ಸಿರಿಗೇರಿ ಆಸ್ಪತ್ರೆ ಮೇಲ್ದರ್ಜೆಗೆ ಗ್ರಾಮಸ್ಥರ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.24: ಜಿಲ್ಲೆಯ ಸಿರುಗುಪ್ಪ ತಾಲೂಕಿನ
ಸಿರಿಗೇರಿ ಗ್ರಾಮದ ಸರಕಾರಿ ಆಸ್ಪತ್ರೆಯನ್ನು,  ಸಮುದಾಯ  ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಆಸ್ಪತ್ರೆಯಲ್ಲಿ ಮೂಲಭೂತ ಸಮಸ್ಯೆಗಳು ಮತ್ತು ವೈದ್ಯಾಧಿಕಾರಿ ಹಾಗೂ ನರ್ಸ್ ಸಿಬ್ಬಂದಿ ನೇಮಕಕ್ಕೆ ಆಗ್ರಹಿಸಿ ಗ್ರಾಮದ ಮುಖಂಡರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.  ಯಲ್ಲಾ ರಮೇಶ್ ಬಾಬು ಅವರಿಗೆ ಮನವಿ ಮಾಡಿದ್ದಾರೆ.
ಸಿರಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು. ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿರಿಗೇರಿಯ ಸಾರ್ವಜನಿಕರು ಮನವಿ ಸಲ್ಲಿಸಿ.  ಸಿರಿಗೇರಿ ಗ್ರಾಮವು  18 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.  ಅಲ್ಲದೆ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳ 30 ಸಾವಿರಕ್ಕೂ ಹೆಚ್ಚು ಜನರಿಗೆ ಸಿರಿಗೇರಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ.  ಅಲ್ಲದೆ  4 ಉಪಕೇಂದ್ರಗಳನ್ನು ಮಾಡಿ ಹಳ್ಳಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌‌.
ಆದರೂ ಪ್ರಮುಖ ರೋಗಗಳಿಗೆ, ತುರ್ತು ಚಿಕಿತ್ಸೆಗೆ, ಹೆರಿಗೆ ಮತ್ತು ಹಾವು,ಚೇಳು ಕಡಿತ, ಅಪಘಾತ ಸಂಭವಿಸಿದಾಗ ಸಿರುಗುಪ್ಪ ಮತ್ತು ಬಳ್ಳಾರಿ ವಿಮ್ಸ್  ಆಸ್ಪತ್ರೆಗಳನ್ನೇ ಅವಲಂಬಿ
ಸಬೇಕಾಗಿದೆ.
ಸಿರಿಗೇರಿ ಆಸ್ಪತ್ರೆಗೆ ದಿನನಿತ್ಯ 100 ಕ್ಕೂ ಹೆಚ್ಚು ಜನ ಚಿಕಿತ್ಸೆಗಾಗಿ ಬರುತ್ತಾರೆ. ಈ ಜನಕ್ಕೆ ಪರೀಕ್ಷೆ ಮತ್ತು ಚಿಕಿತ್ಸೆ ನೀಡುವಷ್ಟು  ಸಿಬ್ಬಂದಿ ಇಲ್ಲ. ಅಲ್ಲದೆ ಔಷಧಿಗಳ ಕೊರತೆಯಿಂದ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಹೆರಿಗೆ ನೋವು ಕಾಣಿಸಿಕೊಂಡರೆ, ಹಾವುಚೇಳು, ನಾಯಿ ಕಚ್ಚಿದರೆ, ಅಪಘಾತವಾದರೆ, ಇತರೆ ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಕರೆಸಿಕೊಂಡು ಬಳ್ಳಾರಿಗೆ ದೌಡಾಯಿಸುವ ಅನಿವಾರ್ಯತೆ ಮತ್ತು ಜೀವಗಳನ್ನು ಕಳೆದುಕೊಳ್ಳುವ ಆತಂಕದಲ್ಲಿ ಸಾರ್ವಜನಿಕರು ಬದುಕುವಂತಾಗಿದೆ.
ಅದಕ್ಕಾಗಿ ಈ  ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ. ಅಗತ್ಯ ಸಿಬ್ಬಂದಿ, ಸೌಕರ್ಯಗಳನ್ನು ಒದಗಿಸಬೆರಕೆಂದು ಕೋರಿದ್ದಾರೆ.
ಇದಕ್ಕೆ ಡಿಹೆಚ್ಓ ಪ್ರತಿಕ್ರಿಯಿಸಿ,  ತಕ್ಷಣ ಹೆಚ್ಚುವರಿ ಸ್ಟಾಪ್ ನರ್ಸ್ ನ್ನು ನೇಮಕ ಮಾಡಲಾಗುವುದು. ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲ ಆಯ್ಕೆಯಾಗಿದೆ.  ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ  ಪ್ರಾರಂಭಿಸಲಿದೆ.   ವೈದ್ಯಾಧಿಕಾರಿಗಳನ್ನು ನೇಮಿಸಿದರೂ ಅಲ್ಲಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ತಮ್ಮೂರಲ್ಲಿ ವೈದ್ಯಾಧಿಕಾರಿಗಳು ಇದ್ದರೆ ತಿಳಿಸಿ ನೇಮಕ ಮಾಡುತ್ತೇವೆ. ಕೆಲವು ದಿನಗಳಲ್ಲಿ  ಇನ್ನೊಬ್ಬ ವೈದ್ಯಾಧಿಕಾರಿ ನೇಮಿಸಲಾಗುವುದು ಎಂದು ತಿಳಿಸಿದ್ದಾರೆ.

One attachment • Scanned by Gmail