ಸಿರವಾರ : ಲೆಕ್ಕ ಪತ್ರ ಸಲ್ಲಿಕೆಗೆ ಸೀಮಿತವಾದ ಕೆಡಿಪಿ ಸಭೆ

ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂಧಿಸಿ
ಸಿರವಾರ.ನಂ೨೦ – ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸಂಬಂದಿಸಿದಂತೆ, ತಾಲೂಕಿನ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದೂ, ಇಲಾಖೆಗಳ ಮುಖ್ಯಾಧಿಕಾರಿಗಳು ಸಭೆಗೆ ಗೈರು ಆಗಿ ಅಧಿನ ಅಧಿಕಾರಿಗಳನ್ನು ಕಳುಹಿಸಿರುವುದಕ್ಕೆ ತಾ.ಪಂ ಅಧ್ಯಕ್ಷ ದೇವರಾಜ ಕುರುಕುಂದಾ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
ಸಿರವಾರ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಇತ್ತಿಚೇಗೆ ತಾ.ಪಂ ಅದ್ಯಕ್ಷ ದೇವರಾಜ ಕುರುಕುಂದಾ ಅವರ ಅದ್ಯಕ್ಷತೆಯಲ್ಲಿ ೨ನೇ ಸಭೆಯನ್ನು ಕರೆಯಲಾಗಿತು. ಬೆರಳೆಣಿಯ ಅಧಿಕಾರಿಗಳು ಮಾತ್ರ ಆಗಮಿಸಿ, ಉಳಿದ ಇಲಾಖೆ ಅಧಿನ ಅಧಿಕಾರಿಗಳು ಆಗಮಿಸಿರುವುದಕ್ಕೆ ಅಧ್ಯಕ್ಷರು ಸಿರವಾರ ತಾಲೂಕ ಪಂಚಾಯತಿ ಮಾನ್ವಿ ತಾಲೂಕ ಪಂಚಾಯತಿಯಿಂದ ಬೇರ್ಪಟು ಎರಡನೆ ಸಭೆಯಾಗಿದ್ದೂ, ಕಳೆದ ಸಭೇಗೂ ಅಧಿಕಾರಿಗಳು ಆಗಮಿಸಿರಲಿಲ್ಲ, ಈಬಾರಿಯೂ ಅಧಿಕಾರಿಗಳು ಆಗಮಿಸದೆ ನಿರ್ಲಕ್ಷ ಮಾಡಿರುವುದರಿಂದ ಸಮಸ್ಯೆಗಳಿಗೆ ಪರಿಹಾರ ಯಾರ ಹತ್ತಿರ ಕೇಳಬೇಕು ಎಂದು ತರಾಟೆ ತೆಗೆದುಕೊಂಡರು.
ಗ್ರಾಮಾಂತರ ಪ್ರದೇಶದಲ್ಲಿ ಅನೇಕ ಸಮಸ್ಯೆಗಳು ಇವೇ ಅವುಗಳನ್ನು ಪರಿಹರಿಸುವ ಮೂಲಕ ಸ್ಪಂದಿಸಿ, ಶಿಕ್ಷಕರು ಸಂಜೆವರೆಗೂ ಶಾಲೆಯಲ್ಲಿರುವಂತೆ ಆಧೇಶ ಮಾಡಿ, ಯಾವುದಾದರೂ ಪ್ರಮಾಣ ಪತ್ರಕ್ಕೆ ಸಹಿ ಪಡೆಯಲು ವಿದ್ಯಾರ್ಥಿಗಳು, ವಿದ್ಯಾವಂತರ ಅಲೆದಾಡುತ್ತಿದ್ದಾರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಪ್ರಾರಂಬಿಸಿದಿರಿ, ಅದು ಮುಚ್ಚಿರುತ್ತದೆ ಅಧಿಕಾರಿಗಳನ್ನು ಇಲ್ಲಿಗೆ ವರ್ಗ ಮಾಡಿಸಿ ಎಂದರು.
ಮಲ್ಲಟ ತಾ.ಪಂ ಸದಸ್ಯ ಮಲ್ಲಿಕಾರ್ಜುನ ನಾಯಕ ಮಾತನಾಡಿ ತಾಲೂಕ ಕೇಂದ್ರವಾದರೂ ಅನೇಕ ಇಲಾಖೆಗಳ ಅಧಿಕಾರಿಗಳು ತಾಲೂಕ ಕೇಂದ್ರದಲ್ಲಿರುವುದಿಲ್ಲ, ಇಲಾಖೆಗಳು ಸಹ ಮಾನ್ವಿಯಿಂದ ಸ್ಥಳಾಂತರವಾಗಿಲ್ಲ, ಶೀಘ್ರವಾಗಿ ಇಲಾಖೆಗಳನ್ನು ಸ್ಥಳಾಂತರ ಮಾಡಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ತಾ.ಪಂ ಇಓ ಉಮೇಶ ಮಾತನಾಡಿ ನರೇಗಾ ಯೋಜನೆಯಲ್ಲಿ ಗ್ರಾಮಗಳಲ್ಲಿರುವ ಎಲ್ಲಾ ಶಾಲೆಗಳಿಗೆ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಲಭ್ಯವಿದೆ, ೨೦೨೧ ರ ಒಳಗಾಗಿ ಶಾಲೆಗೆ ತಡೆಗೋಡೆ ಇಲ್ಲಾ ಎಂದು ಹೇಳಬಾರದು, ಗ್ರಾಮೀಣ ಬಾಗಕ್ಕೆ ನಿರಂತರ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಬೇಕು. ತಾಲೂಕ ಪಂಚಾಯತಿಗೆ ಹೊಸದಾಗಿ ಅನುದಾನ ಮಂಜೂರು ಆಗಿಲ್ಲ ಎಂದರು.
ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಡಿಪಿಓ ಮುದುಕಪ್ಪ ಮಾತನಾಡಿ ತಾಲೂಕಿನ ವ್ಯಾಪ್ತಿಯಲ್ಲಿ೨೪೭ ಅಂಗನವಾಡಿ ಕೇಂದ್ರಗಳಿದ್ದೂ, ೮೧ ಬಾಡಿಗೆ ಕಟ್ಟಡದಲ್ಲಿದೆ, ೧೩೨ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಸುತ್ತಿವೆ, ೬ ಸಮುದಾಯಭವನ ಇನ್ನಿತರ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಜನಪ್ರತಿನಿಧಿಗಳು ಗ್ರಾಮಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ಥಳವನ್ನು ಒದಗಿಸಿಕೊಡಬೇಕು. ೧೦೦೦ ಜನ ಸಂಖ್ಯೆಗೆ ಒಂದು ಕೇಂದ್ರ ಇರಬೇಕು. ಮಾತೃ ವಂದಾನ, ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ಇಲಾಖೆಯ ಯೋಜನೆಗಳನ್ನು ತಿಳಿಸಿದರು.ಜಂಟಿ ಕೃಷಿ ನಿರ್ಧೇಶಕ ಹುಸೇನ ಸಾಬ್ ಮಾತನಾಡಿ, ಕ್ಷೇತ್ರ ಶಿಕ್ಷಣಾದಿಕಾರಿ ವೆಂಕಟೇಶ ಗುಡಿಹಾಳ ಇಲಾಖೆ ಪ್ರಗತಿ ಪರಿಶೀಲನೆ ತಿಳಿಸಿದರು.
ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಬನ್ನಪ್ಪ, ಬಿಸಿಎಂ ಹಾಸ್ಟಲ್ ಮಹಿಬೂಬ ಪಾಷ ಸಮಾಜ ಕಲ್ಯಾಣ ಇಲಾಖೆಯ ರಾಮಲಿಂಗಪ್ಪ, ವಿವಿಧ ಇಲಾಖೆ ತಮ್ಮ ಇಲಾಖೆಯ ಪ್ರಗತಿ ಬಗ್ಗೆ ವರದಿ ಮಂಡಿಸಿದರು.
ಉಪಾದ್ಯಕ್ಷೆ ವೀಣಾ ವಿರೇಂಧ್ರ, ಸದಸ್ಯರಾದ ಪೂರ್ಣಿಮಾ ಎನ್. ಶರಣಬಸವ, ಜ್ಯೋತಿ ನಾಗನಗೌಡ, ಬಿ.ಯಲ್ಲಮ್ಮ, ಪಾಂಡುರಂಗ, ಬಸವರಾಜ, ಪಕೀರಪ್ಪ, ಶ್ರೀಧರಗೌಡ ಹೀರಾ, ಯಮನಪ್ಪ, ಸೇರದಿಂತೆ ತಾ.ಪಂ ಸಿಬ್ಬಂದಿಗಳು ಇದ್ದರು.

೨೦ ಸಿರವಾರ ೨ ಸಿರವಾರ ತಾಲೂಕ ಪಂಚಾಯತಿ ಸಾಮಾನ್ಯ ಸಭೇ ಜರುಗಿತು.