“ಸಿರಿಗೇರಿ ಪೋಲಿಸ್ ಠಾಣೆಯಲ್ಲಿ ಮಾಸಿಕ ದಲಿತರ ಸಭೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಏ10. ಗ್ರಾಮದ ಪೋಲಿಸ್ ಠಾಣೆ ಆವರಣದಲ್ಲಿ ಏ.9 ಭಾನುವಾರ ಸಂಜೆ ಮಾಸಿಕ ದಲಿತ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಎಎಸ್‍ಐ ಎಚ್. ಗಂಗಣ್ಣ ಮಾತನಾಡಿ ಕಾರಣಾಂತರಗಳಿಂದ ಸಭೆಯನ್ನು ತಿಂಗಳ ನಿಗದಿತ ದಿನದಂದು ನಡೆಸಲು ವೆತ್ಯಾಸವಾಗಿದೆ, ಈಗ ಚುನಾವನೆ ಅಧಿಸೂಚನೆ ಇರುವುದರಿಂದ ನೀತಿ ಸಂಹಿತೆಯ ಮಾಹಿತಿ ನೀಡಲು ಸಭೆಯನ್ನು ಆಯೋಜಿಸಲಾಗಿದೆ. ನೀತಿ ಸಂಹಿತೆ ಜಾರಿ ಇರುವುದರಿಂದ ಕೆಲ ಸೂಕ್ಷ್ಮ ವಿಷಯಗಳು, ಸಮಸ್ಯೆಗಳಾಗಿ ಪ್ರಕರಣ ದಾಖಲಿಸುವ ಸಂಭವವಿರುತ್ತದೆ. ಎಲ್ಲರೂ ಸಂಹಿತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಜಾಗ್ರತೆಯಿಂದಿರಬೇಕು. ಚುನಾವಣೆ ನಿಯಮಗಳನ್ನು ಪಾಲಿಸುವುದು, ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವುದು, ಸೌಹಾರ್ಧತ ಕಾಪಾಡಿಕೊಳ್ಳುವುದು, ಚುನಾವಣೆ ದಿನ ಆಯಾ ಪಕ್ಷಗಳ ಮುಖಂಡರು ಶಾಂತಿಯುತವಾಗಿ ಚುನಾವನೆ ವ್ಯವಸ್ಥಿತವಾಗಿ ನಡೆಸಲು ನಮ್ಮ ಜೊತೆ ಕೈಜೋಡಿಸಬೇಕೆಂದು ತಿಳಿಸಿದರು. ಇದೇವೇಳೆ ಕಾನೂನು ಸುವ್ಯವಸ್ಥೆ ನಿರೀಕ್ಷಕ ಅಧಿಕಾರಿ ರಾಘವೇಂದ್ರರಾವ್ ಮಾತನಾಡಿ ನೀತಿ ಸಂಹಿತೆಯ ಮಾರ್ಗದರ್ಶನಗಳನ್ನು ತಿಳಿಸಿದರು. ಮುಖಂಡರಾದ ಬಿ.ಈರಯ್ಯ, ಡ್ರೈವರ್‍ಹುಲುಗುಪ್ಪ, ವಕೀಲ ರಾಂಬಾಬು, ಎಚ್.ಲಕ್ಷ್ಮಣಭಂಡಾರಿ, ಶಿಕ್ಷಕ ಎನ್.ಶ್ರೀಕಾಂತ್, ಇತರರು ಮಾತನಾಡಿ ಗ್ರಾಮೀಣ ಭಾಗದಲ್ಲಿನ ದಲಿತ ಕಾಲೋನಿಗಳಲ್ಲಿ ಇರುವ ಕೆಲ ಸಮಸ್ಯೆಗಳ ಕುರಿತು ತಿಳಿಸಿ ಅವುಗಳ ಪರಿಹಾರಕ್ಕೆ ಇಲಾಖೆ ಮುಂದಾಗಬೇಕೆಂದು ತಿಳಿಸಿದರು. ಇದೇವೇಳೆ ದಲಿತರ ಸಮಸ್ಯೆಗಳನ್ನು ಸಮರ್ಪಕವಾಗಿ ತಾರತಮ್ಯವಿಲ್ಲದೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಎಸ್‍ಐ ಗಂಗಣ್ಣ ಇವರನ್ನು ವಕೀಲ ರಾಂಬಾಬು ಇವರು ವೈಯುಕ್ತಿಕವಾಗಿ ಜನರ ಪರವಾಗಿ ಸನ್ಮಾನಿಸಿ ಗೌರವಿಸಿದರು. ದಲಿತ ಸಮುದಾಯದ ಮುಖಂಡರು, ಪೋಲಿಸ್ ಸಿಬ್ಬಂದಿಯವರು ಪಾಲ್ಗೊಂಡಿದ್ದರು.