ಸಿಯುಕೆಯ ಏಳನೇ ಘಟಿಕೋತ್ಸವವು ಜೂನ್/ಜುಲೈ ನಲ್ಲಿ

ಕಲಬುರಗಿ,ಏ.30:ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಏಳನೇ ವಾರ್ಷಿಕ ಘಟಿಕೋತ್ಸವವು ಜೂನ್/ಜುಲೈ 2023 ರಲ್ಲಿ ನಡೆಯಲಿದೆ. ಡಿಸೆಂಬರ್ 2022 ರಂದು ಅಥವಾ ಅದಕ್ಕೂ ಮೊದಲು ಎಂಫಿಲ್/ಪಿಹೆಚ್ಡಿ/ಸ್ನಾತಕೋತ್ತರ/ಸ್ನಾತಕ (M.Phil/Ph.D/Post Graduate/Undergraduate Degree) ಪದವಿ ಪಡೆದ ವಿದ್ಯಾರ್ಥಿಗಳು ಆಯಾ ಪದವಿಯನ್ನು ಸ್ವೀಕರಿಸಲು ಅರ್ಹರಾಗಿದ್ದಾರೆ” ಎಂದು ಪರೀಕ್ಷಾ ನಿಯಂತ್ರಣಾಧಿಕಾರಿ ಶ್ರೀ ಕೋಟ ಸಾಯಿಕೃಷ್ಣ ತಿಳಿಸಿದ್ದಾರೆ.
ಅವರು ಮುಂದುವರೆದು ಮಾತನಾಡಿ “ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು 13 ಮೇ 2023 ಕೊನೆಯ ದಿನಾಂಕವಾಗಿರುತ್ತದೆ. ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಲಿಂಕ್ https://cuk.samarth.edu.in/convocation ಮೂಲಕ ಅರ್ಜಿ ಸಲ್ಲಿಸಬಹುದು. ಆನ್‍ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ಪದವಿ ಪತ್ರಗಳೊಂದಿಗೆ, ಎಸ್‍ಎಸ್‍ಸಿ / 10 ನೇ ಪಾಸ್ ಪ್ರಮಾಣಪತ್ರ ಮತ್ತು ತಾತ್ಕಾಲಿಕ ಪ್ರಮಾಣಪತ್ರ / ಅಂತಿಮ ಸೆಮಿಸ್ಟರ್ ಮಾಕ್ರ್ಸ್ ಕಾರ್ಡ್‍ನೊಂದಿಗೆ ಪರೀಕ್ಷಾ ನಿಯಂತ್ರಕರ ಕಛೇರಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಆಳಂದ ರಸ್ತೆ ಕಲಬುರಗಿ- 585 367 , ಇವರಿಗೆ ನೋಂದಾಯಿತ ಅಂಚೆ ಮೂಲಕ ಅಥವಾ 22ನೇ ಮೇ 2023 ರ ಮೊದಲು ವೈಯಕ್ತಿಕವಾಗಿ ಸಲ್ಲಿಸಬೇಕು.
ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲನೆಯ ನಂತರ ವಿಶ್ವವಿದ್ಯಾಲಯದ ವೆಬ್‍ಸೈಟ್‍ನಲ್ಲಿ ಹಾಕಲಾಗುವುದು.ಹೆಚ್ಚಿನ ಮಾಹಿತಿಗೆ www.cuk.ac.in ಗೆ ಭೆಟಿ ನೀಡಬೇಕಾಗಿ” ತಿಳಿಸಿದ್ದಾರೆ.