ಸಿರಿಗೇರಿ ಎಸ್‍ಎಸ್‍ಎಲ್‍ಸಿ ಫಲಿತಾಂಶ. ವಿದ್ಯಾರ್ಥಿನಿಯರೇ ಮೇಲುಗೈ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮೇ9. ಸಿರಿಗೇರಿ ಗ್ರಾಮದಲ್ಲಿನ 2 ಸರ್ಕಾರಿ ಪ್ರೌಢಶಾಲೆಗಳು, 2 ಖಾಸಗೀ ಪ್ರೌಢಶಾಲೆಗಳು ಸೇರಿ ಒಟ್ಟು 246 ವಿದ್ಯಾರ್ಥಿಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದರು. ಈ ಪೈಕಿ 182 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಾಲ್ಕೂ ಶಾಲೆಗಳ ಒಟ್ಟಾರೆ ವಿದ್ಯಾರ್ಥಿನಿಯರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಜೆಎಚ್‍ವಿ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 28 ವಿದ್ಯಾರ್ಥಿಳ ಪೈಕಿ 24 ವಿದ್ಯಾರ್ಥಿಳು ಪಾಸಾಗಿದ್ದಾರೆ. ಅಂಕಿತಾ. ಡಿ ಎಂಬ ವಿದ್ಯಾರ್ಥಿನಿಯು 562 ಅಂಕ ಪಡೆದು 90% ಶೇಕಡ ಫಲಿತಾಂಶದಿಂದ ಶಾಲೆಗೆ ಮತ್ತು ಗ್ರಾಮಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ. ವಿವೇಕಾನಂದ ಪ್ರೌಢಶಾಲೆಯ ಒಟ್ಟು 56 ವಿದ್ಯಾರ್ಥಿಗಳ ಪೈಕಿ 52 ವಿದ್ಯಾರ್ಥಿಳು ಉತ್ತೀರ್ಣರಾಗಿ ಕುಮಾರಿ ಸನಾ 548 ಅಂಕ ಪಡೆದು ಶಾಲೆಗೆ ಮೊದಲ ಸ್ಥಾನ ಪಡೆದಿದ್ದಾಳೆ. ಬಾಲಕರ ಸರ್ಕಾರಿ ಪ್ರೌಢಶಾಲೆಯ 62 ವಿದ್ಯಾರ್ಥಿಗಳ ಪೈಕಿ 39 ವಿದ್ಯಾರ್ಥಿಗಳು ಉತ್ತೀರ್ಣಗೊಂಡು, ಬಿ.ಎಂ.ಚಿನ್ಮಯಿ ಎಂಬ ವಿದ್ಯಾರ್ಥಿ 539 ಅಂಕ ಪಡೆದು ಶಾಲೆಗೆ ಮೊದಲ ಸ್ಥಾನ ಪಡೆದಿದ್ದಾನೆ. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಒಟ್ಟು 100 ವಿದ್ಯಾರ್ಥಿನಿಯರು ಪರೀಕ್ಷೆಗೆ ನೊಂದಾಯಿಸಿ 74 ವಿದ್ಯಾರ್ಥಿನಿಯರು ಉತ್ತೀರ್ಣಗೊಂಡು ಶಶಿಕಲಾ ಎನ್ನುವ ವಿದ್ಯಾರ್ಥಿನಿ 523 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇವರ ಸಾಧನೆಗೆ ಪೋಷಕರು, ಶಿಕ್ಷಣ ಪ್ರೇಮಿಗಳು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.