ಸಿರವಾರ ಪ.ಪಂ:ಮತ್ತೆ ಬಿಜೆಪಿ ವಶಕ್ಕೆ

ಅಧ್ಯಕ್ಷರಾಗಿ ಲತಾ,ಉಪಾಧ್ಯಕ್ಷರಾಗಿ ಚನ್ನಬಸವ
ಸಿರವಾರ.ನಂ.೫- ಪಟ್ಟಣ ಪಂಚಾಯತಿ ೨ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ಜರುಗಿದ್ದೂ, ಅಧ್ಯಕ್ಷರಾಗಿ ವಾರ್ಡ್ ನಂ ೧೮ರ ಲತಾ ಗುರುನಾಥರೆಡ್ಡಿ ಅವಿರೋಧವಾಗಿ ಆಯ್ಕೆಯಾದರೆ, ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ(ಕಾಂಗ್ರೆಸ್ ಬೆಂಬಲದೊಂದಿಗೆ) ಸ್ಪರ್ಧೆ ಮಾಡಿದ ವಾರ್ಡ್ ನಂ ೧೫ ಚನ್ನಬಸವ ಗಡ್ಲ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿವ ಮೂಲಕ ಪ.ಪಂ ಮತ್ತೊಮ್ಮೆ ಬಿಜೆಪಿ ವಶಕ್ಕೆ ಪಡೆದರೆ, ಮಿಸಲಾತಿಯಂತೆ ಕಾಂಗ್ರೆಸ್ ಸದಸ್ಯರು ಇದ್ದರೂ ಸಹ ಚುನಾವಣೆಗೆ ಅಭ್ಯರ್ಥಿಯನ್ನು ಹಾಕದೆ ಬಿಜೆಪಿ ಬಂಡಾಯ ಅಭ್ಯರ್ಥಿಗೆ ಬೆಂಬಲಿಸಿರುವುದು ಆಚ್ಚರಿ ಮೂಡಿಸಿದೆ.
ಸಿರವಾರ ಪ.ಪಂ ಗೆ ಅಧ್ಯಕ್ಷ ಸ್ಥಾನ ಬಿ.ಸಿ.ಬಿ, ಉಪಾಧ್ಯಕ್ಷ ಎಸ್.ಟಿ ಸಾಮಾನ್ಯ ಮಿಸಲಾತಿಯಾಗಿದ್ದೂ, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಲತಾ ಗುರುನಾಥರೆಡ್ಡಿ ಅವರು ಎರಡು ನಾಮಪತ್ರ ಸಲ್ಲಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ ೨ ರ ಕೃಷ್ಣನಾಯಕ ೨ ನಾಮಪತ್ರ, ಚನ್ನಬಸವ ಗಡ್ಲ ಅವರು ೧ ನಾಮಪತ್ರ ಸೇರಿ ಒಟ್ಟು ೫ ನಾಮಪತ್ರ ಸಲ್ಲಿಸಲಾಗಿತು.
ಅದರಲ್ಲಿ ಲತಾ ಗುರುನಾಥ ರೆಡ್ಡಿ ಅವರು ಒಬ್ಬರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವುದರಿಂದ ಲತಾ ಗುರುನಾಥ ರೆಡ್ಡಿ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಕೃಷ್ಣನಾಯಕ ಮತ್ತು ಬಂಡಾಯ ಅಭ್ಯರ್ಥಿ ಚನ್ನಬಸವ ಗಡ್ಲ ಅವರು ನಡುವೆ ಚುನಾವಣೆ ಜರುಗಿದ್ದೂ ಅದರಲ್ಲಿ ಕೃಷ್ಣನಾಯಕರಿಗೆ ೬ ಮತಗಳು ಪಡೆದರೆ, ಚನ್ನಬಸವ ಗಡ್ಲ ಅವರು ೧೪ ಮತಗಳು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ತಹಸೀಲ್ದಾರ್ ಹಾಗೂ ಚುನಾವಣೆ ಅಧಿಕಾರಿ ಕೆ.ಶೃತಿ ಅವರು ತಿಳಿಸಿದರು.
ಕೈ ಬಿಟ್ಟ ಕಾಂಗ್ರೆಸ್ :- ಪ.ಪಂಯಲ್ಲಿ ಒಟ್ಟು ೨೦ ಸ್ಥಾನಗಳಲ್ಲಿ ೧೦ ಬಿಜೆಪಿ, ಕಾಂಗ್ರೇಸ್ ೬ ಸದಸ್ಯರನ್ನು, ೧ ಜೆ.ಡಿ.ಎಸ್, ೩ ಪಕ್ಷೇತರರು ಹೊಂದಿದೆ. ಅಧ್ಯಕ್ಷ ಸ್ಥಾನ ಮಿಸಲಾತಿಯಂತೆ ಕಾಂಗ್ರೆಸ್‌ನಲ್ಲಿ ಯಾರು ಸದಸ್ಯರು ಇಲ್ಲದ ಕಾರಣ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಸಿರಲಿಲ್ಲ, ಆದರೆ ಉಪಾಧ್ಯಕ್ಷ ಸ್ಥಾನ ಎಸ್.ಟಿ ಮಿಸಲಾತಿಯಂತೆ ನಾಗರಾಜಚಿನ್ನಾನ್ ಅವರನ್ನು ಚುನಾವಣೆಗೆ ಸ್ಪರ್ಧೆ ಮಾಡಬಹುದಾಗಿತು. ಆದರೆ ಇತ್ತಿಚೆಗೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿ ಬಂಡಾಯ ಸದಸ್ಯ ಚನ್ನಬಸವ ಗಡ್ಲ ಅವರಿಗೆ ಅವಕಾಶ ನೀಡಿರುವುದನ್ನು ನೋಡಿದ ಈ ಚುನಾವಣೆಯನ್ನು ಕಾಂಗ್ರೆಸ್ ಕೈ ಬಿಟ್ಟಿದೆ.
ಎಂ.ಪಿ. ಮತ್ತು ಎಂ.ಎಲ್.ಎ ಗೈರು: ಚುನಾವಣೆಗೆ ಸಂಸದರು ಹಾಗೂ ಶಾಸಕರು ಮತದಾನಕ್ಕೆ ಅವಕಾಶ ನೀಡಲಾಗಿತು. ಅಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿರುವದಿಂದ, ಉಪಾಧ್ಯಕ್ಷ ಸ್ಥಾನವೂ ಸಹ ಬಿಜೆಪಿಗೆ ಬರುವ ಮಾಹಿತಿ ಹಿನ್ನಲ್ಲೆಯಲ್ಲಿ ಸಂಸದರಾದ ರಾಜಾ ಅಮರೇಶನಾಯಕರು ಗೈರು ಹಾಜರಿಯಾಗಿದ್ದರು, ಅಧ್ಯಕ್ಷ – ಉಪಾದ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೊಟ್ಟಿ ಇಲ್ಲದ ಕಾರಣ ಶಾಸಕರಾದ ರಾಜಾ ವೆಂಕಟಪ್ಪನಾಯಕರು ಸಹ ಗೈರು ಆಗಿದ್ದರು.
ಬಿಜೆಪಿಯಿಂದ ಸಂಭ್ರಮ : ಚುನಾವಣೆ ಪ್ರಕ್ರೀಯೆ ಪೂರ್ಣಗೊಂಡು ಅಧ್ಯಕ್ಷರಾಗಿ ಲತಾ ಗುರುನಾಥರೆಡ್ಡಿ, ಉಪಾಧ್ಯಕ್ಷರಾಗಿ ಚನ್ನಬಸವ ಗಡ್ಲ ಅವರು ಆಯ್ಕೆಯಾಗಿದ್ದಾರೆಂದು ತಿಳಿದ ನಂತರ ಬಿಜೆಪಿ ಮುಖಂಡರು ಕಾರ್ಯಕರ್ತರು ಗುಲಾಲ್ ಎರಚಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿಯಿಂದ ಬಂಡಾಯ ಎದ್ದಿದರೂ ಅವರು ನಮ್ಮ ಬಿಜೆಪಿ ಪಕ್ಷದ ಸದಸ್ಯರೇ ಆಗಿರುವುದರಿಂದ ಎರಡು ಸ್ಥಾನಗಳು ಬಿಜೆಪಿ ವಶವಾಗಿದೆ ಎಂದು ಮುಖಂಡರು ಹೇಳುತ್ತಿದ್ದರು.
ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ,ಸಿರವಾರ ಠಾಣೆಯ ಪಿ.ಎಸ್.ಐ ಸುಜಾತನಾಯಕ, ಕವಿತಾಳ ಠಾಣೆಯ ವೆಂಕಟೇಶ ಸೂಕ್ತ ಬಂದೋಬಸ್ತ್ ಒದಗಿಸಿದರು.