ಸಿರವಾರ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ

ಸಿರವಾರ.ಏ.೧೬- ಭಾರತ ದೇಶ ಕಂಡ ಅಪ್ರತಿಮ ಪ್ರಗತಿಪರ ಚಿಂತಕ, ಸಮಾಜ ಸುಧಾರಕ, ಪ್ರಜಾತಂತ್ರ ಪ್ರೇಮಿ, ಸಮಾಜಿಕ ನ್ಯಾಯ ಪ್ರತಿಪಾದಕ, ಬೌದ್ಧ ಧರ್ಮದ ಪುನರುತ್ತನಕ್ಕೆ ಮುನ್ನುಡಿ ಬರೆದ ಮಹಾನಾಯಕ, ಮಹಾ ಮಾನವತವಾದಿ, ಭೂಮಿ ತೂಕದ ಒಡೆಯ, ದೇಶವನ್ನು ಸಮಾನತೆಯಿಂದ ಕಟ್ಟುವ ಕನಸು ಕಂಡ ಕನಸುಗಾರ ಡಾ. ಬಿ.ಆರ್.ಅಂಬೇಡ್ಕರ್ ಅವರ ೧೩೦ ನೇ ಜಯಂತಿಯ ಪ್ರಯುಕ್ತ ಸಿರವಾರ ಪಟ್ಟಣ ಡಾ:ಬಿ.ಆರ್. ಅಂಬೇಡ್ಕರ್ ಯುವ ಬಳಗದ ವತಿಯಿಂದ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ಮಾಡಲಾಯಿತು.
ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು ಡಾ: ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಪಟ್ಟಣದ ವಿಧ್ಯಾನಗರ ಕಾಲೋನಿಯಿಂದ ಪ್ರಾರಂಭವಾಗಿ ಪಟ್ಟಣದ ಮುಖ್ಯ ರಸ್ತೆಯಿಲ್ಲಿರುವ ಎಲ್ಲಾ ಮಹಾನಾಯಕರ ಭಾವಚಿತ್ರಗಳಿಗೆ ಮಲಾರ್ಪಣೆ ಮಾಡುವ ಮೂಲಕ ಪಟ್ಟಣದ ಬಸವೇಶ್ವರ ವೃತ್ತದಿಂದ ಡಾ: ಬಿ.ಆರ್.ಅಂಬೇಡ್ಕರ್ ವೃತ್ತದವರಿಗೆ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಸಂಘಟನೆಯ ಮುಖಂಡರು, ವಿವಿಧ ಪಕ್ಷದ ಮುಖಂಡರು, ಎಲ್ಲಾ ಸಮಾಜದ ಮುಖಂಡರು, ಯುವಕರು, ಹಾಗೂ ಡಾ:ಬಿ.ಆರ್ ಅಂಬೇಡ್ಕರ್ ಯುವ ಬಳಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.