ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ 4. ಗ್ರಾಮದ ಅಂಚೆ ಕಚೇರಿಯಲ್ಲಿ ಸತತ 37 ವರ್ಷಗಳಿಂದ ಪೋಸ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಿ. ಸೋಮಣ್ಣಶೆಟ್ಟಿ ಇವರು ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಂಚೆ ಇಲಾಖೆ ಸಿಬ್ಬಂದಿಗಳು ಅವರನ್ನು ಗೌರವಿಸಿ ಸನ್ಮಾನಿಸಿ ಬಿಳ್ಕೊಟ್ಟರು. ಗ್ರಾಮದ ದಿ.ನಾಗನಗೌಡ ಕಲಾ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಿ. ಸೋಮಣ್ಣಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೆವೇಳೆ ಅಂಚೆ ಇಲಾಖೆಯ ಬಳ್ಳಾರಿ ಜಿಲ್ಲಾ ಅಧಿಕ್ಷಕ ಅಧಿಕಾರಿ ಚಿತಕೋಟೆ ಇವರು ಮಾತನಾಡಿ ನಿವೃತ್ತರಿಗೆ ನಿವೃತ್ತ ಜೀವನ ಸುಖವಾಗಿರಲೆಂದು ಹಾರೈಸಿದರು. ನಿಕಟಪೂರ್ವ ಕಾಸಾಪ ತಾಲೂಕು ಅಧ್ಯಕ್ಷ ಎಸ್ಎಂ. ನಾಗರಾಜಸ್ವಾಮಿ ಮಾತನಾಡಿ, ಸೋಮಣ್ಣ ಶೆಟ್ಟಿಯವರು ತಮ್ಮ ಸೇವೆಯ ಕಾಲದಲ್ಲಿ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಜೀವ ವಿಮೆ ಅಥವಾ ಉಳಿತಾಯ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪಾಲಿಸಿಗಳನ್ನು ಮಾಡಿಸಿಕೊಳ್ಳುವಂತೆ ಜನರಿಗೆ ಪ್ರೇರಣೆ ನೀಡುತ್ತಿದ್ದರು ಎಂದು ತಿಳಿಸಿದರು. ನಂತರ ಈಗಾಗಲೇ ನಿವೃತ್ತಿಗೊಂಡ ಅಂಚೆ ಇಲಾಖೆಯ ಸಿಬ್ಬಂದಿಯವರು ಮಾತನಾಡಿ ತಮ್ಮ ಸೇವೆಯ ಕಾಲದ ದಿನಗಳನ್ನು ಮೆಲುಕು ಹಾಕುತ್ತಾ ಸೋಮಣ್ಣ ಶೆಟ್ಟಿಯವರ ನಿವೃತ್ತ ಜೀವನ ಸುಖವಾಗಿ ಇರಲೆಂದು ಹಾರೈಸಿದರು. ಸಿರಿಗೇರಿ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ರವೀಂದ್ರನಾಥ, ತೆಕಲಕೋಟೆ ಪೋಸ್ಟ್ ಮಾಸ್ಟರ್ ಧನಲಕ್ಷ್ಮಿ ಹಾಗೂ ಬೈಲೂರು ನಾರಾಯಣರಾವ್, ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಎಮ್ ಸೂಗೂರಿನ ಎಂ. ಬಸವರಾಜ ಸ್ವಾಮಿ. ಶಾಂತಮೂರ್ತಿ, ಹಾಗೂ ಗ್ರಾಮದ ಟಿಹೆಚ್ ಸುಭಾನಿ, ಅಂಚೆ ಪತ್ರ ವಿತರಕ ಎಚ್. ರಾಮಚಂದ್ರಪ್ಪ, ವಿವಿಧ ಗ್ರಾಮಗಳ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯವರು, ನಿವೃತ್ತಗೊಂಡ ಸೋಮಣ್ಣ ಶೆಟ್ಟಿಯವರ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.