ಸಿಯುಕೆ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗವಕಾಶ

ಕಲಬುರಗಿ,ಏ 21: ಸಿಯುಕೆಗೆ ಒಳ್ಳೆಯ ಹೆಸರು ಮತ್ತು ಖ್ಯಾತಿಯನ್ನು ತಂದು ವಿಶ್ವವಿದ್ಯಾಲಯದ ಬ್ರಾಂಡ್ ಅಂಬಾಸಿಡರ್ ಆಗಿರಿಎಂದು ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.
2023-24ನೇ ಶೈಕ್ಷಣಿಕ ವರ್ಷದ ಎರಡನೇ ಹಂತದ ಪ್ಲೇಸ್‍ಮೆಂಟ್ ಡ್ರೈವ್‍ನಲ್ಲಿ ವಿವಿಧ ಕಂಪನಿಗಳಿಗೆ ಆಯ್ಕೆಯಾದ ಸಿಯುಕೆ ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಅವರು ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೇಮಕಗೊಂಡ 40 ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು. ಅವರು ಮುಂದುವರೆದು ಮಾತನಾಡಿ ನೀವೆಲ್ಲರೂ ಪ್ರಾಮಾಣಿಕತೆ, ಶಿಸ್ತಿ ಮತ್ತು ಪರಿಶ್ರಮವಹಿಸಿ ಕೆಲಸಮಾಡಿ, ಏಕೆಂದರೆ ಇವುಗಳು ನಿಮ್ಮ ವೃತ್ತಿಜೀವನದ ಯಶಸ್ಸನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಹೊರಹೋಗುವ ಕೈಯಲ್ಲಿ ಕೆಲಸ ಅಥವಾ ಎನ್ ಇಟಿ/ಜೆಆರೆಫ್ ಪ್ರಮಾಣಪತ್ರದೊಂದಿಗೆ ಹೋಗಬೇಕು ಎನ್ನುವುದು ನಮ್ಮ ಆಸೆ ಎಂದರು. ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಮಾತನಾಡಿದರು.ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಉದ್ಯೋಗಾಧಿಕಾರಿ ಡಾ. ಪರಮೇಶ್ ಅವರು ಮಾತನಾಡಿ 2023-24ರ ಶೈಕ್ಷಣಿಕ ವರ್ಷದಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಶನ್, ಅವಂತಿ ಫೆಲೋಸ್, ಇಎಸ್‍ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಹೋಮ್ ಫಸ್ಟ್ ಫೈನಾನ್ಸ್, ಟಿಸಿಎಸ್-ಬಿಪಿಎಸ್, ನಿವಾ ಬೂಪಾ ಹೆಲ್ತ್ ಇನ್ಶೂರೆನ್ಸ್, ಕ್ಯೂಸ್ಪೈಡರ್ಸ್‍ನಂತಹ ಕಂಪನಿಗಳಲ್ಲಿ ಕ್ಯಾಂಪಸ್ ಪ್ಲೇಸ್‍ಮೆಂಟ್ ಮೂಲಕ 90 ವಿದ್ಯಾರ್ಥಿಗಳನ್ನು ಸೇರಿಸಿದ್ದೇವೆ. 2023-24ರ ಪ್ಲೇಸ್‍ಮೆಂಟ್ ಸೀಸನ್ ಆಗಸ್ಟ್ ಅಂತ್ಯದವರೆಗೆ ಮುಂದುವರಿಯುತ್ತದೆ. ನಮ್ಮ ಎಂಬಿಎ ವಿದ್ಯಾರ್ಥಿನಿ ಸೋನಮ್ ಶರ್ಮಾ ಅವರು ಇಎಸ್‍ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‍ನಿಂದ ಅತಿ ಹೆಚ್ಚು ಅಂದರೆ ವಾರ್ಷಿಕ 9 ಲಕ್ಷ ರೂ.ಗಳ ಪ್ಯಾಕೇಜ್ ಅನ್ನು ಪಡೆದಿರುವುದು ನಮಗೆಲ್ಲಸಂತಸ ತಂದಿದೆ ಎಂದು ಹೇಳಿದರು.