ಸಿರಿಗೇರಿಯಲ್ಲಿ ಪಂ.ದೀನ್‍ದಯಾಳ್ ಉಪಾಧ್ಯಾಯರ ಜಯಂತಿ ಆಚರಣೆ”

ಸಂಜೆವಾಣಿ ವಾರ್ತೆ
ಸಿರಿಗೇರಿ. ಸೆ.25- ಸಿರಿಗೇರಿ ಜನತಾಕಾಲೋನಿಯಲ್ಲಿ, ಗ್ರಾ.ಪಂ. ಸದಸ್ಯೆ ಮತ್ತು ಕೃ.ಪ.ಸ.ಸಂಘದ ನಿರ್ದೇಶಕಿ ಎಸ್.ಲೀಲಾವತಿಬಸವರಾಜ ಇವರ ಮನೆಯ ಆವರಣದಲ್ಲಿ ಬಿಜೆಪಿ ಮುಖಂಡರಿಂದ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮೊದಲಿಗೆ ಭಾವಚಿತ್ರಕ್ಕೆ ಪೂಜೆ ನಡೆಸಿ ಪುಷ್ಪಾರ್ಚನೆ ಸಲ್ಲಿಸಿದ ನಂತರ ಹಿರಿಯ ಮುಖಂಡ ಜೆ.ಮಲ್ಲಿಕಾರ್ಜುನಗೌಡ ಮಾತನಾಡಿ ದಯಾಳರು ದೇಶದ ಆರ್ಥಿಕ ಸದೃಢತೆಗೆ ಒತ್ತು ನೀಡಿದವರು, ರೈತರ ಆರ್ಥಿಕ ಮಟ್ಟದ ಸುಧಾರಣೆಗೆ ಶ್ರಮಿಸಿದವರು, ಈಗ ಮೋದಿಯವರ ಆಡಳಿತದಲ್ಲಿ ಕೈಗೊಂಡಿರುವ ‘ಆತ್ಮ ನಿರ್ಭರ ಭಾರತ’ ಯೋಜನೆಯು ದಯಾಳರ ಚಿಂತನೆಯ ಒಂದು ಭಾಗವಾಗಿದೆ, ದೇಶಕ್ಕಾಗಿ ಅವಿರತ ದುಡಿದ ಇಂತಹ ನಾಯಕರನ್ನು ಪಕ್ಷಾತೀತವಾಗಿ ಗೌರವಿಸುವುದು ದೇಶದ ಎಲ್ಲಾ ಪ್ರಜೆಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.
ನಂತರ ಎಪಿಎಂಸಿ ಸದಸ್ಯ ಹಾಗಲೂರು ಮಲ್ಲನಗೌಡ ಮಾತನಾಡಿ ವಾಜಪೇಯಿ ರವರ ಒಡನಾಡಿಯಾಗಿದ್ದ ಇವರು ಅಂದಿನ ಸರ್ಕಾರ ಕೈಗೊಂಡ ಕೆಲವು ಜನಹಿತ ಕಾಪಾಡದ ನಿರ್ಣಯಗಳನ್ನು ಪ್ರಶ್ನೆ ಮಾಡಿದ ಧೀಮಂತ ನಾಯಕರು. ಪಕ್ಷದ ಸಂಘಟನೆ ಮತ್ತು ಸ್ಥಾಪನೆಗೆ ಇವರ ಕೊಡುಗೆ ಅಪಾರವೆಂದು ತಿಳಿಸಿದರು. ಮಾಜಿ ತಾ.ಪಂ.ಸದಸ್ಯ ಬಕಾಡೆ ಈರಯ್ಯ ಮಾತನಾಡಿ ಘಟ್ಟಿಯಾದ ಸಂಘಟನೆ ಕಟ್ಟಿ, ಕಾರ್ಯಕರ್ತರನ್ನು ಬೆಳೆಸಿ ದೇಶದ ಅಭಿವೃದ್ಧಿಯ ತತ್ವವನ್ನು ಸಾರಿದ ಇಂತಹ ಮಹನೀಯರ ಜಯಂತಿಯನ್ನು ಆಚರಿಸುವುದು, ಅವರು ಹಾಕಿಕೊಟ್ಟ ಅಭಿವೃದ್ಧಿ ಪಥದಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ, ಸರಳ ಜಯಂತಿಯಲ್ಲಿ ಪಾಲ್ಗೊಂಡ ಎಲ್ಲಾ ಮುಖಂಡರಿಗೆ ಧನ್ಯವಾದಗಳೆಂದು ತಿಳಿಸಿದರು.
ಕೊನೆಯಲ್ಲಿ ವಿ.ಹನುಮೇಶ ಮಾತನಾಡಿ ಪಂ.ದೀ.ದ.ಉಪಾದ್ಯಾಯರ ಜನನ, ಬಾಲ್ಯದ ದಿನಗಳು, ಬೆಳೆದು ಬಂದ ಹಾದಿ, ಸಂಘದಲ್ಲಿ ತೊಡಗಿಸಿಕೊಂಡು ಪಕ್ಷ ಸಂಘಟನೆ ಮಾಡಿದ ಕುರಿತು ವಿವರಿಸಿದರಲ್ಲದೆ ಇವರ ದ್ಯೇಯೋದ್ಧೇಶಗಳನ್ನು, ಯೋಜನೆಗಳನ್ನು ಮೋದಿಯವರು ಅತ್ಯಂತ ಪ್ರಭಾವಶಾಲಿಯಾಗಿ ಜಾರಿಗೆ ತರಲು ಶ್ರಮಿಸುತ್ತಿದ್ದಾರೆಂದು ತಿಳಿಸಿದರು. ಮುಖಂಡರಾದ, ಎಸ್.ಎಂ.ಅಡಿವೆಯ್ಯಸ್ವಾಮಿ, ಬಿ.ಅಮರೇಶಗೌಡ, ಅರ್.ನಾಗರಾಜಗೌಡ, ಎಸ್.ಬಸವರಾಜಗೌಡ, ಪೂಜಾರಿಸಿದ್ದಯ್ಯ, ಕಟ್ಟೆಗೌಡ್ರಮಲ್ಲಯ್ಯ, ಎಚ್.ರಾಮಚಂದ್ರಪ್ಪ, ಬಿ.ಹನುಮಂತ, ಕೊಳ್ಳಿಪವಾಡಿನಾಯ್ಕ, ಕಲ್ಗುಡಿಮುದೆಪ್ಪ, ಗುಡಟ್ಟಿಈರಣ್ಣ, ವಿ.ಶೇಕರಪ್ಪ, ಎಚ್.ಭೀಮೇಶ, ವಿ.ಮುದೆಪ್ಪ, ಭಜಂತ್ರಿರಮೇಶ, ಎಂ.ರಾಘವೇಂದ್ರ, ವಿ.ಅನಿಲ್‍ಕುಮಾರ, ಚಾಗನೂರುಜಡೆಪ್ಪ, ಚೌಡ್ಕಿವಸಂತ, ಎರಿಸ್ವಾಮಿ, ಖಾಜಪೀರ್, ವಿ.ಆದೆಪ್ಪ, ಎಸ್.ಸಂತೋಷ್ ಪಾಲ್ಗೊಂಡಿದ್ದರು.