ಸಿರಿಗೇರಿಯಲ್ಲಿ ಕಸಾಪ ಚುನಾವಣೆ ಪ್ರಚಾರ

ಸಂಜೆವಾಣಿ ವಾರ್ತೆ
ಸಿರಿಗೇರಿ ನ.10: ಗ್ರಾಮದಲ್ಲಿ ನಿನ್ನೆ ಸಂಜೆ ಕಸಾಪ ಜಿಲ್ಲಾಧ್ಯಕ್ಷ ಸ್ಥಾನ ಆಕಾಂಕ್ಷಿ ಅಭ್ಯರ್ಥಿಯಾದ ವಿನೋದ.ಕೆ ರವರು ಪ್ರಚಾರ ನಡೆಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರನ್ನು ಭೇಟಿಯಾಗಿ ಮತ ಯಾಚಿಸಿ ಕಸಾಪ ಶೃಷ್ಠಿಯಾದಾಗಿನಿಂದ ಇಲ್ಲಿಯವರೆಗೂ ಯಾವೊಬ್ಬ ಮಹಿಳೆಯನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿಲ್ಲ, ಅದು ಈ ಅವಧಿಯಲ್ಲಿ ಸಾಕಾರಗೊಳಿಸಲು ತಮ್ಮ ನಿರ್ಧಾರ ಮಹತ್ವವಾಗಿದೆ, ಈ ಸಲ ನನಗೊಂದು ಅವಕಾಶ ಕಲ್ಪಿಸಿ ಕನ್ನಡ ತಾಯಿ ಸೇವೆಗೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು. ಮತ್ತು ಕನ್ನಡ ಸೇವೆಗಾಗಿ ಇಲ್ಲಿಯವರೆಗೆ ಸಾಹಿತಿಯಾಗಿ, ಪ್ರಕಾಶಕರಾಗಿ, ಉಪನ್ಯಾಸಕರಾಗಿ, ವಕೀಲರಾಗಿ ಮಾಡಿರುವ ಕೆಲಸಗಳ ಕುರಿತು ಕಸಾಪ ಸದಸ್ಯರಿಗೆ ತಿಳಿಸಿ ಇದೆ ನ.21 ರಂದು ನಡೆಯುವ ಕಸಾಪ ಜಿಲ್ಲಾಧ್ಯಕ್ಷ ರ ಚುನಾವಣೆಯಲ್ಲಿ ತಮಗೆ ಮತ ಹಾಕುವಂತೆ ಕೋರಿದರು.