ಸಿರಾಜ್ ಅವರಿಗೆ ತವರಿಗೆ ಮರಳಲು ಆಯ್ಕೆ ನೀಡಿತ್ತು: ಬಿಸಿಸಿಐ

ನವದೆಹಲಿ, ನ.21 – ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ತಂದೆ ನಿಧನದ ಹಿನ್ನೆಲೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ಸಂತಾಪ ಸೂಚಿಸಿದ್ದು, ಅವರಿಗೆ ಸ್ವದೇಶಕ್ಕೆ ಮರಳುವ ಅವಕಾಶ ನೀಡಿತ್ತು ಎಂದು ತಿಳಿಸಿದೆ.

ಬಿಸಿಸಿಐ ಕಾರ್ಯದರ್ಶಿ ಜೈ ಷಾ ಅವರು ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಬಿಸಿಸಿಐ ಸಿರಾಜ್ ಅವರೊಂದಿಗೆ ಮಾತುಕತೆ ನಡೆಸಿ ತವರಿಗೆ ಮರಳಲು ಮತ್ತು ಅವರ ಕುಟುಂಬದ ಜೊತೆ ಕಾಲ ಕಳೆಯಲು ಅವಕಾಶವನ್ನು ನೀಡಿದೆ ಎಂದು ಹೇಳಿದರು.

ಸಿರಾಜ್ ಆಸ್ಟ್ರೇಲಿಯಾದಲ್ಲಿ ಭಾರತ ತಂಡದೊಂದಿಗೆ ಉಳಿಯಲು ಮತ್ತು ರಾಷ್ಟ್ರೀಯ ತಂಡಕ್ಕೆ ಸೇವೆ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಜೈ ಶಾ ಹೇಳಿದರು. ಬಿಕ್ಕಟ್ಟಿನ ಈ ಸಮಯದಲ್ಲಿ ಬಿಸಿಸಿಐ ಸಿರಾಜ್ ಜೊತೆಗಿದೆ ಎಂದು ಹೇಳಿದರು. ಈ ಸಮಯದಲ್ಲಿ ಸಿರಾಜ್ ಮತ್ತು ಅವರ ಕುಟುಂಬ ಸದಸ್ಯರ ಖಾಸಗಿ ಕಾರ್ಯಕ್ರಮವನ್ನು ಗೌರವಿಸಬೇಕು ಎಂದು ಬಿಸಿಸಿಐ ಮಾಧ್ಯಮಗಳಿಗೆ ಒತ್ತಾಯಿಸಿದೆ.