ಸಿರಿಗೇರಿ ಗ್ರಾ.ಪಂ. ವಾಣಿಜ್ಯ ಮಳಿಗೆಗಳಿಂದ 3.89 ಲಕ್ಷ ಬಾಕಿ ಉಳಿಕೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂನ್.16. ಗ್ರಾಮದ ಗ್ರಾಮ ಪಂಚಾಯಿತಿ ವ್ಯಾಪ್ತಿಯ 30ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿಂದ 3 ಲಕ್ಷದ 89 ಸಾವಿರ ರೂ.ಗಳ ಬಾಕಿ ವಸೂಲಾಗಬೇಕಿದೆ. ಈ ಹಿನ್ನೆಲೆಯಲ್ಲಿ ಕಳೆದ ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯಿತಿಗೆ ಬರಬೇಕಾಗಿದ್ದ ಆದಾಯದ ಕುಂಟಿತಕ್ಕೆ ಕಾರಣವಾಗಿತ್ತು. ಹಣವಿಲ್ಲವೆನ್ನುವ ಕಾರಣದಿಂದ ಪಂಚಾಯಿತಿ ಕೆಲ ಸಿಬ್ಬಂದಿಯವರಿಗೆ ಎರಡು ವರ್ಷಗಳವರೆಗೂ ಸಂಬಳವನ್ನು ನೀಡಿರಲಿಲ್ಲ. ತಮ್ಮ ಸಂಬಳ ನೀಡಬೇಕೆಂದು ಸಿಬ್ಬಂದಿಯವರು ಗ್ರಾಮ ಪಂಚಾಯಿತಿ ಸದಸ್ಯರಿಗೆ, ಅಧ್ಯಕ್ಷರಿಗೆ ಒತ್ತಾಯ ಪಡಿಸಿದ ಕಾರಣ ಸಭೆಯಲ್ಲಿ ಇದನ್ನೇ ಗಂಭೀರವಾಗಿ ಪರಿಗಣಿಸಿ ಬಾಕೀ ವಸೂಲಿಗೆ ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಪಿಡಿಓ ಶಿವಕುಮಾರ್‍ಕೋರಿ, ಕಾರ್ಯದರ್ಶಿ ವೀರೇಶಗೌಡ ಮತ್ತು ಸಿಬ್ಬಂದಿಯವರು ಗ್ರಾ.ಪಂ.ಸದಸ್ಯರ ಜೊತೆ ತೆರಳಿ ಬಾಕಿ ಬಾಡಿಗೆಯನ್ನು ಒಂದು ವಾರದ ಒಳಗೆ ಕಟ್ಟಬೇಕೆಂದು ಬಾಡಿಗೆದಾರರಿಗೆ ನೋಟಿಸ್ ಜಾರಿ ಮಾಡಿ ತಿಳಿಸಿದರು. ತೇರುಬೀದಿಯ ಬದಿಯಲ್ಲಿನ ವಾಣಿಜ್ಯ ಮಳಿಗೆಗೆ ತಿಂಗಳಿಗೆ 1200/- ರೂ. ಒಳಗೆ ಇರುವ ಮಳಿಗೆಗಳಿಗೆ 1000/- ಕಡಿಮೆ ಬಾಡಿಗೆ ಇದ್ದರೂ ಇದನ್ನು ಸರಿಯಾಗಿ ಕಟ್ಟದ ಬಾಡಿಗೆದಾರರು 20 ಸಾವಿರ ರೂ. ನಿಂದ 60 ಸಾವಿರ ರೂ. ವರೆಗೆ ಒಬ್ಬೊಬ್ಬರು ಬಾಕಿ ನಿಲ್ಲಿಸಿದ್ದಾರೆ. 1 ವಾರದಲ್ಲಿ ಕಟ್ಟದಿದ್ದ ಪಕ್ಷದಲ್ಲಿ ಮಳಿಗೆಗಳಿಗೆ ಬೀಗ ಹಾಕಿ, ಬಾಕಿ ವಸೂಲಿ ಮಾಡಿ ಹೊಸ ಟೆಂಡರ್ ಕರೆಯಲಾಗುವುದೆಂದು ಮಾಹಿತಿ ನೀಡಿದರು. ಪೂಜಾರಿಸಿದ್ದಯ್ಯ, ಎಸ್.ಎಂ.ಅಡಿವೆಯ್ಯಸ್ವಾಮಿ, ಡ್ರೈವರ್‍ಹುಲುಗಪ್ಪ, ಬಿ.ಉಮೇಶ, ಎನ್.ಹನುಮಂತಪ್ಪ, ಎನ್.ರಾಜಕುಮಾರ, ವಿ.ರಮೇಶ, ಮರಿಸ್ವಾಮಿ, ಲಕ್ಷ್ಮಣಭಂಡಾರಿ, ಎಂ.ರಾಘವೇಂದ್ರ, ಕರಿಬಸಪ್ಪ, ಜೀನ್ಸ್‍ಬಸವರಾಜ, ಮುದೆಪ್ಪ, ಶಿವಪ್ಪ, ಅನಿಲ್, ಸಿಬ್ಬಂದಿಯವರು ಬಾಕಿ ವಸೂಲಾತಿ ಅಂದೋಲನದಲ್ಲಿ ಪಾಲ್ಗೊಂಡಿದ್ದರು.