ಸಿರಿಗೇರಿಕ್ರಾಸ್ ನಲ್ಲಿ ಕಾರುಗಳಿಗೆ ಕಂಟಕವಾಗಿರುವ ರಸ್ತೆ ಗುಂಡಿ.


ಸಂಜೆವಾಣಿ ವಾರ್ತೆ
ಸಿರಿಗೇರಿ ಮೇ 15. ಸಮೀಪದ ಬಳ್ಳಾರಿ ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ, ಸಿರಿಗೇರಿಗೆ 8 ಕಿ.ಮೀ. ಅಂತರದಲ್ಲಿರುವ ಸಿರಿಗೇರಿ ಕ್ರಾಸ್ ನಲ್ಲಿ, ರಸ್ತೆ ಗುಂಡಿಯೊಂದು ಕಾರುಗಳಿಗೆ, ಆಟೋ ಮತ್ತು ಸಣ್ಣ ಗಾತ್ರದ ವಾಹನಗಳಿಗೆ ಕಂಟಕ ಪ್ರಾಯವಾಗಿ ಕಾಡುತ್ತಿದೆ. ಹೆದ್ದಾರಿ ರಸ್ತೆಯಿಂದ ಸಿರಿಗೇರಿಗೆ ತಿರುಗುವ ರಸ್ತೆಯಲ್ಲಿ ರೋಡ್ ಬ್ರೇಕರ್ ಹಾಕಿರುವ ಜಾಗದಲ್ಲಿ, ದೊಡ್ಡ ಕುಣಿಯೊಂದು ಉಂಟಾಗಿ ಆಗಾಗ ಕಾರ್ಗಳ ಬಂಪರ್ ಗಳು, ಆಟೋಗಳ ಬಂಪರ್ ಗಳು, ಬಾನೆಟ್ ಗಳು, ಡಿಕ್ಕಿಗಳು ಜಕಮ್ ಗೊಳ್ಳುವ ಕೆಲಸ ಆಗಾಗ ನಡೆಯುತ್ತಿದೆ. ರಾತ್ರಿ ಹೊತ್ತು ರಸ್ತೆ ಪರಿಚಯ ಇಲ್ಲದವರು ಈ ರಸ್ತೆಯಲ್ಲಿ ಕಾರಿಗೆ ಏನಾದರೂ ಒಂದು ಸಣ್ಣ ಪುಟ್ಟ ಜಕಮ್  ಮಾಡಿಕೊಂಡೆ ಬರುವುದು, ರಿಪೇರಿಗೆ ಹಣ ಖರ್ಚು ಮಾಡುವುದು  ವಾಡಿಕೆಯಾಗಿ ಪರಿಣಮಿಸಿದೆ. ಅಲ್ಲದೆ ಸಣ್ಣಗಾತ್ರದ ವಾಹನಗಳು ಮೂರು ಚಕ್ರದ ಆಟೋಗಳು ಬ್ಯಾಲೆನ್ಸ್ ತಪ್ಪಿ ಮುಂಭಾಗ ಮೇಲೆ ಏಳುವುದು ಅಥವಾ ಸಣ್ಣಪುಟ್ಟ ಅಪಘಾತ ಸಂಭವಿಸುವುದು ಆಗುತ್ತಲೇ ಇದೆ. ಸಂಬಂಧಿಸಿದ ರಸ್ತೆ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ವಾಹನ ಸವಾರರು ಸಾರ್ವಜನಿಕರು ಹಿಡಿಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ. ಮಳೆ ಬಂದರಂತೂ ಕುಣಿ ಗಾತ್ರವು ಹೆಚ್ಚಾಗಿ ನೀರಿನಲ್ಲಿ ವಾಹನ ಇಳಿಯುವ ದುಸ್ತರ ನಡೆಯುತ್ತಿದೆ. ಸಂಬಂಧಿಸಿದ ರಸ್ತೆ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಆಗಾಗ ನಡೆಯುತ್ತಿರುವ ಸಣ್ಣಪುಟ್ಟ ಅಪಘಾತಗಳನ್ನು ಮತ್ತು ವಾಹನಗಳು ಜಖಂಗೊಂಡು ಜನರಿಗೆ, ವಾಹನಗಳ ಮಾಲೀಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂಬುದು ಈ ರಸ್ತೆಯಲ್ಲಿ ಸಂಚರಿಸುತ್ತಿರುವವರ ಆಗ್ರಹವಾಗಿದೆ.