ಸಿರಿಗೇರಮ್ಮ ಜಾತ್ರೆಯ ಅಂಗವಾಗಿ ಯಲ್ಲಾಲಿಂಗೇಶ್ವರ ಪುರಾಣ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ26. ಗ್ರಾಮದ ಸಿರಿಗೇರಮ್ಮ ದೇವಸ್ಥಾನದಲ್ಲಿ ಕಳೆದ 10 ದಿನಗಳಿಂದ ಶರಣಶ್ರೀ ಮುಗಳಕೋಡ ಯಲ್ಲಾಲಿಂಗ ಮಹಸ್ವಾಮಿಪ್ರಭುಗಳ ಚರಿತ್ರೆಯ ಕುರಿತ ಮಹಾಪುರಾಣವನ್ನು ನಡೆಸಲಾಗುತ್ತಿದೆ. ಮಾ.30ಕ್ಕೆ ಪುರಾಣ ಮಂಗಲವಾಗುತ್ತಿದ್ದು, ಅಂದೇ ಸಿರಿಗೇರಮ್ಮದೇವಿಯ ಜಾತ್ರೆಯು ನಡೆಯಲಿದೆ. ಪ್ರತೀವರ್ಷವೂ ಒಬ್ಬ ಶರಣರ ಪುರಾಣವನ್ನು ನಡೆಸುತ್ತಿರುವ ಸಮಿತಿಯವರು ಈವರ್ಷ ಯಲ್ಲಾಲಿಂಗ ಪ್ರಭುಗಳ ಪುರಾಣಕ್ಕೆ ಚಾಲನೆ ನೀಡಿದ್ದಾರೆ. 9ನೇದಿನದಂದು ಸಿಂಧಿಗೇರಿ ಮಠದ ಶ್ರೀನಾಗಲಿಂಗ ಶ್ರೀಗಳು ಸಾನಿಧ್ಯವಹಿಸಿದ್ದರು. ಸಿರಿಗೇರಿಯ ಶ್ರೀ ಎಸ್.ಆರ್.ಮಹಬಳೇಶ್ವರ ಗವಾಯಿಯವರಿಂದ ಪ್ರವಚನ, ಸಿದ್ದರಾಂಪುರದ ಶ್ರೀದೊಡ್ಡನಗೌಡ ಇವರ ಪುರಾಣ ವಾಚನ, ಟಿ.ಎಚ್.ಶೆಕ್ಷಾವಲಿ ಇವರಿಂದ ಕ್ಯಾಸಿಯೋ ವಾದನ ಮತ್ತು ಬೈರಾಪುರ ಹನುಮಂತಗೌಡರಿಂದ ತಬಲಾ ಸಾತ್ ನಡೆಯುತ್ತಿದೆ. ಸಮಿತಿಯ ಮುಖಂಡರಾದ ಕೆ.ದೊಡ್ಡಮಲ್ಲಯ್ಯ, ಜೆ.ಲಿಂಗನಗೌಡ, ಬಸರಕೋಡುಕರೆಪ್ಪ, ಎಸ್.ಎಂ.ಮಹಾಲಿಂಗಯ್ಯಸ್ವಾಮಿ, ಪಾಂಡುರಂಗಪ್ಪ, ಸಿ.ಎಂ.ಮರುಳಸಿದ್ದಯ್ಯಸ್ವಾಮಿ, ಅರ್ಚಕರಾದ ಹತ್ತನೂರು ರಾಚಯ್ಯಸ್ವಾಮಿ, ಭಕ್ತರು ಇದ್ದರು. ನೆನೆಕ್ಕಿನಾಗನಾಥ ಮತ್ತು ಕಸಾಪ ತಾ.ಮಾಜಿ ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ ಪುರಾಣ ಕಾರ್ಯಕ್ರಮದ ನಿರ್ವಹಣೆಯಲ್ಲಿ ಪಾಲ್ಗೊಂಡಿದ್ದರು.