ಸಿರವಾರ ಗ್ರಂಥಾಲಯ ಪ್ರಾರಂಭಿಸುವಂತೆ ಒತ್ತಾಯ

ಸಿರವಾರ.ಜೂ.೧೧- ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾವಂತರಿಗೆ ಗ್ರಂಥಾಲಯದ ಅವಶ್ಯಕತೆ ಇದ್ದಿದೂ ಗ್ರಂಥಾಲಯ ಪ್ರಾರಂಭಿಸುವಂತೆ ವಿದ್ಯಾವಂತ ಯುವಕ ಬಳಗದಿಂದ ತಾಲೂಕು ದಂಡಾಧಿಕಾರಿಗೆ ಹಾಗೂ ಪ.ಪಂಚಾಯತಿ ಮುಖ್ಯಾಧಿಕಾರಿ ಮನವಿ ಪತ್ರವನ್ನು ನೀಡುವ ಮೂಲಕ ಒತ್ತಾಯಿಸಿದ್ದಾರೆ.
ಪಟ್ಟಣದ ಮತ್ತು ಸುತ್ತಮುತ್ತಲಿನ ೨೦ ಗ್ರಾಮಗಳಿದ್ದು ಸಿರವಾರದಲ್ಲಿ ಒಂದು ಸರ್ಕಾರಿ, ೨ ಖಾಸಗಿ ಕಾಲೇಜುಗಳಿದ್ದು ಅದರಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಪದವಿ ಪೂರ್ವ ಮತ್ತು ಪದವಿಧರ ವಿದ್ಯಾರ್ಥಿಗಳು ಹಾಗೂ ಸಾವಿರಾರು ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಹೊಂದಿದ್ದು ಅವರಿಗೆ ಹೆಚ್ಚಿನ ಜ್ಞಾನ ಭಂಡಾರಕ್ಕಾಗಿ ಅನೇಕ ವಿವಿಧ ರೀತಿಯ ಪುಸ್ತಕಗಳು ಅವಶ್ಯಕವಾಗಿದ್ದು ಹಾಗೂ ಎಲ್ಲಾ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಸಿಕೊಳ್ಳಲು ಗ್ರಂಥಾಲಯ ವು ಅವಶ್ಯಕತೆಯಾಗಿದೆ.
ಗ್ರಾಮೀಣ ಭಾಗದ, ಅದರಲೂ ಬಡ ವಿದ್ಯಾರ್ಥಿಗಳೆ ಹೆಚ್ಚಾಗಿ ಇರುವುದರಿಂದ ಹಣ ಕೊಟ್ಟು ಪುಸ್ತಕ ಖರೀದಿಸುವದಕ್ಕೆ ಆರ್ಥಿಕ ತೊಂದರೆ ಯಾಗಿದೆ. ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ ಎಂಬ ತತ್ವದ ಆಧಾರದ ಮೇಲೆ ನಮ್ಮ ಜೀವನವನ್ನು ರೂಪಿಸುವ ಪುಸ್ತಕಗಳೆ ನಮಗೆ ಜೀವಾಳ ಪುಸ್ತಕಗಳು ಜೀವನ ಮೌಲ್ಯಗಳ ಬಗ್ಗೆ ಸಾರಿ ಹೇಳುತ್ತವೆ ಅಂತಹ ಪುಸ್ತಕಗಳನ್ನು ಒದಗಿಸಿಕೊಡುವ ಶಕ್ತಿ ಇರುವುದು ಒಂದು ಗ್ರಂಥಾಲಯಕ್ಕೆ ಮಾತ್ರ ಅಂತಹ ಗ್ರಂಥಾಲಯ ನಮಗೆ ಬೇಕಾಗಿದೆ.
ವಿದ್ಯಾವಂತ ಯುವಕ ಬಳಗದ.. ಸದಸ್ಯರು ಕೂಡ..ಅಭಿಯಾನದ ಪಟ್ಟಿಯಲ್ಲಿ ಸಹಿ ಸಂಗ್ರಹವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ
ಲಕ್ಷ್ಮಣ ಕಲ್ಲೂರು,ಆಲ್ ಫ್ರೆಂಡ್ಸ್ ಅಂಬು,ಸೂರಿ.ಹುಸೇನಪ್ಪ,ಗಡ್ಲ ವಿರೇಶ್, ತಾಯಣ್ಣ ನಿಲಗಲ್,ಚಂದ್ರು ಕಪಲ್,ರಮೇಶ್ ಸೂರಿ ಸೇರಿದಂತೆ ಇನ್ನಿತರರು ಇದ್ದರು.