇತರರು ಹಾಜರಿದ್ದರು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಹೃದಯ ತಪಾಸಣೆ ನಡೆಯಿತು.