
ಕಲಬುರಗಿ,ಏ.11:ಹಿಂದಿ ಭಾರತವನ್ನು ಒಂದುಗೂಡಿಸುವ ಭಾಷೆಯಾಗಿದೆ. ಹಿಂದಿಯ ಕಾರಣದಿಂದಾಗಿ ನಾವು ಭಾರತದ ಯಾವುದೇ ಭಾಗದಲ್ಲಿ ಯಾರೊಂದಿಗಾದರೂ ಸುಲಭವಾಗಿ ವಹಿವಾಟು ನಡೆಸಬಹುದು. ಇದು ವಿವಿಧ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ಎಲ್ಲ ಭಾರತೀಯರ ನಡುವೆ ಸಂಪರ್ಕ ಭಾಷೆಯಾಗಿದೆ” ಎಂದು ಕಲಬುರಗಿಯ ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಆರ್ ವಿ ಶಿವರಾಜ್ ಕುಮಾರ್ ಹೇಳಿದರು.
ಸಿಯುಕೆ ವಿದ್ಯಾರ್ಥಿಗಳಿಗೆ ‘ಮೇಧಾವಿ ವಿದ್ಯಾರ್ಥಿ ಸಮ್ಮಾನ್’ ಫೆಲೋಶಿಪ್ ಪ್ರದಾನ ಮಾಡಿ ಅವರು ಮಾತನಾಡಿದರು. ಸಿಯುಕೆಯ ಹಿಂದಿ ವಿಭಾಗ ಮತ್ತು ಬ್ಯಾಂಕ್ ಆಫ್ ಬರೋಡಾ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಹಿಂದಿ ಭಾಷೆಯಲ್ಲಿ ಪ್ರಥಮ ಶ್ರೇಣಿ ಪಡೆದವರಿಗೆ ಮೇಧಾವಿ ವಿದ್ಯಾರ್ಥಿ ಸಮ್ಮಾನ್ ಫೆಲೋಶಿಪ್ ನೀಡಲಾಯಿತು. “ಈ ಫೆಲೋಶಿಪ್ ಹಿಂದಿ ಭಾಷೆಯನ್ನು ಕಲಿಯುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ ಮತ್ತು ಹಿಂದಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ವೇದಿಕೆಯನ್ನು ಸೃಷ್ಟಿಸುತ್ತದೆ” ಎಂದು ಅವರು ಹೇಳಿದರು.
ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಹಿಂದಿ ನಮ್ಮ ರಾಷ್ಟ್ರದ ಆಸ್ಮಿತೆ ಮತ್ತು ಹೆಮ್ಮೆಯಾಗಿದೆ ಅದ್ದರಿಂದ ನಾವು ಹಿಂದಿ ಪ್ರಚಾರ ಮಾಡಬೇಕು. ಭಾರತ ಸರ್ಕಾರವು ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದೆ. ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿμï ಜೊತೆಗೆ ಹಿಂದಿಯನ್ನು ಉತ್ತೇಜಿಸಲು ನಾವು ತ್ರೀ ಭಾಷೆ ವ್ಯವಸ್ಥೆಯನ್ನು ಹೊಂದಿದ್ದೇವೆ. ನಾವು ಸಿಯುಕೆ ನಲ್ಲಿ ‘ಹಿಂದಿ ಭಾಷೆ ಬೋಧನೆ ಕೇಂದ್ರ’ವನ್ನು ಪ್ರಾರಂಭಿಸಲಿದ್ದೇವೆ. ಇಂಗ್ಲಿμï ಅನ್ನು ಜಾಗತಿಕ ಭಾಷೆ ಎಂದು ಪರಿಗಣಿಸಲಾಗಿದ್ದರೂ, ಅದು ಪ್ರಾದೇಶಿಕ ಭಾಷೆಯಾಗಿದೆ. ಏಕೆಂದರೆ ಪ್ರಪಂಚದ ಪ್ರತಿಯೊಂದು ದೇಶವೂ ತನ್ನದೇ ಆದ ಭಾಷೆಯನ್ನು ಹೊಂದಿದೆ ಮತ್ತು ಇಂಗ್ಲಿμï ಮಾತನಾಡುವ ಜನರು ಜರ್ಮನ್, ಫ್ರೆಂಚ್, ಚೈನೀಸ್, ಹಿಂದಿ ಮುಂತಾದ ಜಾಗತಿಕ ಭಾಷೆಗಳಿಗಿಂತ ಕಡಿಮೆ ಇದ್ದಾರೆ” ಎಂದು ಅವರು ಹೇಳೀದರು.
ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾದ ರಾಜ್ ಭಾಷೆ ವಿಭಾಗದ ಮುಖ್ಯ ವ್ಯವಸ್ಥಾಪಕಿ, ಪುಷ್ಪಲತಾ ಬಿ ಎನ್ ಅವರು ಮಾತನಾಡಿ, “ಹಿಂದಿಯನ್ನು ಉತ್ತೇಜಿಸಲು ನಮ್ಮ ಬ್ಯಾಂಕ್ ಹಿಂದಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೇಧಾವಿ ವಿದ್ಯಾರ್ಥಿ ಸಮ್ಮಾನ್ ನೀಡುತ್ತಿದೆ. ಪ್ರಥಮ ಶ್ರೇಣಿ (first rank) ಪಡೆದವರಿಗೆ ರೂ. 11,000 ಮತ್ತು ಎರಡನೇ ಶ್ರೇಣಿ (second rank) ಪಡೆದವರಿಗೆ ರೂ. 7,500. ನೀಡಲಾಗುತ್ತಿದೆ. ಸಾಮಾನ್ಯ ಜನರಲ್ಲಿ ಹಿಂದಿ ಪ್ರಸಾರಕ್ಕೆ ಕೊಡುಗೆ ನೀಡಿದವರಿಗೆ ಮಹಾರಾಜ್ ಸಯ್ಯಾಜಿ ರಾವ್ ಸಮ್ಮಾನ್ ಮತ್ತು ಪ್ರಾದೇಶಿಕ ಸಾಹಿತ್ಯವನ್ನು ಹಿಂದಿಯಲ್ಲಿ ಮತ್ತು ಹಿಂದಿ ಸಾಹಿತ್ಯವನ್ನು ಪ್ರಾದೇಶಿಕ ಭಾಷೆಗಳಿಗೆ ಭಾμÁಂತರಿಸಿದವರಿಗೆ ‘ರಾಷ್ಟ್ರ ಭಾಷೆ ಸಮ್ಮಾನ್’ ನೀಡಲಾಗುತ್ತದೆ. ನಮ್ಮ ಬ್ಯಾಂಕ್ ಮಿನಿ ಇಂಡಿಯಾದಂತಿದೆ, ಏಕೆಂದರೆ ಜನರು ವಿವಿಧ ರಾಜ್ಯಗಳಿಂದ ಬರುತ್ತಾರೆ. ಆದ್ದರಿಂದ ನಾವು ನಮ್ಮ ಬ್ಯಾಂಕ್‍ನಲ್ಲಿ ತ್ರೀ ಭಾಷೆ ನೀತಿಯನ್ನು ಹೊಂದಿದ್ದೇವೆ” ಎಂದು ಅವರು ಹೇಳಿದರು.
2019-20ನೇ ಶೈಕ್ಷಣಿಕ ಸಾಲಿನ ಪ್ರಥಮ ಶ್ರೇಣಿ (first rank)ಪಡೆದ ತೌಫಿಕ್ ಪಟೇಲ್ ಮತ್ತು ದ್ವಿತೀಯ ಶ್ರೇಣಿ (second rank) ಪಡೆದ ಭಾಗ್ಯಶ್ರೀ, 2020-21ನೇ ಶೈಕ್ಷಣಿಕ ಸಾಲಿನ ಪ್ರಥಮ ಶ್ರೇಣಿ ಪಡೆದ (first rank) ಶಂಕರ ಗುರುಬಸಪ್ಪ ಬನಸೋಡೆ, ದ್ವಿತೀಯ ಶ್ರೇಣಿ (second rank) ಪಡೆದಿರುವ ಅಶ್ವಿನಿ ಮೇಧಾವಿ ವಿದ್ಯಾರ್ಥಿ ಸಮ್ಮಾನ್ ಫೆಲೋಶಿಪ್ ಪಡೆದರು.
ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ.ಗಣೇಶ್ ಪವಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಡಾ.ಸಂದೀಪ್ ಆರ್ ಸ್ವಾಗತಿಸಿದರು, ಡಾ.ಭಾವನಾ ಕಾರ್ಯಕ್ರಮ ನಿರೂಪಿಸಿದರು.ಡಾ.ಗೋವಿಂದ ಜಾಧವ್ ವಂದಿಸಿದರು. ಈ ಸಂದರ್ಭದಲ್ಲಿ ಹಿಂದಿ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.