ಸಿಯುಕೆ ಉಪಕುಲಪತಿಗಳ ವಿರುದ್ಧ ಸಿಪಿಐ(ಎಂ) ರಾಷ್ಟ್ರಪತಿಗೆ ದೂರುಆರ್‍ಎಸ್‍ಎಸ್ ಗಣವೇಷಧಾರಿಗಳಾಗಿ ಲಾಠಿ ಹಿಡಿದ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು…!

ಆಳಂದ:ಜ.9: ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮೂವರು ಪ್ರಾಧ್ಯಾಪಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷ ಧರಿಸಿ ಲಾರಿ ಹಿಡಿದು ನಿಂತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಾಧ್ಯಾಪಕರು ತಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಿಪಿಐಎಂ ಸೇರಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ಎತ್ತಿದೆ.

ಆದಾಗ್ಯೂ, ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರು ಪ್ರಾಧ್ಯಾಪಕರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರುಗಳಾದ ಸಾರ್ವಜನಿಕ ಆಡಳಿತ ವಿಭಾಗದ ಡಾ. ಅಲೋಕಕುಮಾರ್ ಗೌರವ್, ಮನ: ಶಾಸ್ತ್ರ ವಿಭಾಗದ ಡಾ. ವಿಜಯೇಂದ್ರ ಪಾಂಡೆ ಮತ್ತು ಜೀವ ವಿಜ್ಞಾನ ವಿಭಾಗದ ಡಾ. ರಾಕೇಶಕುಮಾರ್ ಅವರು ವಿದ್ಯಾರ್ಥಿಯೋರ್ವ ತೆಗೆದ ಸೆಲ್ಫಿಗೆ ಗಣವೇಷದಲ್ಲಿ ಲಾಠಿ ಹಿಡಿದು ಪೆÇೀಜು ಕೊಟ್ಟಿದ್ದಾರೆ.

ಅದು ಇತ್ತೀಚೆಗೆಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಆರ್‍ಎಸ್‍ಎಸ್ ಪಥಸಂಚಲನದ ವೇಳೆ ತೆಗೆದ ಭಾವಚಿತ್ರ ಆಗಿದ್ದು, ಪ್ರಾಧ್ಯಾಪಕರೂ ಸಹ ಪಥಸಂಚಲನ ಮತ್ತು ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಸವರಾಜ್ ಡೊಣ್ಣೂರ್ ಅವರು ಪ್ರತಿಕ್ರಿಯಿಸಿ, ಆ ಭಾವಚಿತ್ರ ವಿಶ್ವವಿದ್ಯಾಲಯದ ಒಳಗಡೆ ತೆಗೆದುಕೊಂಡಿದ್ದು ಅಲ್ಲ, ಬದಲಿಗೆ ವಿಶ್ವವಿದ್ಯಾಲಯದ ಹೊರಗಡೆ ತೆಗೆದುಕೊಂಡಿರುವುದರಿಂದ ಅದು ನಮಗೆ ಸಂಬಂಧಿಸಿಲ್ಲ ಎಂದರು.

ಆರ್‍ಎಸ್‍ಎಸ್ ಕಾರ್ಯಕ್ರಮಗಳಲ್ಲಿ ಸರ್ಕಾರಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಭಾಗವಹಿಸಬಹುದೇ? ಎಂಬ ಪ್ರಶ್ನೆಗೆ ಉತರಿಸಿದ ಕುಲಸಚಿವರು,

ಅನೇಕ ಧಾರ್ಮಿಕ ಸಂಘಟನೆಗಳು ದೇಶದಲ್ಲಿ ಕೆಲಸ ಮಾಡುತ್ತಿವೆ. ನಾವು ವಿಶ್ವವಿದ್ಯಾಲಯದಿಂದ ಕೇಂದ್ರ ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಧಾರ್ಮಿಕ ಕಾರ್ಯಕ್ರಮವಾದ ಹಜ್ ಯಾತ್ರೆಗೆ ಹೋಗುವವರಿಗೆ ರಜೆ ಕೊಟ್ಟು ಕಳುಹಿಸುತ್ತೇವೆ.. ಯಾರೋ ತೀರ್ಥಯಾತ್ರೆಗೆ ಹೋಗುವವರಿಗೆ, ಯಾವುದೇ ಸಂಘಟನೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗುವವರಿಗೆ ವಿಶ್ವವಿದ್ಯಾಲಯ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದು ಸರ್ಕಾರದ ಮಟ್ಟದಲ್ಲಿ ಯೋಚನೆ ಮಾಡಬೇಕಿದೆ ಎಂದರು. ಧಾರ್ಮಿಕ ಕಾರ್ಯಕ್ರಮಗಳು ಬೇರೆ ಮತ್ತು ಆರ್‍ಎಸ್‍ಎಸ್ ಬೇರೆ. ಇದು ಸಮಾಜದಲ್ಲಿ ದ್ವೇಷ ಹರಡುತ್ತಿದೆ. ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂಬ ಆರೋಪ ಇರುವಾಗ ಅವರ ಕಾರ್ಯಕ್ರಮಗಳಲ್ಲಿ ಪ್ರಾಧ್ಯಾಪಕರು ಭಾಗವಹಿಸುವುದು ಸೇವಾ ಯಮಗಳ ಉಲ್ಲಂಘನೆಯಲ್ಲವೇ? ಎಂಬ ಮತ್‍ತೊಂದು ಪ್ರಶ್ನೆಗೆ ಉತರಿಸಿದ ಅವರು, ನನಗೆ ತಿಳಿದಂತೆ ಸೇವಾ ನಿಯಮಗಳ ಉಲ್ಲಂಘನೆಯಾಗುವುದಿಲ್ಲ. ಭಯೋತ್ಪಾದಕ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು. ಆರ್‍ಎಸ್‍ಎಸ್ ಅಂತಹ ಸಂಘಟನೆ ಎಂಬುದು ಆರೋಪವಷ್ಟೇ ಒಬ್ಬ ಸರ್ಕಾರಿ ನೌಕರನಾಗಿ ನಾನು ಹಾಗೆ ಮಾತನಾಡಲು ಬರುವುದಿಲ್ಲ. ನಮ್ಮ ವಿಶ್ವವಿದ್ಯಾಲಯ ನಿಯಮಗಳ ಪ್ರಕಾರ ಆ ಪ್ರಾಧ್ಯಾಪಕರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದರು.

ಕುಲಸಚಿವರು ಭಾಗವತರಿಗೆ ಪತ್ರ:

ಈ ಹಿಂದೆಯೂ ಕುಲಸಚಿವ ಪೆÇ್ರ. ಬಸವರಾಜ್ ಡೊಣ್ಣೂರ್ ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಲೆಟರ್ ಹೆಡ್ನಲ್ಲಿ ಆರ್‍ಎಸ್‍ಎಸ್ ಸರ ಸಂಚಾಲಕ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಭೇಟಿಗೆ ಅವಕಾಶ ಕೋರುವ ಮೂಲಕ ವಿವಾದಕ್ಕೆ ಒಳಗಾಗಿದ್ದರು.

ನಾನು 2022ರ ಜನವರಿ 8ರಂದು ನಾಗಪುರ ಜಿಲ್ಲೆಯ ಕವಿಕುಲಗುರು ಕಾಳಿದಾಸ ಸಂಸ್ಕøತ ವಿಶ್ವವಿದ್ಯಾಲಯ ರಾಮ್?ಟೆಕ್ಗೆ ಉಪನ್ಯಾಸ ನೀಡಲು ಬರುತ್ತಿದ್ದೇನೆ. ಇದು ಪೂಜನೀಯ ಗೋಳ್ವಾಲಕರ್ ಅವರ ಹುಟ್ಟೂರು ಕೂಡ. ಈ ಸಂದರ್ಭದಲ್ಲಿ ಜನವರಿ 8 ಮತ್ತು 9ರಂದು ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಲು ಬಯಸಿದ್ದೇನೆ. ನೀವು ಸಮಾಜದ ವಿವಿಧ ವಿಭಾಗಗಳನ್ನು ಆರ್‍ಎಸ್‍ಎಸ್ ಮೂಲಕ ತಲುಪಲು ದೇಶಾದ್ಯಂತ ಪ್ರಯಾಣ ಮಾಡುತ್ತಾ ಬ್ಯೂಸಿಯಾಗಿದ್ದೀರಿ ಎಂಬುದು ನನಗೆ ಗೊತ್ತು. ಆ ಬ್ಯೂಸಿಯ ವೇಳಾ ಪಟ್ಟಿಯಲ್ಲಿ ಬಿಡುವಾದರೆ ನನ್ನ ಅಪಾಯಿಂಟ್ ಮೆಂಟ್ ದೃಢೀಕರಿಸಬೇಕು ಎಂದು ಆ ಮೂಲಕ ವಿನಯ ಮತ್ತು ಕಾತರದಿಂದ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದು ಸಾಕಷ್ಟು ಟೀಕಗೆ ಕಾರಣವಾಗಿತ್ತು.

ಉಪಕುಲಪತಿಗಳ ವಿರುದ್ಧ ದೂರು: ಕೇಂದ್ರೀಯ ವಿಶ್ವವಿದ್ಯಾಲಯ ಅದು ಆರ್‍ಎಸ್‍ಎಸ್. ಪ್ರಣೀತ ಉಪಕುಲಪತಿಯವರ ಪೂರ್ಣ ಬೆಂಬಲದೊಂದಿಗೆ ಅಲ್ಲಿನ ಸಿಬ್ಬಂದಿಗಳು ಅನಾವರಣವಾಗಿದ್ದಾರೆ ಎಂದೇ ಭಾವಿಸುವಂತಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಅವರು ಆಕ್ಷೇಪಿಸಿದ್ದಾರೆ.

ಈ ಕುರಿತು ಕೇಂದ್ರೀಯ ವಿವಿ ಉಪಕುಲಪತಿಗಳ ವಿರುದ್ಧ ರಾಷ್ಟ್ರಪತಿಗಳಿಗೆ ಜ.7ರಂದು ದೂರಿದ ಅವರು ಮಾಧ್ಯಕೆ ಹೇಳಿಕೆ ನೀಡಿದ್ದಾರೆ.

ವಿವಿ ಮೂವರು ಸಿಬ್ಬಂದಿಗಳು ಸಂಘದ ಗಣವೇಷಧಾರಿಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯದ ನಿಯಮದ ಪ್ರಕಾರ ನೌಕರರು ಯಾವುದೇ ಸಂಘ ಸಂಸ್ಥೆಗಳಿಗೆ ಸದಸ್ಯರು ಸಹ ಆಗಬಾರದು. ಆದರೆ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅತ್ಯಂತ ನಿರ್ಭಯದಿಂದ ಸರಕಾರಿ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಇದಕ್ಕೆ ಪೂರ್ಣ ಕುಮ್ಮಕ್ಕು ವಿ.ಸಿ.ಯವರದ್ದಾಗಿದೆ. ಆರ್‍ಎಸ್‍ಎಸ್ ಬ್ಯಾನ್ ಆದ ಸಂಘಟನೆಯಲ್ಲವಲ್ಲ ಎಂಬುದು ಸ್ವತಃ ವಿಸಿಯವರ ಉವಾಚವಾಗಿದೆ. ಹಾಗಾದರೆ ಆರ್‍ಎಸ್‍ಎಸ್ ಶಾಖೆಗಳನ್ನು ತೆರೆದು ನಡೆಸುವಲ್ಲಿ ವಿವಿಯ ಆಡಳಿತವೇ ಆಸಕ್ತಿ ಹೊಂದಿದೆ ಎಂಬುದು ರುಜುವಾದಂತಾಗಿದೆ ಎಂದು ಹೇಳಿದ್ದಾರೆ.

ಒಂದು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಸಾಂವಿಧಾನಿಕ ಮೌಲ್ಯಕ್ಕನುಸರಿಸಿ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕೆ ಹೊರತು ಮತೀಯ ನೆಲೆಗಟ್ಟಿನ ಚಿಂತನೆಗಳನ್ನಲ್ಲ. ಈ ಹಿಂದೆಯೂ ಈ ಕೇಂದ್ರೀಯ ವಿ.ವಿ.ಯು ಕೋಮು ಚಟುವಟಿಕೆ ನಡೆಸುವುದಕ್ಕಾಗಿಯೇ ವಿರೋಧ ಎದುರಿಸಿತ್ತು. ವಿ.ವಿ.ಯಲ್ಲಿ ಸಂಶೋಧನಾತ್ಮಕ, ಶೈಕ್ಷಣಿಕ ಚಟುವಟಿಕೆ ಕುಸಿದು ಹೋಗುತ್ತಿದ್ದು ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಮೂಲೆಗುಂಪು ಮಾಡುವ ಅಥವ ಅವರನ್ನು ಪೆÇೀಲಿಸ್ ಮೂಲಕ ಹಣಿಯುವ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಒಟ್ಟಾರೆ ವಿವಿಯಲ್ಲಿ ಭಾರತೀಯ ಸಂವಿಧಾನ ವನ್ನು ಬದಿಗೊತ್ತಿ ಮನುಸ್ಮೃತಿ ಜಾರಿಗೊಳಿಸುವ ಹುನ್ನಾರಗಳು ಹುರಿಗೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಮತ್ತು ಕೇಂದ್ರೀಯ ವಿವಿವೊಂದು ನಮ್ಮ ನಾಡಿನ ಸೌಹಾರ್ದ ಪರಂಪರೆಯನ್ನು ನಾಶ ಮಾಡುವ ಷಡ್ಯಂತ್ರಕ್ಕೆ ಕೈ ಹಾಕಿರುವುದು ಆತಂಕಕಾರಿಯಾಗಿದೆ ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ ಸಮಿತಿಯು ಶೈಕ್ಷಣಿಕ ಕೇಂದ್ರದ ಈ ಕೋಮುವಾದಿ ಕ್ರಮವನ್ನು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ (ಆರ್.ಎಸ್.ಎಸ್.) ಸಂಘವು ಮೂರು ಬಾರಿ ನಿಷೇಧಿಸಲ್ಪಟ್ಟಿರಿವುದನ್ನು ಜನತೆಯು ಮರೆತಿಲ್ಲ. ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ಯಾರು? ಆರ್ ಎಸ್‍ಎಸ್‍ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಮನುಸ್ಮೃತಿಯ ಮೌಲ್ಯ ಸಂವಿಧಾನ ಇಲ್ಲವೆಂದು ಗೋಳ್ವಾಳ್ಕರ್ ತನ್ನ ಆರ್ಗನೈಜರ್ ಪತ್ರಿಕೆಯಲ್ಲಿ ಬರೆದು ದಾಖಲಿಸಿದೆ. ಸಂವಿಧಾನಸಲ್ಲಿ ನಂಬಿಕೆಯೇ ಇಲ್ಲದ ಇಂತಹ ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ವಿಶ್ವವಿದ್ಯಾಲಯದಲ್ಲಿ ಆಸ್ಪದ ಕೊಡಬೇಕೆ ಎಂದು ನೀಲಾ ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವ ಬಲಪಡಿಸುವ ದಿಕ್ಕಿನಲ್ಲಿ ಸಾಂವಿಧಾನಿಕ ಮೌಲ್ಯದ ಆಧಾರದಲ್ಲಿ ವಿಶ್ವವಿದ್ಯಾಲಯ ಮುನ್ನಡೆಯಬೇಕು. ಆದರೆ ವಿ.ವಿ.ಯ ಉಪಕುಲಪತಿಗಳಿಗೆ ಸಂವಿಧಾನದ ಮೇಲಿನ ನಂಬಿಕೆಗಿಂತಲೂ ಮನುಸ್ಮೃತಿ ಮತ್ತು ಆರ್ ಎಸ್ ಎಸ್ ಮೇಲೆಯೇ ಪೂರ್ಣ ನಂಬಿಕೆ ಇದ್ದಂತೆ ಕಾಣುತ್ತದೆ. ಹಾಗಿದ್ದ ಪಕ್ಷದಲ್ಲಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಅವರು ಆರ್‍ಎಸ್‍ಎಸ್ ಶಾಖೆ ಸೇರಿಕೊಳ್ಳಬಹುದು. ಅವರ ವ್ಯಕ್ತಿಗತವಾದದ್ದು. ಆದರೆ ಸರ್ಕಾರದ ಸಂಬಳ ಪಡೆದು ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಲಿಕ್ಕೆ ಅಧಿಕಾರವಿಲ್ಲ. ಮತ್ತು ವಿಶ್ವವಿದ್ಯಾಲಯ ಇರುವುದು ನಾಡಿನ ಬಹುತ್ವದ ಪ್ರತೀಕವಾಗಿ. ಎಲ್ಲ ಸಮುದಾಯದ ವಿದ್ಯಾರ್ಥಿಗಳು ನಿರ್ಭಯದಿಂದ ವ್ಯಾಸಂಗ ಮಾಡಲು ಸಾಧ್ಯವಾಗಬೇಕು ಅಂತಹ ವಾತಾವರಣ ಸೃಷ್ಟಿಸಬೇಕಾದ ವಿಸಿಯವರೇ ಮತೀಯ ಚಟುವಟಿಕೆ ಕುಮ್ಮಕ್ಕು ಕೊಡುತ್ತಿರುವುದು ಸ್ಪಷ್ಟವಾಗಿದೆ. ಏಕೆಂದರೆ ಸೆಂಟ್ರಲ್ ಸಿವಿಲ್ ಸರ್ವಿಸ್ ರೂಲ್ಸ್ (2966) ಪ್ರಕಾರ ಕೇಂದ್ರ ಸರಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗುವುದಾಗಲಿ ಅಥವಾ ರಾಜಕೀಯ ಪಕ್ಷದೊಂದಿಗೆ ಸಂಬಂಧವಿರಿಸಿಕೊಂಡ ಸಂಘ ಸಂಸ್ಥೆಗಳ ಸದಸ್ಯರಾಗುವುದನ್ನು ನಿಬರ್ಂಧಿಸಿದೆ. ಅಲ್ಲದೆ ನಿರ್ದಿಷ್ಟವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಜಮಾತ್ ಎ ಇಸ್ಲಾಮಿ ಹಿಂದ್ ನಂತಹ ಸಂಘಟನೆಗಳ ಸದಸ್ಯರಾಗುವುದನ್ನು ಸ್ಪಷ್ಟವಾಗಿ ನಿಬರ್ಂಧಿಸಿದೆ. ಇದನ್ನು ಉಲ್ಲಂಘಿಸಿದವರ ಮೇಲೆ ದಂಡನಾರ್ಹ ಕಾನೂನು ಕ್ರಮಕ್ಕೆ ಎಂದು ನಿರ್ದೇಶಿಸಿದೆ. ಈ ಕಾನೂನು ಜಾರಿ ಮಾಡಬೇಕಾಗಿದ್ದುದ್ದು ವಿಸಿಯವರೇ ಅಲ್ಲವೇನು ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಂಡು ಆರ್‍ಎಸ್‍ಎಸ್ ಗಣವೇಷಧಾರಿಗಳಾಗಿ ಪರೇಡ್ ಮಾಡುತ್ತಿರುವ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅಲೋಕಕುಮಾರ ಗೌರವ, ಮನಶಾಸ್ತ್ರ ವಿಭಾಗದ ಡಾ.ವಿಜಯೇಂದ್ರ ಪಾಂಡೆ ಮತ್ತು ಜೀವ ವಿಜ್ಞಾನ ವಿಭಾಗದ ಡಾ.ರಾಕೇಶ ಕುಮಾರ ಈ ಮೂವರು ಪ್ರಾಧ್ಯಾಪಕರನ್ನು ವಜಾ ಮಾಡಬೇಕೆಂದು ಎಂದು ಆಗ್ರಹಿಸಿದ ಅವರು, ಇಂತಹ ಮತೀಯತೆಗೆ ಮತ್ತೆ ಮತ್ತೆ ಆಸ್ಪದ ಕೊಟ್ಟು ವಿವಿಯ ವಾತಾವರಣವನ್ನೇ ಆತಂಕಕ್ಕೆ ದೂಡುತ್ತಿರುವ ವಿಶ್ವವಿದ್ಯಾಲಯದ ಉಪಕುಲಪತಿಗಳ ಮೇಲೂ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದಿರುವ ಅವರು, ಮತೀಯ ಚಟುವಟಿಕೆಗಳನ್ನು ತಡೆದು ಎಲ್ಲ ಸಮುದಾಯಗಳ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳು ಪರಸ್ಪರ ಸೌಹಾರ್ದತೆಯಿಂದ ಶೈಕ್ಷಣಿಕ ಜ್ಞಾನ ವರ್ಧನೆಯಲ್ಲಿ ತೊಡಗಲು ಸಾಧ್ಯವಾಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.