“ಸಿರಿಗೇರಿಯಲ್ಲಿ ಬಸವಜಯಂತಿ ಪ್ರಯುಕ್ತ ಯೋಗ ಮತ್ತು ಪ್ರವಚನ ಕಾರ್ಯಕ್ರಮ”  


ಸಂಜೆವಾಣಿ ವಾರ್ತೆ
ಸಿರಿಗೇರಿ.ಮೇ,6. ಗ್ರಾಮದಲ್ಲಿ ಬಸವೇಶ್ವರ ಜಯಂತಿ ಪ್ರಯುಕ್ತ ಸಾರ್ವಜನಿಕರಿಗಾಗಿ 7ದಿನಗಳವರೆಗೆ, ಯೋಗ ಮತ್ತು ಶರಣರ ದರ್ಶನ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸ್ಥಳೀಯ ಶ್ರೀಬಸವ ಬಳಗ ಸಿರಿಗೇರಿ ಟ್ರಸ್ಟ್, ಧಾತ್ರಿ ರಂಗ ಸಂಸ್ಥೆ, ಮತ್ತು  ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಸಿರಿಗೇರಿ, ವೀರಶೈವ ಲಿಂಗಾಯತ ಸಮಾಜ ಇವರ ಸಂಯುಕ್ತಾ ಆಯೋಜನೆಯಲ್ಲಿ, ಬೆಳಿಗ್ಗೆ 5-30 ರಿಂದ ಜೆಎಚ್‍ವಿ ಶಾಲೆ ಆವರಣಲ್ಲಿ ಯೋಗ ಗುರು ಶ್ರೀ ಲೋಕೇಶ ಇವರ ಮಾರ್ಗದರ್ಶನದಲ್ಲಿ ಸಾಮೂಹಿಕ ಯೋಗ ಶಿಬಿರ, ಸಂಜೆ 7 ರಿಂದ 8 ಗಂಟೆಯವರೆಗೆ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಆವರಣಲ್ಲಿ ಅನುಭಾವಿಗಳಿಂದ ‘ಶರಣರ ದರ್ಶನ’ ಪ್ರವಚನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಮೇ 10 ರಂದು ಕಾಯಕಯೋಗಿ ಶ್ರೀ ಬಸವೇಶ್ವರರ ಸ್ಥಬ್ದಚಿತ್ರ ಮೆರವಣಿಗೆ, ಹಾಗೂ ಸಂಜೆ ‘ಅಕ್ಕ ನಾಗಲಾಂಬಿಕೆ’ ನಾಟಕ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮದ ಆಯೋಜಕರು ಮಾಹಿತಿ ನೀಡಿದ್ದಾರೆ. ಕಳೆದೆರಡು ದಿನಗಳಿಂದ ಪ್ರಾರಂಭಗೊಂಡ ಎರಡೂ ಕಾರ್ಯಕ್ರಮಗಳಲ್ಲಿ ಸ್ಥಳೀಯ ಮತ್ತು ಪಕ್ಕದ ಗ್ರಾಮಗಳ ಭಕ್ತರು, ಯುವಕರು ಪಾಲ್ಗೊಂಡಿದ್ದರು.

One attachment • Scanned by Gmail