ಸಿಯುಕೆ: ಕುಲಪತಿ,ಸಮಕುಲಪತಿಗೆ ಬೀಳ್ಕೊಡುಗೆ

ಕಲಬುರಗಿ ನ 17: ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಎಚ್.ಎಂ ಮಹೇಶ್ವರಯ್ಯ ಮತ್ತು ಸಮ ಕುಲಪತಿ ಪೆÇ್ರ.ಜಿ.ಆರ್.ನಾಯಕ್ ಅವರನ್ನು ಬೋಧನೆ, ಬೋಧಕೇತರ ಮತ್ತು ಇತರ ಸಂಸ್ಥೆಗಳಿಂದ ಹಾರ್ದಿಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಮಾರಂಭದಲ್ಲಿ ಪೆÇ್ರ.ಎಚ್.ಎಂ ಮಹೇಶ್ವರಯ್ಯ ಅವರಿಗೆ ಸಮರ್ಪಿಸಿ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಡಾ. ಮಂಜುಲಾಕ್ಷಿ, ಮಹೇಂದ್ರ ಮತ್ತು ಡಾ.ರಾಜಶ್ರೀ ಅವರು ಸಂಪಾದಿಸಿದ ಕೃತಿಗಳು ಬಿಡುಗಡೆಗೊಂಡವು.ಪೆÇ್ರ.ಎಚ್.ಎಂ ಮಹೇಶ್ವರಯ್ಯ ಅವರು ತಮ್ಮ ಭಾಷಣದಲ್ಲಿ ತಮ್ಮ ಕಾರ್ಯಕ್ಷಮತೆ ಬಗ್ಗೆ ಸಂತೋಷವಿದೆ ಎಂದು ಹೇಳಿದರು
ಈ ಸಂಸ್ಥೆಯೊಂದಿಗೆ ಕೆಲಸ ಮಾಡಿದ ಅನುಭವ ತುಂಬಾ ನೆಮ್ಮದಿ ನೀಡಿದೆ. ಸಮಕುಲಪತಿಗಳ ಸಹಾಯಕತೆ ಮತ್ತು ಸಮನ್ವಯವನ್ನು ಮೆಚ್ಚಿದರು. ತಮ್ಮ ಅಧಿಕಾರಾವಧಿ ಮುಗಿಯುವ ಈ ಸಂದರ್ಭದಲ್ಲಿ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳು ಇರದ ಕಾರಣ ಅವರ ಅನುಪಸ್ಥಿತಿಗೆ ತಮ್ಮ ನೋವು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗದ ಡೀನ್‍ರುಗಳು, ಮುಖ್ಯಸ್ಥರು, ಪ್ರಾಧ್ಯಾಪಕರು, ಅಧ್ಯಾಪಕರು, ಸಂಶೋಧನಾ ವಿದ್ವಾಂಸರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.