ಸಿರಿಗೇರಿಯಲ್ಲಿ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಮೆರವಣಿಗೆ

”ಸಂಜೆವಾಣಿ ವಾರ್ತೆಸಿರಿಗೇರಿ ಆ.17. ಗ್ರಾಮದ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಆಗಸ್ಟ್ 15 ರಂದು ಸ್ವಾತಂತ್ರ ದಿನಾಚರಣೆ ಅಂಗವಾಗಿ ಹೋರಾಟಗಾರ ವೀರ ಸಂಗೊಳ್ಳಿರಾಯಣ್ಣನ ಭಾವಚಿತ್ರವನ್ನು ಸಂಭ್ರಮದಿಂದ ಮೆರವಣಿಗೆ ಮಾಡಲಾಯಿತು. ಟ್ರಾಕ್ಟರ್‍ನಲ್ಲಿ ಭಾವಚಿತ್ರ ಇಟ್ಟು 7ನೇ ವಾರ್ಡಿನ ಬೀರಪ್ಪಸ್ವಾಮಿ ದೇವಸ್ಥಾನದಿಂದ ಜನತಾ ಕಾಲೋನಿ ವರೆಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಮರಳಿತು. ಯುವಕರು ಬಂಡಾರ ಹಚ್ಚಿಕೊಂಡು ವೀರ ಸಂಗೊಳ್ಳಿ ರಾಯಣ್ಣನ ದೇಶಪ್ರೇಮದ ಕುರಿತು ಘೋಷಣೆಗಳನ್ನು ಕೂಗಿದರು. ಗ್ರಾಮದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡು ಚಾಲನೆ ನೀಡಿದರು. ಸಂಘದ ಮುಖಂಡರಾದ ಬಿ.ಚಂದ್ರಪ್ಪ, ಬಿ.ವೇಮಣ್ಣ, ಗಾದಿಲಿಂಗಪ್ಪ, ಪೂಜಾರಿಸಿದ್ದಯ್ಯ, ಸಣ್ಣಮಲ್ಲಯ್ಯ, ಈಶ್ವರ, ರಾಕೇಶ, ಹಾಗಲೂರಪ್ಪ, ಪಂಪಾಪತಿ, ಆರ್.ಶಿವು. ಹೊನ್ನೂರಪ್ಪ, ಪಾಂಡುರಂಗ, ಉಪ್ಪಳಪ್ಪ, ಪಂಪಯ್ಯ, ಯಲ್ಲಪ್ಪ, ನಾಡಗೌಡ್ರ ಗಾದಿಲಿಂಗಪ್ಪ, ಗೋಸುಬಾಳ ರುದ್ರಪ್ಪ, ಚೌಡ್ಕಿ ನಾಗರಾಜ, ಉಮೇಶ, ರಾಜಶೇಖರ, ಆನಂದ, ಪವನ್, ಶಿವಶಂಕರ, ಬಳ್ಳೊಳ್ಳಿರಮೇಶ, ಪ್ರಕಾಶ ಹಾಗೂ ಹಾಲುಮತ ಸಮಾಜದ ಹಿರಿಯ ಮುಖಂಡರು, ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.