ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ29. ಗ್ರಾಮದಲ್ಲಿ ನಿನ್ನೆ ಸಂಜೆ ಯುಗಾದಿ ಕಳೆದು 7ದಿನಗಳ ನಂತರ ಅಂದರೆ ಸಪ್ತಮಿಯ ದಿನದಂದು, ಗ್ರಾಮದ ಆದಿದೇವ ಶ್ರೀನಾಗನಾಥೇಶ್ವರನ ಜಾತ್ರೆಯು ಸಂಬ್ರಮದಿಂದ ನಡೆಯಿತು. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಹಸ್ರಾರು ಸಂಖ್ಯೆಯ ಜನ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಗ್ರಾಮಾಡಳಿತ, ಪೋಲೀಸ್ ಇಲಾಖೆ, ಗ್ರಾಮದ ಮುಖಂಡರು, ಸಂಘಟನೆಗಳ ಮುಖಂಡರು, ಯುವಕರು, ದೇವಸ್ಥಾನದ ಸಮಿತಿಯವರು ರಥೋತ್ಸವದಲ್ಲಿ ಪಾಲ್ಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಿದರು. ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕಗಳು ನಡೆದವು. ಗ್ರಾಮದ ಮತ್ತು ಪರಊರಿನ ಗ್ರಾಮಗಳ ಭಕ್ತರು ಬೆಳಗ್ಗೆಯಿಂದ ಸಂಜೆಯವರೆಗೂ ದೇವಸ್ಥಾನಕ್ಕೆ ಬಂದು ಕಾಯಿ ಕರ್ಪೂಗಳನ್ನು ಅರ್ಪಿಸಿದರು. ಜಾತ್ರೆಯ ಅಂಗವಾಗಿ ನಾಗನಾಥೇಶ್ವರ ಆವರಣದಲ್ಲಿ ಮತ್ತು 4ನೇ ವಾರ್ಡಿನ ತಗ್ಗಿನ ಪ್ರದೇಶದಲ್ಲಿ ಪ್ರತ್ಯೇಕವಾಗಿ 2 ಬಯಲಾಟಗಳನ್ನು ಪ್ರದರ್ಶಿಸಲಾಯಿತು.