“ಸಿರಿಗೇರಿಯಲ್ಲಿ ವೀಡಿಯೋ ಪ್ಲೇ ಮೂಲಕ ಕ್ಷಯರೋಗ ತಡೆ ಜಾಗೃತಿ ಕಾರ್ಯ”


ಸಂಜೆವಾಣಇ ವಾರ್ತೆ
ಸಿರಿಗೇರಿ ಮೇ.27. ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸ್ಥಳೀಯ 1ನೇ ವಾರ್ಡಿನಲ್ಲಿ ವಿಶೇಷವಾಗಿ ಮಹಿಳೆಯರಿಗೆ ವೀಡಿಯೋ ಪ್ಲೇ ಮುಖಾಂತರ ಕ್ಷಯರೋಗ ನಿರ್ಮೂಲನೆ ಜಾಗೃತಿ ಮೂಡಿಸಲಾಯಿತು. ಮೇ.26 ರಂದು ಸಿರಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕ್ಷಯರೋಗ ತಡೆ ಜಾಗೃತಿ ಮೂಡಿಸುವ ಜವಾಬ್ದಾರಿ ಹೊತ್ತ ಪಿ.ಜಿ.ಡಿ.ಎಚ್.ಪಿ.ಇ ಪ್ರಶಿಕ್ಷಣಾರ್ಥಿ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್‍ಬೇಗಂ ಇವರು ಲ್ಯಾಪಟಾಪ್ ವೀಡಿಯೋ ಮುಖಾಂತರ ದೃಶ್ಯಗಳನ್ನು ಪ್ರದರ್ಶಿಸುವ ಮೂಲಕ ಕ್ಷಯರೋಗ ಹರಡುವ ಬಗೆ, ಆ ರೋಗದ ಲಕ್ಷಣಗಳು, ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು, ಚಿಕೆತ್ಸೆ ಪಡೆಯುವ ಮೂಲಕ ಗುಣಪಡಿಸಿಕೊಳ್ಳುವುದು ಇತರೆ ಮಾಹಿತಿಗಳನ್ನು ಮಹಿಳೆಯಿರಿಗೆ, ಜನರಿಗೆ ನೀಡಿ ಕ್ಷಯರೋಗ ತಡೆಗಟ್ಟುವ ಕುರಿತು ಮಾಹಿತಿ ನೀಡಿದರು. ಇದೇವೇಳೆ ಆರೋಗ್ಯ ನಿರೀಕ್ಷಣಾ ಅಧಿಕಾರಿ ಸತೀಶ್ ಮಾತನಾಡಿ ಯಾವುದೇ ರೋಗವನ್ನು ಉದಾಸೀನ ಮಾಡಬಾರದು, ಆರಂಭದಲ್ಲಿಯೇ ಸೂಕ್ತ ಚಿಕಿತ್ಸೆಯನ್ನು ಪಡೆಯುವ ಮೂಲಕ ಬೇಗನೇ ಗುಣಮುಖರಾಗಬಹುದು. ಕ್ಷಯರೋಗ ಸಾಂಕ್ರಾಮಿಕ ರೋಗವಾಗಿರುವುದರಿಂದ ಬಹಳ ದಿನಗಳವರೆಗಿನ ಅತಿಯಾದ ಕೆಮ್ಮು, ಜ್ವರ, ತಲೆನೋವು ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಕಫ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು. ಆಶಾಕಾರ್ಯಕರ್ತೆ ಈರಮ್ಮ, ನಾಗವೇಣಿ, ನೀಲಮ್ಮ, 2ನೇ ವಾರ್ಡಿನ ಮಹಿಳೆಯರು ಇದ್ದರು.