ಸಿರವಾರ: ಬೇಡ ಜಂಗಮರ ಪ್ರತಿಭಟನೆ ಖಂಡಿಸಿ ಜು.೨೫ ರಂದು ಬೃಹತ್ ಪ್ರತಿಭಟನೆ- ಬಸವರಾಜ ಭಂಡಾರಿ


ಸಿರವಾರ:ಜು,೨೩-ವೀರಶೈವ ಜಂಗಮರು ಎಸ್ಸಿ ಮೀಸಲಾತಿ ಹಾಗೂ ಪ್ರಮಾಣ ಪತ್ರ ನೀಡುವಂತೆ ಅಗ್ರಹಿಸಿ ಪ್ರತಿಭಟನೆ ಮಾಡುತ್ತಿ ರುವುದು ಅತ್ಯಂತ ಖಂಡನೀಯ. ವೀರಶೈವ ಜಂಗಮರು ಬೇಡ ಜಂಗಮರು ಅಲ್ಲ ಎಂದು ಪರಿಶಿಷ್ಟ ಜಾತಿ ಮೀಸಲಾತಿ ಸಂರಕ್ಷಣಾ ಸಮಿತಿಯ ಮುಖಂಡ ಬಸವರಾಜ ಭಂಡಾರಿ ಹೇಳಿದರು. ಪಟ್ಟಣ ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವ ರು,ಬೇಡ ಜಂಗಮರು,ವೀರಶೈವ ಲಿಂಗಾಯ ತ ಜಂಗಮರು ವೃತ್ತಿಯಲ್ಲಿ ಮಠಮಾನ್ಯಗ ಳನ್ನು ಕಟ್ಟಿಕೊಂಡು ಆರ್ಥಿಕವಾಗಿ ಸದೃಢ ರಾಗಿದ್ದು ಅವರನ್ನು ರಾಜ್ಯದ ಎಲ್ಲೆಡೆ ಜನರು ಪೂಜ್ಯ ನೀಯ ರೂಪದಲ್ಲಿ ಕಾಣುತ್ತಿದ್ದಾರೆ ವೀರಶೈವ ಲಿಂಗಾಯತ ಜಂಗಮರು ಕೀಳು ಮಟ್ಟಕ್ಕೆ ಇಳಿದು ಪರಿಶಿಷ್ಟ ಜಾತಿಯವರಿಗೆ ನೀಡಿದ ೧೫% ಮೀಸಲಾತಿಯಲ್ಲಿ ನಾವು ಬೇಡ ಜಂಗಮರು ನಮಗೂ ಮೀಸಲಾತಿ ಕೊಡಿ ಎಂದು ಪರಿಶಿಷ್ಟ ಜಾತಿಯ ತಟ್ಟೆಗೆ ಕೈ ಹಾಕಿರುವುದು ಅತ್ಯಂತ ಸೌಚನೀಯ ಸಂಗತಿಯಾಗಿದೆ ಎಂದರು.
ನಮ್ಮ ಕರ್ನಾಟಕ ರಾಜ್ಯದ ಗುಲ್ಬರ್ಗಾ, ಬೀದರ್,ರಾಯಚೂರು,&ಬಳ್ಳಾರಿ,ಜಿಲ್ಲೆಯ ಆಂಧ್ರದ ಗಡಿ ಬಾಗದಿಂದ ಬೇಡ ಜಂಗಮರು ವಲಸೆ ಬಂದಂತವರು ನಮಗೆ ಎಸ್ಸಿ ಪಟ್ಟಿ ಯಲ್ಲಿ ಸೇರಿಸಿ ಅಂತ ಹೋರಾಟವನ್ನು ಮಾಡುತ್ತಿದಾರೆ ಅದರಲ್ಲಿ ೧೦೧ ಜಾತಿಗಳು ಇದ್ದು ಅದರ ನಡುವೆ ಬೇಡ ಜಂಗಮರನ್ನು ಎಸ್ಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬೇ ಕು ಎಂದು ರಾಜ್ಯಾದ್ಯಂತ ಪ್ರತಿಭಟನೆ ಗಳನ್ನು ನಡೆಸುತ್ತಿದ್ದಾರೆ ಹೀಗಾಗಿ ಬೇಡ ಜಂಗಮರಿಂ ದ ನಡೆಯುತ್ತಿರುವ ಪ್ರತಿಭಟನೆಯನ್ನು ಖಂಡಿಸಿ ಸೋಮವಾರ ದಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು ಹೀಗಾಗಿ ಸುತ್ತಮುತ್ತಲಿನ ಪರಿಶಿಷ್ಟ ಜಾತಿ ಯಲ್ಲಿ ಬರುವಂತಹ ಎಲ್ಲಾ ಜನರು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ ಪ್ರತಿಭಟನಾ ರ್ಯಾಲಿಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆ.ಅಬ್ರಹಾಂ ಹೊನ್ನಾಟಗಿ,ಛಲವಾದಿ ಮಹಾಸಭಾ ತಾಲೂಕಾಧ್ಯಕ್ಷ ಲಂಕೇಶ ಮರಾಠ,ಡಿ.ಜಯಪ್ಪ,ಎಲ್ ವಿ ಸುರೇಶ ಜಾಲಾಪುರು,ಅರಳಪ್ಪ ಕವಿತಾಳ, ಜಯಪ್ಪ ಗುತ್ತೇದಾರ,ಚನ್ನಪ್ಪ ಬೂದಿನಾಳ, ಹನುಮಂತ ಕ್ಯಾದಿಗೇರ, ಹುಲಿಗೆಪ್ಪ ಕರಿಬಿಲ್ಕ ರ್,ಭೋವಿ ಸಮಾಜದ ತಾಲೂಕಾಧ್ಯಕ್ಷ ದುರುಗಪ್ಪ ಭೋವಿ,ಹನುಮೇಶ ಶಾಖಾಪುರ, ಸೋಮಣ್ಣ ಸಿರವಾರ,ಬಂಜಾರ ಲಮಾಣಿ ಸಮಾಜದ ತಾಲೂಕಾಧ್ಯಕ್ಷ ಅಮರೇಶ ಮರ್ಕಿಗುಡ್ಡ ತಾಂಡಾ,ಮೇಶಾಕ್ ದೊಡ್ಮನೆ, ಯಲ್ಲಪ್ಪ ನವಲಕಲ್,ಸೇರಿದಂತೆ ವಿವಿಧ ಸಮಾಜದವರಿದ್ದರು.