ಸಿರಿಗೇರಿಯಲ್ಲಿ ಮೊಹರಂ ಹಬ್ಬದ ಆಚರಣೆ ಕುರಿತು ಶಾಂತಿಸಭೆ”   


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ28. ಗ್ರಾಮದ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಮೊಹರಂ ಹಬ್ಬದ ಆಚರಣೆ ಕುರಿತು ಗ್ರಾಮದ ಮುಖಂಡರ ಸಮಕ್ಷಮದಲ್ಲಿ ಶಾಂತಿಸಭೆ ನಡೆಸಲಾಯಿತು. ಸಭೆಯಲ್ಲಿ ಪಿಎಸ್‍ಐ ಭರತ್‍ಪ್ರಕಾಶ್ ಮಾತನಾಡಿ ಗ್ರಾಮದಲ್ಲಿ ಮೊಹರಂ ಹಬ್ಬ ನಿಷೇಧವಿದೆ. ಮೇಲಧಿಕಾರಿಗಳಿಂದ ಕಟ್ಟುನಿಟ್ಟಾಗಿ ಆದೇಶವಿರುವುದರಿಂದ ಹಬ್ಬವನ್ನು ಆಚರಿಸುವಂತಿಲ್ಲ. ಅಲಾಯಕುಣಿ ತೊಡುವುದು, ಪೀರಲದೇವರು ಪ್ರತಿಷ್ಠಾಪಿಸುವುದು, ಹಲಗೆ ಹೊಡೆಯುವುದು, ಕುಣಿಯುವುದು ಯಾವುದಕ್ಕೂ ಅವಕಾಶವಿಲ್ಲ. ಗ್ರಾಮದಲ್ಲಿ 2006 ರಿಂದ ಮೊಹರಂ ನಿಷೇಧವಿದೆ. ಈನಿಟ್ಟಿನಲ್ಲಿ ನಮಗೆ ಅದೇಶ ಬಂದಿದೆ. ಆದೇಶದ ಮದ್ಯೆಯೂ ಹಬ್ಬದ ಆಚರಣೆ ನೆಪದಲ್ಲಿ ಯಾವುದೇ ಸಣ್ಣ ಗಲಾಟೆ ನಡೆಸಿದರೂ ಅಂತಹ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ತಿಳಿಸಿದರು. ಇದೇವೇಳೆ ಗ್ರಾಮದಲ್ಲಿನ 5 ಮಸೀದಿಗಳ ಮುತವಲ್ಲಿಗಳನ್ನು ಪ್ರತ್ಯೇಕವಾಗಿ ಕರೆಸಿ ದೇವರು ಕೂಡಿಸುವುದು, ಅಲಾಯ ಕುಣಿ ತೆಗೆಯವುದು ಮಾಡಿದರೆ ನಿಮ್ಮ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು. ಎಎಸ್‍ಐ ಗಂಗಣ್ಣ ಮತ್ತು ಸಿಬ್ಬಂದಿಯವರು, ಗ್ರಾಮದ ಎಲ್ಲಾ ಸಮುದಾಯದ ಮುಖಂಡರು, ಯುವಕರು ಸಭೆಯಲ್ಲಿ ಪಾಲ್ಗೊಂಡಿದ್ದರು. 

Attachments area