ಸಿರವಾರ ಪ ಪಂ. ೫ ಸದಸ್ಯರ ಅನರ್ಹ: ನಾಳೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಸಿರವಾರ.ಮಾ೩೧- ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ವಿಫ್ ೫ ಜನ ಬಿಜೆಪಿ ಸದಸ್ಯರನ್ನು ಜಿಲ್ಲಾಧಿಕಾರಿಗಳು ಸದಸ್ಯತ್ವವನ್ನು ರದ್ದು ಮಾಡಿದ್ದೂ, ಈಗಾಗಲೇ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರಿಂದ ನಾಳೆ ಏ.೧ ರಂದು ಆಸ್ಥಾನಕ್ಕೆ ಚುನಾವಣೆ ಜರುಗುತ್ತಿದ್ದೂ, ಪಟ್ಟಣದಲ್ಲಿ ಒಂದು ರೀತಿಯ ಬಿಗುವಿನ ವಾತವರಣ ಸೃಷ್ಠಿಯಾಗಿದೆ.
ಪಟ್ಟಣ ಪಂಚಾಯತಿ ೨ ನೇ ಹಂತಕ್ಕೆ ನವೆಂಬರ್ ೫ ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತು. ಆಗ ಬಿಜೆಪಿ ತನ್ನ ಸದಸ್ಯರಿಗೆ ವಿಫ ಜಾರಿ ಮಾಡಿತು. ಅಧ್ಯಕ್ಷ ಸ್ಥಾನ ಅವಿರೋಧವಾಗಿ ಲತಾ ಗುರುನಾಥಗೌಡ ಆಯ್ಕೆಯಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೃಷ್ಣನಾಯಕ, ಸ್ವತಂತ್ರವಾಗಿ(ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ) ಬಿಜೆಪಿಯ ಮತ್ತೊಬ್ಬ ಸದಸ್ಯ ಚನ್ನಬಸವ ಗಡ್ಲ ಅವರು ಸ್ಪರ್ಧೆ ಮಾಡಿ ೧೪ ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದರು.
ಈ ಚುನಾವಣೆಯಲ್ಲಿ ಜಿಲ್ಲೆಯ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕರು ಸಹ ಆಗಮಿಸಿ ಕೃಷ್ಣನಾಯಕ ಪರ ಮತಯಾಚನೆ ಮಾಡಿದರು.
ವಾರ್ಡ್ ೪ರ ಸದಸ್ಯ ದೇವೇಂದ್ರಪ್ಪ ತಂದೆ ಶರಣಪ್ಪ, ವಾರ್ಡ್ ೫ರ ಸದಸ್ಯ ಎಂ.ಎಸ್.ಕಾಸೀಮ್ ಮೋತಿ ತಂದೆ ಶಿವಲಿಂಗಪ್ಪ, ವಾರ್ಡ್ ೯ರ ಸದಸ್ಯ ಚನ್ನಪ್ಪ ನಾಗೋಲಿ ತಂದೆ ಬೂದೆಪ್ಪ, ವಾರ್ಡ್ ೧೧ರ ಸದಸ್ಯೆ ಮಹಾದೇವಿ ಗಡ್ಲ ಗಂಡ ಬಸವರಾಜ ಗಡ್ಲ ಹಾಗೂ ವಾರ್ಡ್ ೧೫ರ ಸದಸ್ಯ ಚನ್ನಬಸವ ಗಡ್ಲ ತಂದೆ ಯಲ್ಲಪ್ಪ ಗಡ್ಲ ೫ ಜನ ಸದಸ್ಯರು ಕೃಷ್ಣನಾಯಕ ಪರವಾಗಿ ಮತದಾನ ಮಾಡದೆ, ಚನ್ನಬಸವ ಗಡ್ಲ ಅವರಿಗೆ ಮತದಾನ ಮಾಡುವ ಮೂಲಕ ವಿಫ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಜಿಲ್ಲಾಧ್ಯಕ್ಷರಾದ ರಮಾನಂದ ಯಾದವ್ ಅವರು ಪಕ್ಷದ ವಿಪ್ ಉಲ್ಲಂಘಿಸಿದ ೫ ಜನ ಸದಸ್ಯರ ಸದಸ್ಯತ್ವ ರದ್ದು ಗೊಳಿಸಲು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರು, ಮಾ.೩೦ ರಂದು ಸಿರವಾರ ಪ.ಪಂ.ಯ ೫ ಸದಸ್ಯರ ಸದಸ್ಯತ್ವ ರದ್ದು ಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಆದೇಶವನ್ನು ಹಿಂಪಡೆಯುವಂತೆ(ರದ್ದುಗೊಳಿಸುವಂತೆ) ೫ ಜನ ಸದಸ್ಯರು ಕೋರ್ಟ್ ಮೆಟ್ಟಿಲು ಏರಿದ್ದಾರೆಂದು ತಿಳಿದು ಬಂದಿದೆ. ಅದು ಅಲ್ಲದೆ ೨೦೧೮ ವಿಧಾನ ಸಭೆ ಚುನಾವಣೆಯಲ್ಲಿ ವಾರ್ಡ ನಂ ೨ ಕೃಷ್ಣನಾಯಕ ಬೇರೆ ಪಕ್ಷದ ಬಿ.ಪಾರಂ ಪಡೆದು ಸ್ಪರ್ಧೆ ಮಾಡಿದರು. ಅವರ ಮೇಲೆ ಏಕೆ ಬಿಜೆಪಿ ಜಿಲ್ಲಾಧ್ಯಕ್ಷರು ಕ್ರಮಕೈಗೊಳಲಿಲ. ಉಪಾಧ್ಯಕ್ಷ ಚುನಾವಣೆಯಲ್ಲಿ ಕೃಷ್ಣನಾಯಕರಿಗೆ ಮತ ಹಾಕುವುದಿಲ್ಲ ಎಂದು ಹೇಳಿದೆವು. ಆದರೂ ಕೃಷ್ಣನಾಯಕರನ್ನು ಅಭ್ಯರ್ಥಿಗಳನ್ನಾಗಿ ಮಾಡಿದರು. ಬಿಜೆಪಿ ಸದಸ್ಯ ಚನ್ನಬಸವ ಗಡ್ಲ ಅವರಿಗೆ ಮತ ನೀಡಿದೆವೆ ಎಂಬುದು ಸದಸ್ಯರ ಆರೋಪವಾಗಿದೆ.
ನಾಳೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: – ಚನ್ನಬಸವ ಗಡ್ಲ ಅವರು ಆಯ್ಕೆಯಾಗಿ ೩ ತಿಂಗಳ ನಂತರ ಒಪ್ಪಂದದ ಪ್ರಕಾರ ಸ್ಥಾನಕ್ಕೆ ರಾಜೀನಾಮೆ ನೀಡಿದರಿಂದ ಆ ಸ್ಥಾನಕ್ಕೆ ನಾಳೆ( ಏಪ್ರೀಲ್ ೧ ರಂದು)ಚುನಾವಣೆಗೆ ದಿನಾಂಕ ನಿಗದಿಯಾಗಿದ್ದೂ, ಎಸ್.ಟಿ ಸಾಮಾನ್ಯವಾಗಿರುವದರಿಂದ ಕಾಂಗ್ರೆಸ್ ಪಕ್ಷದಿಂದ ಚಿನ್ನಾನ್ ನಾಗರಾಜ ಎಂದು ಹೇಳಲಾಗುತ್ತಿದ್ದೆ. ಬಿಜೆಪಿಯಿಂದ ಕೃಷ್ಣನಾಯಕ ಅವರು ಆಕಾಂಕ್ಷಿಗಳಾಗಿದ್ದಾರೆಂದು ಹೇಳಲಾಗುತ್ತಿದೆ.
ಬಿಜೆಪಿ ಪಕ್ಷದ ವಿಪ್ ಉಲ್ಲಂಘಿಸಿ ೫ ಜನ ಸದಸ್ಯರು ಅನರ್ಹಗೊಂಡಿದ್ದು ಬಿಜೆಪಿಯ ೫ ಸದಸ್ಯರನ್ನು, ಪಕ್ಷೇತರ ೧ ಸೇರಿ ೬ ಸದಸ್ಯರಿದ್ದಾರೆ, ಜೆಡಿಎಸ್ ೧, ಕಾಂಗ್ರೆಸ್ ೬ ಪಕ್ಷೇತರರು ಇಬ್ಬರು ಸೇರಿ ಒಟ್ಟು ೮ ಸದಸ್ಯರಿದ್ದು ಉಪಾಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ತಂತ್ರ ಹಾಗೂ ಪ್ರತಿತಂತ್ರ ಎಣಿಯುತ್ತಿದ್ದಾರೆ. ಶಾಸಕರ, ಸಂಸದರ ಮತಗಳಿದ್ದು ಆದರೆ ಜೆಡಿಎಸ್ ಶಾಸಕ ಹಾಗೂ ಓರ್ವ ಸದಸ್ಯ ಸೇರಿ ಎರಡು ಮತಗಳಿದ್ದು ಜೆಡಿಎಸ್ ನಿರ್ಧಾರದ ಮೇಲೆ ಉಪಾಧ್ಯಕ್ಷರ ಆಯ್ಕೆ ನಿಂತಿದೆ.