
ಸಂಜೆವಾಣಿ ವಾರ್ತೆ
ಸಿರಿಗೇರಿ ಮೇ.26. ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಮೇ.24 ರಂದು ಬುಧವಾರ ಆರೋಗ್ಯ ಮತ್ತು ಇತರೆ ಇಲಾಖೆಗಳ ಸಹಯೋಗದಲ್ಲಿ ನಡೆದ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೆ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮಾಡಳಿತ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಿರಿಗೇರಿ, ಹಾಗೂ ಎಸ್‍ಎಪ್‍ಟಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶಿಬಿರದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಮಾತನಾಡಿ ಬಳ್ಳಾರಿ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಮಾಡುವುದು ನಮ್ಮ ಗುರಿ ಸಾಗುತ್ತಿದೆ. ಕ್ಷಯರೋಗಿಯು ಚಿಕಿತ್ಸೆ ಪಡೆಯದೇ ಇನ್ನೊಬ್ಬರ ಬಳಿ ಕೆಮ್ಮಿದಾಗ, ಸೀನಿದಾಗ, ಇತರರಿಗೆ ರೋಗ ಹರಡುವ ಸಾದ್ಯತೆ ಇದೆ. ಸೂಕ್ತ ಮುಂಜಾಗ್ರತೆವಹಿಸಿ ರೋಗ ನಿಯಂತ್ರಣಕ್ಕೆ ಕೈಜೋಡಿಸಬೇಕು. ಸಿರಿಗೇರಿ ಪ್ರಾ.ಆ.ಕೇಂದ್ರ ವ್ಯಾಪ್ತಿಯಲ್ಲಿ 22ಜನ ಕ್ಷಯರೋಗಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಪ್ರಶಿಕ್ಷಣಾರ್ಥಿ ಖುರ್ಷಿದ್‍ಬೇಗಂ ಇವರು ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಕ್ಷಯರೋಗದ ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದಾರೆ ಅವರಿಗೆ ಸಹಕರಿಸಬೇಕೆಂದು ಕೋರಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ಎಸ್.ಎಫ್.ಟಿ ಮಾರ್ಗದರ್ಶಕರಾದ ಈಶ್ವರ್ ದಾಸಪ್ಪನವರ್ ಮಾತನಾಡಿ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ ಗುಂಪುಸಭೆ, ಮನೆಭೇಟಿ, ಕಲಾತಂಡಗಳಿಂದ, ವೀಡಿಯೋ ವಾಹನದಿಂದ, ಪತ್ರಿಕೆ, ಜಾಥಾಗಳ ಮೂಲಕ ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಶಿಬಿರದಲ್ಲಿ ಸಿರಿಗೇರಿ ಮತ್ತು ಸುತ್ತಲಿನ ನಾನಾ ಗ್ರಾಮಗಳಿಂದ ಸಾರ್ವಜನಿಕರು, ನರೇಗಾ ಕೂಲಿಕಾರ್ಮಿಕರು ಪಾಲ್ಗೊಂಡು ಚಿಕಿತ್ಸೆ ಪಡೆದರು. ಇದೇವೇಳೆ ಗ್ರಾಮದ ಮುಖಂಡರು, ಸಂಘಟನೆಗಳ ಮುಖಂಡರು, ಗ್ರಾ.ಪಂ. ಸದಸ್ಯರು, ಪಿಡಿಓ ಶಿವಕುಮಾರ್‍ಕೋರಿ, ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿರೆಡ್ಡಿ, ಡಾ.ಪೂಜಾರ್‍ನಾಗರಾಜ್, ಎಸ್‍ಎಫ್‍ಟಿ ಮೇಲ್ವಿಚಾರಕರಾದ ಡಾ.ಮಂಜುನಾಥ, ಡಾ.ಬಿ.ಆರ್.ಅಂಬೆಡ್ಕರ್ ಫೆಲೋಶಿಪ್ ವಿಜೇತ ಸಂಶೋಧನಾ ವಿದ್ಯಾರ್ಥಿ ಈಶ್ವರ್. ಪ್ರಶಿಕ್ಷಣಾರ್ಥಿ ಖುರ್ಷಿದಾಬೇಗಂ, ಸಿಬ್ಬಂದಿಗಳಾದ ಚಿದಾನಂದ, ಸತೀಶ್, ಮೊಹಮ್ಮದ್‍ಖಾಸಿಂ, ಬೀಮರಾಜ್‍ರೆಡ್ಡಿ, ಅನ್ನದಾನಪ್ಪ, ಹುಲುಗಪ್ಪ, ಆಶಾಕಾರ್ಯಕರ್ತರು, ನರೇಗಾ ಕೂಲಿಕಾರ್ಮಿಕರು, ಸಾರ್ವಜನಿಕರು ಇದ್ದರು.