ಸಿರಿಗೇರಿಯಲ್ಲಿ  ವಿಧಾನಪರಿಷತ್ ಸದಸ್ಯ ವೈ.ಯಂ.ಸತೀಶ್ ರವರಿಂದ ವಿಜಯ ಸಂಕಲ್ಪ ಅಭಿಯಾನ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜ21. ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿ ನಿನ್ನೆ ಸಂಜೆ 4ಗಂಟೆಗೆ ಬಳ್ಳಾರಿ ವಿಧಾನಪರಿಷತ್ ಸದಸ್ಯ ವೈ.ಯಂ.ಸತೀಶ್ ರವರು ಬಿಜೆಪಿ ಪಕ್ಷದ 2ನೇ ಹಂತದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದರು. ಗ್ರಾಮದ ಬಿಜೆಪಿ ಹಿರಿಯ ಮುಖಂಡ ಜೆ.ಮಲ್ಲಿಕಾರ್ಜುನಗೌಡ ಇವರ ಮನೆಮೇಲೆ ಬಿಜೆಪಿ ಪಕ್ಷದ ಬಾವುಟವನ್ನು ಕಟ್ಟಿ, ಪಕ್ಷದಿಂದ ಕೈಗೊಂಡ ಜನಪರ ಕೆಲಸಗಳ ಮಾಹಿತಿ ಇರುವ ಕರಪತ್ರವನ್ನು ಜನರಿಗೆ ಹಂಚಿದರು. ಇದೇವೇಳೆ ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿಯವರೆಗೆ ಪೂರೈಸಿದ್ದು, ಅವುಗಳ ಮಾಹಿತಿಯನ್ನು ಜನರ ಮನೆ ಬಾಗಿಲಿಗೆ ತಲುಪಿಸಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ಸಹಕರಿಸಬೇಕೆಂದು ನೇರವಾಗಿ ಜನರ ಬಾಗಿಲಿಗೆ ಹೋಗಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಪಕ್ಷದ ಉಪಾಧ್ಯಕ್ಷ ಗಾಳಿಶಂಕ್ರಪ್ಪ ಕರಪತ್ರದಲ್ಲಿನ ಅಭಿವೃದ್ದಿಪರ ಕೆಲಸಗಳ ಮಾಹಿತಿಯನ್ನು ನೀಡಿದರು. ಜಿಲ್ಲಾ ರೈತಮೋರ್ಛಾ ಅಧ್ಯಕ್ಷ ಗುಂಡಿಗನೂರು ಪ್ರಕಾಶಗೌಡ ತಮ್ಮ ಪಕ್ಷದಿಂದ ರೈತರಿಗೆ ಕೇಂದ್ರ ಸರ್ಕಾರದಿಂದ ಕೈಗೊಂಡಿರುವ ಕೃಷಿ ಉತ್ತೇಜನ ಕಾರ್ಯಕ್ರಮಗಳ ಕುರಿತು ತಿಳಿಸಿದರು.
ಇದೇವೇಳೆ ಅಭಿಯಾನಕ್ಕೂ ಮುಂಚೆ ಗ್ರಾಮಕ್ಕೆ ಆಗಮಿಸಿದ ಎಂಎಲ್‍ಸಿ ಸತೀಶ್‍ರವರು ನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಪೂಜೆ ನೆರವೇರಿಸಲಾಗಿದ್ದ ಸಿದ್ದಗಂಗಾ ಮಠದ ಶ್ರೀಶಿವಕುಮಾರಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಛನೆ ಮಾಡಿ ನಮಸ್ಕರಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ಅಭಿಯಾನದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಆರ್.ಸಿ.ಪಂಪನಗೌಡ ಮಾತನಾಡಿ ಸಿರುಗುಪ್ಪ ತಾಲೂಕಿನಲ್ಲಿ ಈಹಿಂದೆ ಕಾಣದ ಆಭಿವೃದ್ಧಿಯನ್ನು ನಮ್ಮ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪರವರು ಮಾಡಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸವನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಾಡಿರುವ ಅಭಿವೃದ್ಧಿಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು. ಪಕ್ಷದ ಜಿಲ್ಲಾ ಮುಖಂಡರು, ತಾಲೂಕು ಮುಖಂಡರು, ಸ್ಥಳೀಯ ಮುಖಂಡರಾದ ಜೆ.ಮಲ್ಲಿಕಾರ್ಜುನಗೌಡ, ಪ್ರಕಾಶಗೌಡ, ಎಸ್.ಎಂ.ಅಡಿವೆಯ್ಯಸ್ವಾಮಿ, ಬಿ.ಅಮರೇಶಗೌಡ, ಬಕಾಡೆಈರಯ್ಯ, ಡ್ರೈವರ್‍ಹುಲುಗಪ್ಪ, ಪೂಜಾರಿಸಿದ್ದಯ್ಯ, ನಾಗರಾಜಗೌಡ, ಬಿ.ಕೊಮಾರೆಪ್ಪ, ಎಚ್.ರಾಮಚಂದ್ರಪ್ಪ, ಎಚ್.ಭೀಮೇಶ್, ಕುಮಾರಗೌಡ, ಗಜಾನನಸ್ವಾಮಿ, ಚಾನಾಳ್‍ಜಡೆಪ್ಪ, ಎನ್.ವಿರುಪಾಕ್ಷಿ, ಮುದೆಪ್ಪ, ರಾಘವೇಂದ್ರ, ವಿ.ಹನುಮೇಶ್, ಬಿಜೆಪಿ ಬೆಂಬಲಿತ ಗ್ರಾ.ಪಂ.ಸದಸ್ಯರು ಕಾರ್ಯಕರ್ತರು ಪಾಲ್ಗೊಂಡಿದ್ದರು.