
ಸಂಜೆವಾಣಿ ವಾರ್ತೆ
ಸಿರಿಗೇರಿ ಜು 1. ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜು.01 ರಂದು ಮೊಬೈಲ್ ಕ್ವಿಜ್ ಸ್ಪರ್ಧೆ ಕಾರ್ಯಕ್ರಮದಡಿಯಲ್ಲಿ ವಿಜೇತರರಿಗೆ ಬಹುಮಾನ ವಿತರಣೆ ಮಾಡಲಾಯಿತು. ಗ್ರಾಮದ ವಕೀಲ ರಾಂಬಾಬು ಇವರು ಆಯೋಜಿಸಿದ್ದ ಮೊಬೈಲ್ ಆನ್‍ಲೈನ್ ಕ್ವಿಜ್ ಸ್ಪರ್ಧೆಯಲ್ಲಿ ಬಹುತೇಕ ಸರ್ಕಾರಿ ಶಾಲೆಗಳ ಶಿಕ್ಷಕರು ಪಾಲ್ಗೊಂಡು ಸತತ 15 ದಿನಗಳಿಂದ ಪ್ರತಿದಿನ ಹಾಕುವ ಒಂದು ಪ್ರಶ್ನೆಗೆ ಅತೀ ವೇಗವಾಗಿ ಉತ್ತರಿಸುವ ಮೂಲಕ ಸಕ್ರಿಯವಾಗಿ ತೊಡಗಿದ್ದರು. ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪೂಜಾರಿ ಲಕ್ಷ್ಮಮ್ಮಕರೆಪ್ಪ ಮತ್ತು ಗ್ರಾ.ಪಂ.ಉಪಾಧ್ಯಕ್ಷ ಎಚ್.ಎರೆಪ್ಪ, ಸಿಆರ್‍ಪಿ ಅರುಣಕುಮಾರ್, ವೈದ್ಯರಾದ ಡಾ.ಪೂಜಾರ್ ನಾಗರಾಜ್ ಮತ್ತು ಗ್ರಾ.ಪಂ.ಸದಸ್ಯರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಇದೇವೇಳೆ ಸಿಆರ್‍ಪಿ ಅರುಣ್‍ಕುಮಾರ್, ಎನ್.ಕುಮಾರ್, ಶಿಕ್ಷಕರಾದ ರಾಧಾ, ಅಂಜಿನಮ್ಮ, ಬಸವರಾಜ, ಉಮೇಶ್, ಬಿ.ಪುನಿತ್ ಮತ್ತು ಸಂಘಟನೆ ಮುಖಂಡ ಜೆ.ಎರಿಸ್ವಾಮಿ ಇವರು ಮಾತನಾಡಿ ಮೊಬೈಲ್ ಕ್ವಿಜ್ ಕಾರ್ಯಕ್ರಮದ ವ್ಯವಸ್ಥೆಯನ್ನು, ಸಮಯಪ್ರಜ್ಞೆಯ ಮಹತ್ವವನ್ನು, ಸಂಘಟನೆಗಳ ಪಾತ್ರವನ್ನು ತಿಳಿಸಿ ಮೊಬೈಲ್‍ಗಳನ್ನು ಅವಶ್ಯಕ್ಕೆ ತಕ್ಕಂತೆ ಮಾತ್ರ ಉಪಯೋಗಿಸಬೇಕೆಂದು ತಿಳಿಸಿದರು.
ವಕೀಲ ರಾಂಬಾಬು ಮಾತನಾಡಿ ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಜೀವಿಸುತ್ತಿದ್ದೇವೆ. ನಾವು ದಿನದಿನಕ್ಕೂ ಅಪ್‍ಡೇಟ್ ಆಗಬೇಕಿದೆ. ಮತ್ತು ಸದ್ಬಳಕೆ ಮಾಡುವ ಬಗೆಯನ್ನು ತಿಳಿಸಲು ಮೊಬೈಲ್ ಕ್ವಿಜ್ ಕಾರ್ಯಕ್ರಮ ನಡೆಸಲಾಯಿತು. ಶಿಕ್ಷಣ ಒಂದು ಪ್ರಮುಖವಾದ ಅಸ್ತ್ರ ಇದರ ಉಪಯುಕ್ತತೆ ಅರಿತು ಶಿಕ್ಷಣ ಕೊಡಿಸಬೇಕು ಎಂದು ಕರೆನೀಡಿದರು. ನಂತರ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ ಶಿಕ್ಷಕಿ ಅಂಜಿನಮ್ಮಪರಶುರಾಮ್, ದ್ವಿತೀಯ ಸ್ಥಾನದ ಶಿಕ್ಷಕ ಬಸವರಾಜ್, ತೃತೀಯ ಸ್ಥಾನವನ್ನು ಬಸವರಾಜ್ ತೆಕ್ಕಲಕೋಟೆ ಇವರು ಪಡೆದುಕೊಂಡು ಬಹುಮಾನ ಸ್ವೀಕರಿಸಿದರು. ಇದೇವೇಳೆ ಡಾಕ್ಟರ್ಸ್ ಡೇ ಪ್ರಯುಕ್ತ ಸಿರಿಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಪೂಜಾರ್‍ನಾಗರಾಜ ರವರನ್ನು, ಪತ್ರಿಕಾ ದಿನಾಚರಣೆ ಅಂಗವಾಗಿ ಸ್ಥಳೀಯ ಪತ್ರಕರ್ತರನ್ನು ಸಂಘಟನೆಗಳ ಮುಖಂಡರು ಸನ್ಮಾನಿಸಿ ಗೌರವಿಸಿದರು. ಗ್ರಾ.ಪಂ.ಸದಸ್ಯ ಗುಡಟ್ಟಿಈರಣ್ಣ, ಎಫ್‍ಡಿಎ ಹನುಮಂತಪ್ಪ, ಸದ್ದಾಂ, ಮಹೇಶ್ ಇವರು ಬಹುಮಾನಗಳನ್ನು ವೈಯುಕ್ತಿಕವಾಗಿ ನೀಡಿದರು. ಸಂಘಟನೆಗಳ ಮುಖಂಡರಾದ ಮಾಡಲ್ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಬಿಚಗತ್ತಿ ಹನುಮಂತ, ಜೆ.ಎರಿಸ್ವಾಮಿ, ಶ್ರೀರಾಮ್, ಖಾಜಾಪೀರ್, ಸದ್ದಾಮ್, ಬಳ್ಳಾರಿಈರೇಶ್, ವಿ.ಮುದೆಪ್ಪ, ಇತರರು ಪಾಲ್ಗೊಂಡಿದ್ದರು.