
ಸಿರವಾರ: ಮಾ.೦೯- ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಒದಗಿಸಬೇಕು ಎಂದು ಪಟ್ಟಣದ ಕ್ರೀಡಾ ಪಟ್ಟುಗಳು, ಕ್ರೀಡಾ ಅಭಿಮಾನಿಗಳು, ಗ್ರಾಮದ ಮುಖಂಡರು ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
ನೀರಾವರಿ ಇಲಾಖೆಯ ಸರ್ವೆ ನಂ.೪೦೩ರಲ್ಲಿ ಮರಂ ಕ್ವಾರಿಯಲ್ಲಿ ಎಂಟು ಎಕರೆ ಭೂಮಿಯನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಮೀಸಲಾಗಿದೆ, ಅದನ್ನು ಕಂದಾಯ ಇಲಾಖೆಗೆ ವರ್ಗಾವಣೆ ಮಾಡಲು ಕಳೆದ ಅಧಿವೇಶನದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಚರ್ಚೆಮಾಡಿ, ಜಲಸಂಪನ್ಮೂಲ ಸಚಿವರಿಗೆ ಮನವಿಮಾಡಿ, ಉಚಿತ ನಿವೇಶನ ನೀಡಲು ಒತ್ತಾಯಿಸಿದರು.ಸರಕಾರದ ಎರಡು ಕೋಟಿ ರೂಪಾಯಿ ಅನುದಾನವನ್ನು ನಿಗದಿಪಡಿಸಲಾಗಿದೆ. ಕಳೆದ ೨೦ವರ್ಷದಿಂದ ನಿವೇಶನ, ಅನುದಾನವಿಲ್ಲದೆ ಕ್ರೀಡಾಂಗಣ ಕನಸು ಕನಸಾಗಿ ಉಳಿದಿದೆ, ಸರಕಾರದ ಜಾಗ ದಿನೇ ದಿನೇ ಒತ್ತುವರಿಯಾಗುತ್ತಿದೆ, ಈ ಸ್ಥಳವನ್ನು ಸುಮಾರು ಎರಡು ಎಕರೆ ಭೂಮಿಯನ್ನು ಅನ್ಯವ್ಯಕ್ತಿಗಳು ಕಬ್ಜವಾಗಿದೆ, ನಮಗೆ ಈ ಸ್ಥಳದಲ್ಲಿ ಆಟವಾಡಲು ಅವಕಾಶವನ್ನು ನೀಡಬೇಕು, ಒತ್ತುವರಿ ತೆರವು ಮಾಡಬೇಕು,
ತಾಲೂಕು ಕೇಂದ್ರವಾಗಿದ್ದು ಅನೇಕ ಕ್ರೀಡಾ ಪಟ್ಟುಗಳು, ನಾಗರಿಕರಿಗೆ ವಾಯು ವಿಹಾರ ಮಾಡಲು, ವಿವಿಧ ಕಾರ್ಯಕ್ರಮ ಮಾಡಲು ಸ್ಥಳ, ಕಟ್ಟಡಗಳು, ವೇದಿಕೆ ಇಲ್ಲಾ ಶೀಘ್ರವಾಗಿ ಸ್ಥಳವನ್ನು ಸರ್ವೆಮಾಡಿ, ಕ್ರೀಡೆಗಳಿಗೆ ಅನುಕೂಲ ಮಾಡಲು ಒತ್ತಾಯಿಸಿದರು.
ತಹಸೀಲ್ದಾರ ಸುರೇಶ ವರ್ಮ ಮಾತನಾಡಿ ಸರಕಾರದ ಸ್ಥಳದಲ್ಲಿ ಆಟವಾಡಲು ಯಾವುದೇ ತೊಂದರೆ ಇಲ್ಲ, ಸ್ಥಳದಲ್ಲಿ ಬೇಡಾ, ನಮ್ಮದು ಎಂದವರಿಗೆ ಜಾಗದ ದಾಖಲೆಗಳನ್ನು ನೀಡಲು ತಿಳಿಸಿ, ಸರ್ಕಾರದ ಸ್ಥಳ ಅಕ್ರಮವಾಗಿ ವರ್ಗಾವಣೆ ಯಾದರೆ ಅದನ್ನು ರದ್ದುಮಾಡಿ, ವಶಕ್ಕೆ ಪಡೆಯಲಾಗುವ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಲೋಕರಡ್ಡಿ, ಎನ್.ಉದಯಕುಮಾರ್, ರಮೇಶ ದರ್ಶನಕರ್, ಟಿ.ಬಸವರಾಜ, ಜೆ.ಬಸವರಾಜ ಪಾಟೀಲ್, ಸುನೀಲ್, ಪ.ಪಂ.ಸದಸ್ಯ ಸೂರಿ ದುರುಗಣ್ಣ ನಾಯಕ, ಮಾರ್ಕಪ್ಪ, ಬಸವರಾಜ ಮಂತ್ರಿ, ದಾನಪ್ಪ, ಮೇಶಕ್, ವೇದವ್ಯಾಸ, ರಾಘು ಖಾಜನಗೌಡ, ರಂಜೀತ್, ಮಲ್ಲಿಕ್, ದೇವೆಗೌಡ, ಸುರೇಶ, ವಿಜಯ, ಡೇವಿಡ್, ಗುಂಡಪ್ಪ,ಶಾಂತಪ್ಪ, ಸೇರಿದಂತೆ ಅನೇಕರು ಇದ್ದರು.