ಸಿಯುಕೆಯ ವಾರ್ಷಿಕ ಕ್ರೀಡಾ, ಸಾಂಸ್ಕøತಿಕ ಮತ್ತು ನಾವೀನ್ಯತೆ ಫೆಸ್ಟ್ ಅಂಕುರ್-2024 ಯಶಸ್ವಿ ಮುಕ್ತಾಯ

ಕಲಬುರಗಿ:ಏ.07:“ಅಂಕುರದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ವೇದಿಕೆಗಳಾಗಿವೆ” ಎಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಮಾಜಿ ಕುಲಪತಿ ಹಾಗೂ ಸಿಯುಕೆಯ ಕಾರ್ಯಕಾರಿ ಮಂಡಳಿ ಸದಸ್ಯ ಪೆÇ್ರ.ಪ್ರಮೋದ ಬಿ ಗಾಯ್ ಹೇಳಿದರು.
ನಿನ್ನೆ ಸಂಜೆ ಅವರು ಸಿಯುಕೆಯಲ್ಲಿ ನಡೆದ ವಾರ್ಷಿಕ ಕ್ರೀಡಾ, ಸಾಂಸ್ಕೃತಿಕ ಮತ್ತು ನಾವೀನ್ಯತೆ ಫೆಸ್ಟ್ ಅಂಕುರ್-2024 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು. ನೀವು ಮಾದರಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಅದಕ್ಕಾಗಿ ನಿಮ್ಮ ಜೀವನದಲ್ಲಿ ಯಶಸ್ವಿ ಆದರ್ಶ ವ್ಯಕ್ತಿತ್ವಗಳನ್ನು ಅನುಸರಿಸಬೇಕು. ಯಶಸ್ವಿಯಾಗಲು ಒಬ್ಬ ವ್ಯಕ್ತಿಯು ಆತ್ಮವಿಶ್ವಾಸ, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ತಾಳ್ಮೆಯನ್ನು ಹೊಂದಿರಬೇಕು” ಎಂದು ಹೇಳಿದರು. ಸನ್ಮಾನ್ಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಬಹಳ ಮುಖ್ಯ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಸವಾರ್ಂಗೀಣ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಕ್ಯಾಂಪಸ್‍ನಿಂದ ಹೊರಗೆ ಹೋದಾಗ ನೀವು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದು ನೀವು ಎದುರಿಸಲಿರುವ ನಿಜ ಜೀವನದ ಪರೀಕ್ಷೆಯಾಗಿರುತ್ತದೆ. ಬರಿ ಪುಸ್ತಕಗಳನ್ನು ಓದುವುದು ಪರೀಕ್ಷೆ ಬರೆಯುವುದು ಸಾಲದು. ನಿಜ ಜೀವನದ ಸವಾಲುಗಳನ್ನು ಎದುರಿಸಲು ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಬೇಕು. ಹೀಗಾಗಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗವಹಿಸಬೇಕು. ನೀವು ಗೆದ್ದಾಗ ಹೆಚ್ಚು ಸಂಬ್ರಮಿಸುವುದು ಮತ್ತು ಸೋತಾಗ ಖಿನ್ನತೆಗೆ ಒಳಗಾಗಬಾರದು. ಸೊಲು ಗೆಲುವುಗಳನ್ನು ಕಲಿಕೆಯ ಪಾಠಗಳಾಗಿ ತೆಗೆದುಕೊಳ್ಳಬೇಕು ಮತ್ತು ನಿಮ್ಮನ್ನು ನಿವು ಬಲಪಡಿಸಿಕೊಳ್ಳಬೇಕು. ಎಲ್ಲರು ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಯುಕೆ ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ ಅವರು ಮಾತನಾಡಿ, “ಕ್ರೀಡೆ ಒಂದು ಉದ್ಯಮವಾಗಿದ್ದು, ಅದು ವೇಗವಾಗಿ ಬೆಳೆಯುತ್ತಿದೆ. ವಾರ್ಷಿಕವಾಗಿ ಇದು ರೂ. 15766 ಕೋಟಿಯಷ್ಟು ನಮ್ಮ ಆರ್ಥಿಕತೆಗೆ ನೀಡುತ್ತಿದೆ ಮತ್ತು ಜಿಡಿಪಿಯ ಬೆಳವಣಿಗೆ ದರಕ್ಕಿಂತ ಅಂದರೆ ಶೇ. 11 ದರದಲ್ಲಿ ಬೆಳೆಯುತ್ತಿದೆ. ಭಾರತೀಯ ಕ್ರೀಡಾ ಸಾಮಗ್ರಿಗಳ ಉತ್ಪಾದನಾ ಉದ್ಯಮವು 2003 ರಲ್ಲಿ 3.6 ಶತಕೋಟಿ ಅಮೆರಿಕನ ಡಾಲರ್ ರಫ್ತು ಮಾಡಿದೆ ಮತ್ತು ಇದು 2027 ರ ವೇಳೆಗೆ 6.9 ಶತಕೋಟಿ ಅಮೆರಿಕನ ಡಾಲರ್ ತಲುಪುಲಿದೆ. ಈ ಉದ್ಯಮದಿಂದ ಭಾರತವು ಭಾರಿ ವಿದೇಶಿ ವಿನಿಮಯ ಗಳಿಸುತ್ತಿದೆ. ಇಂದು ಉದ್ಯೋಗಾವಕಾಶವು ಕಠಿಣ ಕೌಶಲ್ಯಗಳನ್ನು (ಕ್ಲಾಸ್ ರೂಮ್ ಕಲಿಕೆಯಿಂದ ಕಲಿತ ವಿಧ್ಯೆ) ಮಾತ್ರವಲ್ಲದೆ ಸಂಘಟನೆ, ನಾಯಕತ್ವ, ಸಂವಹನ ಮತ್ತು ಪರಸ್ಪರ ಕೌಶಲ್ಯಗಳಂತಹ ಮೃದು ಕೌಶಲ್ಯಗಳನ್ನು (ಇಂತಹ ಚಟುವಟಿಕೆಗಳ ಮೂಲಕ ಕಲಿತ) ಅವಲಂಬಿಸಿರುತ್ತದೆ. ವಿಶ್ವವಿದ್ಯಾನಿಲಯವು ಒಳಾಂಗಣ ಮತ್ತು ಹೊರಾಂಗಣ ಆಟಗಳಿಗೆ ಸಾಕಷ್ಟು ಮೂಲಸೌಕರ್ಯಗಳನ್ನು ನಿರ್ಮಿಸಿದೆ ಅದನ್ನು ಬಳಸಿಕೊಳ್ಳಿ ಮತ್ತು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ” ಎಂದು ಹೇಳಿದರು.
ನಾವೀನ್ಯತೆ ಉತ್ಸವದಲ್ಲಿ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಅಸದ್ ಅಲಿ ಅವರು ಕೃಷಿ ಆವಿμÁ್ಕರದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನ ರವಿರಾಜ್ ಶುದ್ಧ ವಿಜ್ಞಾನ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಸಮಾಜ ವಿಜ್ಞಾನ ವಿಭಾಗದಲ್ಲಿ ವ್ಯವಹಾರ ಅಧ್ಯಯನ ವಿಭಾಗದ ಜಿ ಕಾವ್ಯ ಪ್ರಥಮ ಬಹುಮಾನ ಪಡೆದಿದ್ದಾರೆ.
ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್ ಕ್ರೀಡಾ ವಿಭಾಗದಲ್ಲಿ ಸಮಗ್ರ ಚಾಂಪಿಯನ್‍ಶಿಪ್ ಗೆದ್ದಿದೆ. ಸಾಂಸ್ಕೃತಿಕ ವಿಭಾಗದಲ್ಲಿ ಸ್ಕೂಲ್ ಆಫ್ ಸೋಶಿಯಲ್ ಅಂಡ್ ಬಿಹೇವಿಯರಲ್ ಸೈನ್ಸ್ ಸಮಗ್ರ ಚಾಂಪಿಯನ್‍ಶಿಪ್ ಗೆದ್ದಿದೆ.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ.ಆರ್.ಎಸ್.ಹೆಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ನಿತಿನ್ ಬಿ ಮತ್ತು ಡಾ.ರೂಪರಾಣಿ ಸೋನಾವಾಲ್ ಕಾರ್ಯಕ್ರಮ ನಿರೂಪಿಸಿದರು. ಡಾ.ಸಂದೀಪ್ ಎನ್ ಸ್ವಾಗತಿಸಿದರು. ಡಾ.ಆಶಿಸ್ ಬೆಳಮಕರ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕ ಡಾ.ಮಲ್ಲಿಕಾರ್ಜುನ ಹೂಗಾರ್ ವಿಜೇತರ ಹೆಸರನ್ನು ಘೋಷಿಸಿದರು, ಅದೇ ರೀತಿ ಡಾ.ಸಾಯಿ ಅಭಿನವ್ ಕ್ರೀಡಾಕೂಟಗಳ ವಿಜೇತರ ಹೆಸರುಗಳನ್ನು ಮತ್ತು ಡಾ.ಎನ್ ಸಂದೀಪ್ ಅವರು ಆವಿμÁ್ಕರ ಕಾರ್ಯಕ್ರಮದ ವಿಜೇತರ ಹೆಸರನ್ನು ಘೋಷಿಸಿದರು. ಎಲ್ಲಾ ನಿಕಾಯಗಳ ಡೀನ್‍ರು, ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.