ಸಿರವಾರ ಪಟ್ಟಣ ಮೂಲಭೂತ ಸೌಕರ್ಯಕ್ಕೆ ೨೫ ಕೋಟಿ ಮೀಸಲು

ಸಿರವಾರ,ಮಾ.೨- ೨೦೧೮ ರ ವಿಧಾನಸಭೆ ಚುನಾವಣೆಯಲ್ಲಿ ಜನತೆಗೆ ನೀಡಿದ ಆಶ್ವಾಸನೆಯಂತೆ ನಡೆದುಕೊಂಡಿರುವೆ. ಸಿರವಾರ ಪಟ್ಟಣಕ್ಕೆ ೨೫ ಕೋ. ಅನುದಾನವನ್ನು ನೀಡಿ, ವಿವಿಧ ಅಭಿವೃದ್ದಿ ಕಾಮಗಾರಿಗಳು ಕೆಲವು ಮುಗಿದರೆ, ಕೆಲವು ಪ್ರಗತಿಯಲ್ಲಿವೆ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬು. ೨೦೨೧-೨೨ ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ೫೧ ಲಕ್ಷ ರೂ. ಗಳಲ್ಲಿ ವೃತ್ತದಿಂದ ರಾಯಚೂರು ರಸ್ತೆಯ ೨೦೦ ಮೀ. ಡಿವೈಡರ್ ಮತ್ತು ಬೀದಿ ದೀಪಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಸ್ ನಿಲ್ದಾಣ ಕಾಮಗಾರಿ, ಡಾಂಬರೀಕರಣ, ಸಿ.ಸಿ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕಗಳು, ಶಾಲಾ ಮತ್ತು ಕಾಲೇಜು ಕಟ್ಟಡದ ನಿರ್ಮಾಣ, ಆರೋಗ್ಯ ಕ್ಷೇತ್ರ ಸೇರಿದಂತೆ ಇನ್ನಿತರರು ಮೂಲಭೂತ ಸೌಲಭ್ಯಕ್ಕೆ ೨೫ ಕೋಟಿಗೂ ಹೆಚ್ಚಿನ ಅನುದಾನವನ್ನು ನನ್ನ ಅವಧಿಯಲ್ಲಿ ಸಿರವಾರ ಪಟ್ಟಣಕ್ಕೆ ನೀಡಿದ್ದೇನೆ.
ಮಿನಿ ವಿಧಾನಸೌಧ ಹಾಗೂ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ಸಮಸ್ಯೆ ಇದೆ. ಹಿಂದಿನ ಶಾಸಕರು ಭೂಮಿ ಆಯಾ ಇಲಾಖೆ ಹೆಸರಿಗೆ ವರ್ಗಾವಣೆ ಮಾಡಿದರೆ, ನಿರ್ಮಾಣಕ್ಕೆ ಚಾಲನೆ ನೀಡಬಹುದಿತ್ತು. ಆದರೂ ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುವೆ. ಎಪಿಎಂಸಿ ಕ್ರಾಸ್‌ನಿಂದ ಬಸವೇಶ್ವರ ವೃತ್ತದವರೆಗೂ ರಸ್ತೆ ನಿರ್ಮಾಣ ಮಾಡಲಾಗುವುದು. ಮತ್ತೆ ಜನತೆ ಆಶೀರ್ವಾದ ಮಾಡುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಿಗಿ, ಜಿ.ಲೋಕರೇಡ್ಡಿ, ಚಂದ್ರಶೇಖರ ಸ್ವಾಮಿ, ಕಾಶಿನಾಥ ಸರೋದೆ, ಈಶಪ್ಪ ಹೂಗಾರ, ಯುವ ಮುಂಖಡ ರಾಜಾ ಆದರ್ಶ ನಾಯಕ, ಮಹಿಳಾ ಘಟಕದ ಅಧ್ಯಕ್ಷ ವಿಜಯಲಕ್ಷ್ಮಿ, ಪುರಸಭೆಯ ಸದಸ್ಯ ಭಾಷ ಸಾಬ್, ಹನುಮಂತ ಭೋವಿ, ಗ್ಯಾನಪ್ಪ, ಫಾತಿಮಾ ಬಂದೇ ನವಾಜ್, ನಾಗರಾಜ,ದಾನಪ್ಪ, ಪರಮೇಶ ಮುರ್ಕಿಗುಡ್ಡ, ಎಮ್.ಡಿ ವಲಿ, ಸತ್ತರಸಾಬ್, ಚಂದ್ರಶೇಖರ ಗೌಡ, ಯಲ್ಲಪ್ಪ ದೊರೆ, ದೇವರಾಜ ನಾಯಕ, ಖಾಜಾ ಸಾಬ್ ಕವಿತಾಳ, ರಾಮಚಾರಿ, ವೆಂಕನಗೌಡ ಇಸ್ಮಾಯಿಲ್, ರಪೀ, ಗೋಪಾಲ ನಾಯಕ ಹರವಿ, ಮೌಲ ಸಾಬ್, ಬಾಬು ನಾರಬಂಡ, ರಂಗನಾಥ ನಾಯಕ, ಸಂತೋಷ, ಪೂನ್ನಪ್ಪ ರಾಥೋಡ್, ಗ್ಯಾನಪ್ಪ ಜಾದವ್, ವೆಂಕಟೇಶ ಪವಾರ್ ಸೇರಿದಂತೆ ಪಕ್ಷದ ಮುಂಖಡರು ಕಾರ್ಯಕರ್ತರು ಉಪಸ್ಥಿತರಿದ್ದರು.