ಸಿರಿಗೇರಿಯಲ್ಲಿ ಶಿಕ್ಷಕರ ದಿನಾಚರಣೆ ಪೂರ್ವಭಾವಿ ಸಭೆ”

ಸಂಜೆವಾಣಿ ವಾರ್ತೆಸಿರಿಗೇರಿ ಆ12. ಮುಂಬರುವ ಸೆಪ್ಟಂಬರ್ 05 ಶಿಕ್ಷಕರ ದಿನಾಚರಣೆ ಅಂಗವಾಗಿ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸ್ಥಳೀಯ ಕೆಲ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪ್ರಥಮ ಪೂರ್ವಭಾವಿ ಸಭೆ ಇಂದು ನಡೆಸಲಾಯಿತು. ಸ.ಹಿ.ಪ್ರಾ.(ದೇವಸ್ಥಾನ) ಶಾಲೆ ಹತ್ತಿರ ಕರೆದಿದ್ದ ಸಭೆಯಲ್ಲಿ ಸ್ಥಳೀಯ ಸಂಘಟನೆಗಳ ಮುಖಂಡರು ಪಾಲ್ಗೊಂಡು, ಶಿಕ್ಷಕರ ದಿನಾಚರಣೆ ಮಾಡುವ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಸಿರಿಗೇರಿ ಮತ್ತು ಎಂ.ಸೂಗೂರು ಎರಡೂ ಕ್ಲಸ್ಟರ್‍ಗಳ ಸುಮಾರು 200 ಶಿಕ್ಷಕರನ್ನು, ಸ್ಥಳೀಯ 14ಜನ ಅಂಗನವಾಡಿ ಶಿಕ್ಷಕರನ್ನು ಒಗ್ಗೂಡಿಸಿಕೊಂಡು, ಅವರಿಗೆ ಸ್ಪರ್ಧಾತ್ಮಕ ಚಟುವಟಿಕೆಯ ಆಟಗಳನ್ನು ನಡೆಸುವುದು, ಉಪಹಾರ ಅಥವಾ ಔತಣ ಏರ್ಪಡಿಸುವುದು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸುವುದು ಸೇರಿ ಇತರೆ ವಿಷಯಗಳನ್ನು ಚರ್ಚೆ ನಡೆಸಿದರು. ಸ್ಪರ್ಧೆ, ಕ್ರೀಢೆಗಳನ್ನು ನಡೆಸುವ ಸ್ಥಳ ಮತ್ತು ದಿನಾಂಕವನ್ನು ಕೆಲದಿನಗಳಲ್ಲಿ ನಿರ್ಧರಿಸಲಾಗುವುದು ಎಂದ ಮುಖಂಡರು ಮಾಹಿತಿ ನೀಡಿದರು. ಸ್ಥಳೀಯ ಸಂಘಟನೆಗಳಾದ ಕರುನಾಡ ಸ್ವಾಭಿಮಾನಿ ಸೇವಾ ಸಂಘ, ವಿನಾಯಕ ಯುವಕ ಸಂಘ, ನಿರಂತರ ಯುವ ಕ್ರೀಢಾ ಸಂಘ, ವಂದೇಮಾತರಂ ಸಂಘ, ಅನಿಕೇತನ ಯುವಜನ ವೇದಿಕೆ ಸಂಘಟನೆಗಳ ಯುವ ಮುಖಂಡರಾದ ಕೆ.ಸುರೇಶ, ಹಳ್ಳಿಮರದಹನುಮಂತ, ವಿ.ಹನುಮೇಶ, ಬುಚ್ಚುಗತ್ತಿಹನುಮಂತ, ಸದ್ದಾಂಹುಸೇನ್, ಎನ್.ಕುಮಾರ, ಹಳ್ಳೀಮರದನಾಗರಾಜ, ಶಿಕ್ಷಕರಾದ ಟಿ.ಎಚ್.ಶೆಕ್ಷಾವಲಿ, ಮಂಜುನಾಥ, ಕೆ.ಶಿವಾಜಿ, ವಕೀಲ ರಾಂಬಾಬು ಇವರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.
One attachment • Scanned by Gmail