ಸಿರಿಗೇರಿಯಲ್ಲಿ ಚರಂಡಿ ಸಮಸ್ಯೆ ಪರಿಶೀಲಿಸಿದ ಜಿ.ಪಂ. ಸಿಇಓ”


ಸಂಜೆವಾಣಿ ವಾರ್ತೆ
ಸಿರಿಗೇರಿ ಏ.22. ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ಅಭಿವೃದ್ಧಿಯಿಂದ ನೆನಗುದಿಗೆ ಬಿದ್ದು 3ನೇ ವಾರ್ಡಿನ ನಿವಾಸಿಗಳಿಗೆ ಸಮಸ್ಯೆಯಗಿರುವ ತೆರೆದ ಚರಂಡಿ ಅವ್ಯವಸ್ಥೆಯನ್ನು ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ್‍ಶರಣಪ್ಪ ಸಂಕನೂರ ಇವರು ಭೇಟಿ ನೀಡಿ ಪರಿಶೀಲಿಸಿದರು. ಸಮೀಪದ ಮಾಳಾಪುರ ಕೆರೆಯಲ್ಲಿ ನೂರಾರು ಕೂಲಿಕಾರ್ಮಿಕರಿಗೆ ಮತಜಾಗೃತಿ ಮೂಡಿಸಲು ಆಗಮಿಸಿದ ವೇಳೆ ಸಿರಿಗೇರಿಯ ಚರಂಡಿ ಸಮಸ್ಯೆಯನ್ನು ಇತ್ಯರ್ಥಪಡಿಸುವವರೆಗೆ ಮತದಾನ ಮಾಡುವುದಿಲ್ಲವೆಂದು ಅಧಿಕಾರಿಗಳಿಗೆ ಅರ್ಜಿಯನ್ನು ಹಾಕಿದ್ದ ನಿವಾಸಿಗಳ ಆಗ್ರಹದ ಹಿನ್ನೆಲೆಯಲ್ಲಿ ಭೇಟಿನೀಡಿ ಪರಿಶೀಲಿಸಿದರು. ಇದರ ಕ್ರಿಯಾ ಯೋಜನೆ ಪ್ರತಿಯು ಸಂಬಂಧಿಸಿದ ಇಂಜಿನಿಯರ್‍ಗಳಿಂದ ಕಛೇರಿಗೆ ಬಂದಿದೆ. ಅಗತ್ಯ ಅನುದಾನ ಕ್ರೂಢೀಕರಣ ಆದ ತಕ್ಷಣ ಈ ಒಳಚರಂಡಿ ವ್ಯವಸ್ಥೆಗೆ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದೆಂದು ತಿಳಿಸಿದರು. ಇದೇವೇಳೆ ತ್ಯಾಜ್ಯ ಬೆಳೆದು  ಅಪಾಯಕಾರಿಯಾಗಿರುವ ಗ್ರಾಮದ ಊರುಕೆರೆಯ ಆವಸ್ಥೆಯನ್ನೂ ಗಮನಿಸಿದರು. ತಾಲೂಕು ಪಂಚಾಯಿತಿ ಇಓ ಎಂ.ಬಸಪ್ಪ, ಪಿಡಿಓ ಶಿವಕುಮಾರ್‍ಕೋರಿ ಇತರೆ ಸಹಾಯಕ ಅಧಿಕಾರಿಗಳು, ಸಿಬ್ಬಂದಿಯವರು ಇದ್ದರು.