ಸಿರಿಗೇರಿಯಲ್ಲಿ ತ್ರಿವಿಧ ದಾಸೋಹಿ ಶ್ರೀಶಿವಕುಮಾರ ಸ್ವಾಮಗಳ ಜಯಂತಿ ಆಚರಣೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಏ.1. ಗ್ರಾಮದ ಬಸವನಪೇಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಿದ್ದಗಂಗ ಮಠದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಮಹಸ್ವಾಮಿಗಳ 116ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಗ್ರಾಮದ ಮುಖಂಡರು, ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಿಸಿದರು. ದಲಿತ ವಿದ್ಯಾರ್ಥಿಪರಿಷತ್ ಜಿಲ್ಲಾ ಸಂಚಾಲಕ ಎಚ್.ಲಕ್ಷ್ಮಣಭಂಡಾರಿ ಪ್ರಾಸ್ತವಿಕ ಮಾತನಾಡಿ ಗುರುಗಳು ತೋರಿದ ಆದರ್ಶ ಜೀವನವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದರು. ಹಿರಿಯ ಮುಖಂಡರಾದ ಜೆ.ಮಲ್ಲಿಕಾರ್ಜುನಗೌಡ ಮಾತನಾಡಿ ಶ್ರೀಗಳು ಮಾನವರ ಮದ್ಯೆ ದೇವರಂತೆ ಬಾಳಿ ಸಾವಿರಾರು ಬಡ ಕುಟುಂಬಗಳಿಗೆ ದಾರಿದೀಪವಾಗಿದ್ದಾರೆಂದು ತಿಳಿಸಿದರು. ನಂತರ ಮುಖಂಡರಾದ ಬಕಾಡೆ ಈರಯ್ಯ, ಡ್ರೈವರ್‍ಹುಲುಗಪ್ಪ, ಬಯಲಾಟ ನಾಟಕ ಅಕಾಡೆಮಿ ಸದಸ್ಯ ಎಚ್.ತಿಪ್ಪೆಸ್ವಾಮಿ, ನಿವೃತ್ತಿ ಶಿಕ್ಷಕರಾದ ಎಚ್.ಎಂ.ಮಲ್ಲಿಕಾರ್ಜುನಸ್ವಾಮಿ ಗ್ರಾ.ಪಂ.ಉಪಾಧ್ಯಕ್ಷ ಭಜಂತ್ರಿ ರಮೇಶ್, ಶ್ರೀಶಂಭುಲಿಂಗೇಶ್ವರ ಟ್ರಸ್ಟ್ ಅಧ್ಯಕ್ಷ ಹೂಗಾರ್ ಬಸವರಾಜ, ಎಸ್‍ಡಿಎಂಸಿ ಅಧ್ಯಕ್ಷೆ ಶ್ರೀಮತಿ ಈರಮ್ಮ, ಎ.ಪಿ.ಹನುಮೇಶ್, ವಕೀಲರಾದ ರಾಂಬಾಬು, ಸುರೇಶ್, ಮು.ಗುರು ಸುಮಂಗಳಾಮೇಠಿ, ವಿ.ಹನುಮೇಶ್, ಮುಂತಾದವರು ಮಾತನಾಡಿ ಶ್ರೀಗಳ ಬಗ್ಗೆ, ಸಿದ್ದಗಂಗಾ ಮಠದ ಶಿಕ್ಷಣಕ್ರಾಂತಿಯ ಬಗ್ಗೆ, ಸಂಸ್ಕಾರ ಕಲಿತ ಹಳೆಯ ವಿದ್ಯಾರ್ಥಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಶ್ರೀಗಳಿಗೆ ನುಡಿನಮನ ಸಲ್ಲಿಸಿದರು. ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ ಕಾರ್ಯಕ್ರಮವನ್ನು ನಿರ್ವಹಿಸಿ ಮಠದಲ್ಲಿ ತಾವು ಶಿಕ್ಷಣ ಪಡೆದ ದಿನಗಳನ್ನು ಮೆಲುಕು ಹಾಕಿದರು. ಶ್ರೀಶಿವಕುಮಾರಸ್ವಾಮಿಗಳ ಭಕ್ತ, ಅಭಿಮಾನಿ ಖಾಜಾಪೀರ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಪಿಡಿಓ ಶಿವಕುಮಾರ್‍ಕೋರಿ, ಮುಖಂಡರಾದ ಪೂಜಾರಿಸಿದ್ದಯ್ಯ, ಬಿ.ಸೋಮಶೇಖರಪ್ಪ, ಆರ್.ನಾಗರಾಜಗೌಡ, ಡಾ.ತಿಪ್ಪೆಸ್ವಾಮಿರೆಡ್ಡಿ, ಗ್ರಾ.ಪಂ.ಸದಸ್ಯ ವಿ.ರಮೇಶ, ಇತರರು ಇದ್ದರು. ಗ್ರಾ.ಪಂ.ಸದಸ್ಯೆ ಶ್ರೀಮತಿ ಕೆ.ನೀಲಮ್ಮಬಸವರಾಜ್ ಅನ್ನ ದಾಸೋಹ, ಬಳಿಗಾರ್ ವೀರೇಶ್ ಸಿಹಿವಿತರಣೆ ವ್ಯವಸ್ಥೆ ಮಾಡಿದ್ದರು. ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.