ಸಿರಿಗೇರಿಯ ವಿವೇಕಾನಂದ ವಿದ್ಯಾಸಂಸ್ಥೆಯಿಂದ ಶಾಲಾ ವಾರ್ಷಿಕೋತ್ಸವ”


ಸಂಜೆವಾಣಿ ವಾರ್ತೆ
ಸಿರಿಗೇರಿ ಫೆ28. ಗ್ರಾಮದ ವಿವೇಕಾನಂದ ವಿದ್ಯಾಸಂಸ್ಥೆಯ ಪ್ರೌಢಶಾಲೆ ಮತ್ತು ಗೋಡೆ ಅಡಿವೆಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ದಶಮಾನೋತ್ಸವ ಹಾಗೂ ಶಾಲಾ ವರ್ಷಿಕೊತ್ಸವ ಕಾರ್ಯಕ್ರಮವು ನಿನ್ನೆ ಫೆ.27 ರಂದು ಸೋಮವಾರ ಸಂಜೆ ನಡೆಯಿತು. ಕಾರ್ಯಕ್ರಮವನ್ನು ಕೆಅರ್‍ಪಿಪಿ ಪಕ್ಷದ ಸಿರುಗುಪ್ಪ ತಾಲೂಕು ಮುಖಂಡ, ಹಾಗೂ ಘೋಷಿತ ಎಂಎಲ್‍ಎ ಅಭ್ಯರ್ಥಿ ಧರಪ್ಪನಾಯಕ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ, ಆ ಶಿಸ್ತನ್ನು ಮನೆಗಳಲ್ಲಿ ತಂದೆತಾಯಿಗಳು ಪೋಷಕರು ಕಲಿಸಿಕೊಡಬೇಕು. ವಿನಯತೆ ಇಲ್ಲದವನಿಗೆ ವಿದ್ಯೆ ಒಲಿಯುವುದಿಲ್ಲ ಸರ್ಕಾರಿ ಶಾಲೆಗಳಲ್ಲಿ, ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಹೆಚ್ಚು ವಿದ್ಯಾಭ್ಯಾಸದ ಕಡೆಗೆ ಒತ್ತು ನೀಡಬೇಕೆಂದು ತಿಳಿಸಿದರಲ್ಲದೇ ವಿದ್ಯಾರ್ಥಿಗಳಲ್ಲಿ ಗೆಳೆತನ ಅಂದರೆ ಹೇಗಿರಬೇಕೆಂಬ ಕುರಿತು ಒಂದು ಉಪಮಾನದ ಕಥೆಯನ್ನು ಹೇಳಿ ವಿದ್ಯಾರ್ಥಿಗಳು ಸಂಸ್ಕಾರ, ಶಿಸ್ತು ಅಳವಡಿಸಿಕೊಳ್ಳುವಂತೆ ತಿಳಿಸಿದರು.
   ನಂತರ ವಿವೇಕಾನಂದ ಪ್ರೌಢ ಶಾಲೆಯ ಮುಖ್ಯಗುರು ಎನ್. ಪಂಪಾಪತಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಶಾಲೆಗೆ ತಪ್ಪದೇ ಬರುವಂತೆ ಮಾಡುವ ಹೆಚ್ಚಿನ ಕರ್ತವ್ಯ ಪೋಷಕರದ್ದಾಗಿದೆ. ನಮ್ಮ ಶಾಲೆಯ ಉತ್ತಮ ಫಲಿತಾಂಶಕ್ಕಾಗಿ ನಾವು ಹೆಚ್ಚು ಶ್ರಮವಹಿಸಿ ವಿದ್ಯೆ ಕಲಿಸುತ್ತೇವೆ. ಆದರೆ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸುವುದೂ ಅನಿವಾರ್ಯವಾಗಿದೆ.  ಸಂಸ್ಥೆಯಿಂದ ಗ್ರಾಮೀಣ ಮಟ್ಟದಲ್ಲಿ ಕಡಿಮೆ ಶುಲ್ಕದೊಂದಿಗೆ, ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಾರ್ಥಕ ಸೇವೆ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಭಜಂತ್ರಿರಮೇಶ್ ಮಾತನಾಡಿ ಶಾಲೆಯಲ್ಲಿ ಕಲಿತವರು ಹೆಚ್ಚುಜನ ಉತ್ತಮ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಹಳೆಯ ವಿದ್ಯಾರ್ಥಿಗಳೂ ಸಂಸ್ಥೆಯ ಜೊತೆಗಿರುತ್ತಾರೆಂದು ತಿಳಿಸಿದರು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಿ.ಎನ್.ಉಮಾಪತಿ, ಗ್ರಾ.ಪಂ.ಸದಸ್ಯ ವಿ.ಅನಿಲ್, ನಿವೃತ್ತ ಮು.ಗುರು ಜೆ.ರಾಣಪ್ಪ, ಮುಖಂಡರಾದ ಜಿ.ಸಂಪತ್‍ಕುಮಾರ್, ಹಳ್ಳಿಮರದವೀರೇಶ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಲಕ್ಷ್ಮಣಭಂಡಾರಿ, ಸಂಸ್ಥೆಯ ಖಜಾಂಚಿ ವೀರೇಶಗೌಡ, ಸದಸ್ಯ ಗೋಡೆ ಪಂಪಾಪತಿ, ಸಂಸ್ಥೆಯ ಹಿ.ಪ್ರಾ.ಶಾಲೆ ಮುಖ್ಯಗುರು ಕಾರೆಶಾಂತಮ್ಮ, ಉಭಯ ಶಾಲೆಗಳ ಸಹ ಶಿಕ್ಷಕರು, ಪೋಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.