ಸಿರಿಗೇರಿ ಪಿಎಸ್ಐ ರಿಂದ ವಾಹನ ಚಾಲಕರಿಗೆ ಜಾಗೃತಿ ಸಂದೇಶ.


ಸಂಜೆವಾಣಿ ವಾರ್ತೆ
ಸಿರಿಗೇರಿ ಜು.16. ನಿನ್ನೆ ಶನಿವಾರ ಮದ್ಯಾನ್ಹ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಸದ್ದಾಂಹುಸೇನ್ ರವರು  ಗ್ರಾಮದ ಆಟೋ ಚಾಲಕರು, ಬೈಕ್ ಚಾಲಕರು, ಮತ್ತು ಟ್ರ್ಯಾಕ್ಸ್ ವಾಹನಗಳ ಚಾಲಕರಿಗೆ ಸುಗಮ ಸಂಚಾರಿ ನಿಯಮಗಳ ಸಂದೇಶವನ್ನು ನೀಡಿದರು. ಇದೇ ವೇಳೆ ಚಾಲಕರನ್ನು ಉದ್ದೇಶಿಸಿ ಮಾತನಾಡಿ ಫೋರ್ ವೀಲರ್ ವಾಹನ ಮಾಲೀಕರು ತಮ್ಮ ವಾಹನಗಳ ಹಿಂದೆ ಮತ್ತು ಮುಂದುಗಡೆ ರಾತ್ರಿಯ ಸಂಚಾರದ ವೇಳೆ ಹಿಂದೆ ಮತ್ತು ಮುಂಬರುವ ವಾಹನಗಳಿಗೆ ಸಂದೇಶ ರವಾನೆ ಆಗುವಂತೆ ಬೆಳಕು ಪ್ರತಿಫಲಿತ ಸ್ಟಿಕರ್ ಗಳನ್ನು ಅಂಟಿಸಿಕೊಂಡಿರಬೇಕು. ಅದೇ ರೀತಿ ಇಂಡಿಕೇಟರ್ಗಳನ್ನು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಂಡಿರಬೇಕು. ಹಗಲಿನ ವೇಳೆಯೂ ಕೈ ಸನ್ನೆಗಳ ಮೂಲಕ ಸುರಕ್ಷಿತ ಸಂಚಾರ ನಿಯಮಗಳನ್ನು ಪಾಲಿಸಬೇಕು. ನಿಮ್ಮ ವಾಹನಗಳಲ್ಲಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ದಾಖಲೆಗಳ ಪ್ರತಿಗಳನ್ನು ಇಟ್ಟುಕೊಂಡಿರಬೇಕು. ಅತಿ ವೇಗದಲ್ಲಿ ಚಲಿಸುವುದು, ಜನನಿಬಿಡ ಪ್ರದೇಶಗಳಲ್ಲಿ ವಾಹನಗಳನ್ನು ಸೈಡ್ ಹಾಕುವುದು, ಗ್ರಾಮಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗುವಂತೆ ರಸ್ತೆ ಬದಿಯಲ್ಲಿ ಅಕ್ಕಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಬಾರದು. ದ್ವಿಚಕ್ರವಾಹನ ಬೈಕ್ ಸವಾರರು ತಮ್ಮ ವಾಹನಗಳ ದಾಖಲೆಗಳನ್ನು ಹೊಂದಿ ಹೆಲ್ಮೆಟ್ ಗಳನ್ನು ಸಂಚಾರದಲ್ಲಿ ಬಳಸುವುದು. ರಸ್ತೆ ನಿಯಮಗಳನ್ನು ಪಾಲಿಸಿ ಸುರಕ್ಷಿತ ಸಂಚಾರಕ್ಕೆ ಸಹಕಾರಿಸಬೇಕೆಂದು ಎಲ್ಲರಲ್ಲೂ ಜಾಗೃತಿ ಮೂಡಿಸಿದರು. ಆಟೋ ವಾಹನಗಳ ಚಾಲಕರು, ಬೈಕ್ ಸವಾರರು, ಪೊಲೀಸ್ ಸಿಬ್ಬಂದಿಯವರು ಪಾಲ್ಗೊಂಡಿದ್ದರು.