
ಕಲಬುರಗಿ,ಸೆ.16:”ಮಾನವ ಬೆಳವಣಿಗೆಯಲ್ಲಿ ಮಾತೃಭಾμÉ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದು ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು. ಸಿಯುಕೆಯ ರಾಜ್ ಭಾμÁ ವಿಭಾಗ ಆಯೋಜಿಸಿದ್ದ ಹಿಂದಿ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಜಪಾನ್, ಜರ್ಮನಿ, ಚೀನಾದಂತಹ ಅನೇಕ ದೇಶಗಳು ತಮ್ಮ ಮಾತೃಭಾμÉಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿವೆ. ಅವರ ಎಲ್ಲಾ ಸಾಹಿತ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ಆವಿμÁ್ಕರಗಳು, ಸಂಶೋಧನೆಯನ್ನು ತಮ್ಮದೇ ಭಾμÉಯಲ್ಲಿ ಮಾಡಿದ್ದಾರೆ. ಹೀಗಿದ್ದರು ಅವರು ಅಭಿವೃದ್ಧಿ ಹೊಂದಿದ ದೇಶಗಳಾಗಿವೆ. ಆದರೆ ಭಾರತದಲ್ಲಿ ನಾವು ತ್ರಿಭಾμÁ ನೀತಿಯನ್ನು ಅಳವಡಿಸಿಕೊಂಡಿದ್ದೇವೆ; ಅದರಂತೆ ನಮ್ಮ ಮಾತೃಭಾμÉಯ ಜೊತೆಗೆ ನಾವು ಹಿಂದಿ ಮತ್ತು ಇಂಗ್ಲಿμï ಕಲಿಯುತ್ತಿದ್ದೇವೆ. ಇಂಗ್ಲಿμï ಜಾಗತಿಕ ಭಾμÉ ಎಂದು ಜನರು ಭಾವಿಸುತ್ತಾರೆ, ಅದು ಅಲ್ಲ. ಪ್ರಪಂಚದಾದ್ಯಂತ ಇಂಗ್ಲಿμï ಮಾತನಾಡುವ ದೇಶಗಳು ಬಹಳ ಕಡಿಮೆ. ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂದಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಅದನ್ನು ಕೇಂದ್ರ ಸರಕಾರದ ಅಧಿಕೃತ ಭಾμÉಯೆಂದು ಅಳವಡಿಸಿಕೊಳ್ಳಲಾಗಿದೆ. ಆದ್ದರಿಂದ ನಾವು ತ್ರಿಭಾμÁ ನೀತಿಯನ್ನು ಅನುಸರಿಸಬೇಕು” ಎಂದು ಅವರು ಹೇಳಿದರು.
ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ ಅವರು ಮಾತನಾಡಿ, “1949ರ ಸೆ.14ರಂದು ಸಂವಿಧಾನ ರಚನಾ ಸಭೆಯು ಹಿಂದಿಯನ್ನು ಅಧಿಕೃತ ಭಾμÉಯನ್ನಾಗಿ ಅಳವಡಿಸಿದ ನೆನಪಿಗಾಗಿ ಪ್ರತಿ ವರ್ಷ ಸೆ.14ರಂದು ಹಿಂದಿ ದಿವಸ್ ಅಥವಾ ಹಿಂದಿ ದಿನವನ್ನು ಆಚರಿಸಲಾಗುತ್ತದೆ. 1949ರಲ್ಲಿ ಈ ದಿನದಂದು ಸಂವಿಧಾನ ರಚನಾ ಸಭೆಯು ಹಿಂದಿಯನ್ನು ಕೇಂದ್ರ ಸರ್ಕಾರದ ಅಧಿಕೃತ ಭಾμÉ ಎಂದು ಘೋಸಿಸಿದೆ. ಹಿಂದಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಲು ಮತ್ತು ದೇಶದಾಧ್ಯಂತ ಅದನ್ನು ಪ್ರಚಾರ ಮಾಡಲು ನಾವು ಹಿಂದಿ ದಿನವನ್ನು ಆಚರಿಸುತ್ತೇವೆ. ಈ ದಿನದ ಉದ್ದೇಶ ಹಿಂದಿಯೇತರ ರಾಜ್ಯಗಳ ಮೇಲೆ ಾದನ್ನು ಹೇರುವುದಲ್ಲ. ಬದಲಿಗೆ ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಹಿಂದಿ ಮಾತನಾಡುವ ಕಾರಣ ನಾವು ಹಿಂದಿ ಜ್ಞಾನವನ್ನು ಹೊಂದುವುದು ಎಷ್ಟು ಮುಖ್ಯ ಎಂದು ಪ್ರಚಾರ ಮಾಡುವುದಾಗಿದೆ” ಎಂದು ಅವರು ಹೇಳಿದರು.
ಮಾನವಿಕ ಮತ್ತು ಭಾμÁ ನಿಕಾಯದ ಡೀನ್ ಪೆÇ್ರ.ವಿಕ್ರಂ ವಿಸಾಜಿ ಅವರು ಮಾತನಾಡಿ, “ನಾವು ನಮ್ಮ ಮಾತೃಭಾμÉಯೊಂದಿಗೆ ಇತರ ಭಾμÉಗಳನ್ನು ಕಲಿಯಬೇಕು, ಏಕೆಂದರೆ ಅವರ ಸಂಸ್ಕøತಿ ಮತ್ತು ಸಾಹಿತ್ಯವನ್ನು ತಿಳಿಯಲು ಭಾμÉ ನಮಗೆ ಸಹಾಯ ಮಾಡುತ್ತದೆ. ಹಿಂದಿ ಭಾμÉಯು ಶ್ರೀಮಂತ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಹೊಂದಿದೆ ಅದು ನಮ್ಮ ರಾಷ್ಟ್ರ ಮತ್ತು ಜನರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ಇದಕ್ಕೂ ಮುನ್ನ ರಾಜಭಾμÁ ಅಧಿಕಾರಿ ಡಾ.ರೇμÁ್ಮ ನದಾಫ್ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ “ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಹಿಂದಿ ಮಾತನಾಡಲು ಜನರನ್ನು ಉತ್ತೇಜಿಸುವುದು ಮತ್ತು ಅದನ್ನು ಪ್ರಚಾರ ಮಾಡುವುದು. ಹಿಂದಿ ಸಪ್ತಾಹದ ಸಂದರ್ಭದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ, ಯುಜಿ, ಪಿಜಿ ಮತ್ತು ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಸೆ.19 ರಿಂದ 25 ರವರೆಗೆ ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಈ ವರ್ಷದ ಧ್ಯೇಯವಾಖ್ಯ “ಹಿಂದಿ ಭಾμÉಯನ್ನು ಹರಡುವಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ” ಎಂದು ಅವರು ಹೇಳಿದರು.
ಶ್ರೀಮತಿ ನಶಿಮಾ ಬಾನು ಕಾರ್ಯಕ್ರಮ ನಿರೂಪಿಸಿದರು, ಡಾ.ಜಯದೇವಿ ಜಂಗಮಶೆಟ್ಟಿ ಮತ್ತು ಡಾ. ಸ್ವಪ್ನಿಲ್ ಚಾಪೇಕರ್ ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡಿದರು, ಡಾ.ರಾಜಶೇಖರನ್ ವಂದಿಸಿದರು. ಈ ಸಂದರ್ಭದಲ್ಲಿ ಪೆÇ್ರ.ಸಂದೀಪ್ ರಣಭೀರಕರ್, ಇತರ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.