
ಸಂಜೆವಾಣಿ ವಾರ್ತೆ
ಸಿರಿಗೇರಿ ಆ14. ನಿನ್ನೆ ಆ.13 ರವಿವಾರ ಸಂಜೆ ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ತಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಧಾತ್ರಿ ರಂಗಸಂಸ್ಥೆ ಸಿರಿಗೇರಿ ಇವರು ಸಹಯೋಗದೊಂದಿಗೆ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗಳ ಅಡಿಯಲ್ಲಿ ಸೋರುತಿಹುದು ಸಂಬಂಧ ಎನ್ನುವ ಸಾಮಾಜಿಕ ನಾಟಕ ಪ್ರದರ್ಶನ ಮತ್ತು ಜಾನಪದ ಕಂಸಾಳೆ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು. ನೃತ್ಯ ಕಲಾವಿದರಾದ ಅಕ್ಷತಾ, ಶ್ರವಂತ್, ಶೈಲಜಾ, ಶ್ರೀನಿವಾಸ್, ಸಾಗರ್, ವೈಷ್ಟವಿ, ನಯನ, ಚೈತನ್ಯ, ಇವರು ಕಂಸಾಳೆ ನೃತ್ಯವನ್ನು ಪ್ರೇಕ್ಷಕರು ಮೆಚ್ಚಿ ಕೊಂಡಾಡಿದರು. ಸಿರಿಗೇರಿ ರಾಜಶೇಖರ, ಮಂಜುನಾಥ, ಪ್ರತಿಭಾ, ಟಿ.ಎಂ.ಶಿವಾಲಿ ಜೆ.ಕರಿಯಪ್ಪ ಕವಲೂರು ಇವರು ನೃತ್ಯಕ್ಕೆ ಸಹಕರಿಸಿದ್ದರು. ಉಪನ್ಯಾಸದ ನಂತರ ಮಹಾಂತೇಶ ರಾಮದುರ್ಗ ಇವರ ರಚನೆ ಮತ್ತು ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಂಡಿತು.ಲ ಬಳ್ಳಾರಿ, ಕಂಪ್ಲಿ, ಕುರುಗೋಡು ನಗರಳಿಂದ ನಾಟಕ ಅಭಿಮಾನಿಗಳು ಬಂದು ನಾಟಕ ವೀಕ್ಷಿಸಿದ ಸಾವಿರಾರು ಪ್ರೇಕ್ಷಕರು, ಕಲಾವಿದರ ಉತ್ತಮ ಅಭಿಯನಗಳನ್ನು ಮೆಚ್ಚಿ ಪ್ರೋತ್ಸಾಹಿಸಿದರು. ಧಾತ್ರಿರಂಗ ಸಂಸ್ಥೆಯ ಅಧ್ಯಕ್ಷ ಎಂ.ಪಂಪನಗೌಡ, ಹೂಗಾರ್‍ಬಸವರಾಜ ಇವರು ಪ್ರಾರಂಭದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಧಾತ್ರಿ ರಂಗಸಂಸ್ಥೆಯ ಚಟುವಟಿಕೆಗಳನ್ನು ಮೆಚ್ಚಿ ಮಾತನಾಡಿದರು. ಟಿ.ಗುರುದೇವ, ಜೀನ್ಸ್‍ಬಸವರಾಜ, ವಿ.ಷಣ್ಮುಖ, ಇವರು ಉಪಸ್ಥಿತರಿದ್ದರು. ಕಲಾವಿದ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.