ಸಿರಿ ಕನ್ನಡ ವಾಹಿನಿಯಲ್ಲಿ “ಹಾಸ್ಯ ದರ್ಬಾರ್ ಸೀಸನ್ 2” ಹಾಗೂ ತಾಯಿ – ಮಗು ಭಾಗವಹಿಸುವ “ಲಿಟಲ್ ಕಿಲಾಡೀಸ್” ಗೇಮ್ ಶೋ ಆರಂಭವಾಗಿದೆ.
ನಾಡಿನ ಪ್ರತಿಯೊಬ್ಬ ವೀಕ್ಷಕರನ್ನು ತಲುಪುವ ಎರಡು ಜನಪ್ರಿಯ ಕಾರ್ಯಕ್ರಮಗಳು ವಾಹಿನಿಯಲ್ಲಿ ಆರಂಭವಾಗಿದೆ. ಪ್ರಮುಖ ಹಾಸ್ಯ ದಿಗ್ಗಜರು ನಡೆಸಿಕೊಡುವ “ಹಾಸ್ಯ ದರ್ಬಾರ್ ಸೀಸನ್ 2″ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ರಿಂದ 9ವರೆಗೆ ಹಾಗು ಮಕ್ಕಳು ಹಾಗೂ ಅಮ್ಮಂದಿರನ್ನು ಒಂದೇ ವೇದಿಕೆಯಲ್ಲಿ ಒಟ್ಟಾಗಿಸಿ ತಾಯಿ ಮಗುವಿನ ಚಟುವಟಿಕೆ ಒಳಗೊಂಡ ” ಲಿಟಲ್ ಕಿಲಾಡೀಸ್” ಗೇಮ್ ಶೋ ಸೋಮವಾರದಿಂದ ಶುಕ್ರವಾರ ಸಂಜೆ 6 ರಿಂದ 7 ಗಂಟೆಯವರೆಗೆ ಪ್ರಸಾರ ಮಾಡಲಾಗುತ್ತಿದೆ.ನಟಿ ರಶ್ಮಿತಾ ಚಂಗಪ್ಪ ನಿರೂಪಣೆಯಲ್ಲಿ ಮೂಡಿ ಬರುತ್ತಿದೆ ಎಲ್ಲರ ಸಹಕಾರವಿರಲಿ ಎಂದರು.
“ಹಾಸ್ಯ ದರ್ಬಾರ್ ಸೀಸನ್ 2” ನಲ್ಲಿ ಹಿರೇಮಗಳೂರು ಕಣ್ಣನ್, ಮುಖ್ಯಮಂತ್ರಿ ಚಂದ್ರು, ರಿಚರ್ಡ್ ಲೂಯಿಸ್, ಪ್ರಾಣೇಶ್, .ಕೃಷ್ಣೇ ಗೌಡ, ಎಂ.ಎಸ್ ನರಸಿಂಹಮೂರ್ತಿ, ಮಿಮಿಕ್ರಿ ದಯಾನಂದ್, ಯಶವಂತ ಸರ್ ದೇಶಪಾಂಡೆ, ಗುಂಡುರಾವ್, ದುಂಡಿರಾಜ್, ನರಸಿಂಹ ಜೋಶಿ, ಮಹಾಮನೆ ಮುಂತಾದವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಇಂತಹ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ “ಸಿರಿ ಕನ್ನಡ” ವಾಹಿನಿಯನ್ನು ಶ್ಲಾಘಿಸಿದರು.
ಸಿರಿ ಕನ್ನಡ ವಾಹಿನಿಯ ಸಂಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ ಮಾತನಾಡಿ ವಾಹಿನಿ ವೀಕ್ಷಿಸಿ,ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯ ವರೆಗೂ ನಿರ್ದಿಷ್ಟ ಅವಧಿಯಲ್ಲಿ ಮಿಸ್ ಕಾಲ್ ಕೊಟ್ಟವರಿಗೆ ಬಹುಮಾನ ಸಿಗಲಿದೆ.ಶೀಘ್ರದಲ್ಲೇ “ಅಮೃತ ಘಳಿಗೆ” ಹೊಸ ಧಾರಾವಾಹಿ ಪ್ರಸಾರವಾಗಲಿದೆ.