ಸಿಯುಕೆಯಲ್ಲಿ ಸ್ವಾಮಿ ವಿವೆಕಾನಂದ ಜಯಂತಿ ಆಚರಣೆ

ಕಲಬುರಗಿ:ಜ.16:”ಭಾರತ ಶಿಲ್ಪಕಲೆ, ಸಂಸ್ಕøತಿ, ಸಾಹಿತ್ಯ, ಅಧ್ಯಾತ್ಮಿಕ ಜ್ಞಾನದಲ್ಲಿ ಶ್ರೀಮಂತ ರಾಷ್ಟ್ರವಾಗಿದೆ” ಎಂದು ಸಿಯುಕೆಯ ಇತಿಹಾಸ ಪ್ರಾಧ್ಯಾಪಕ ಡಾ. ರವಿ ಖಂಗೈ ಹೇಳಿದರು.
ಅವರು ಸಿಯುಕೆಯ ಎಬಿವಿಪಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ನಾವು ವಸಹಾತುಶಾಹಿ ಮನೋಧರ್ಮದಿಂದ ಹೊರ ಬಂದು, ನಮ್ಮ ಶ್ರೀಮಂತ ಜ್ಞಾನ ಪರಂಪರೆ ಮತ್ತು ವಿವೇಕಾನಂದರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಸ್ವತಂತ್ರರಾಗಿ ಬೆಳೆಯಬೇಕು” ಎಂದು ಹೇಳಿದರು.
ಸಿಯುಕೆ ಗ್ರಂಥಪಾಲಕ ಡಾ. ಪಿ ಎಸ್ ಕಟ್ಟಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ “ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ನಮ್ಮ ಯುವ ಜನಾಂಗದ ಮೇಲೆ ಗಾಢವಾದ ಪರಿಣಮವನ್ನು ಬೀರಿವೆ. ಶತಮಾನಗಳಿಂದ ಯುವಜನತೆ ಅವರ ವಿಚಾರಗಳನ್ನು ಅಳವಡಿಸಿಕೊಂಡು ಬಂದಿದ್ದಾರೆ. ಅಲ್ಲದೆ ಅವರು ನಮಗೆ ಮಾರ್ಗದರ್ಶಕರಾಗಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರಾದ ನರೆಂದ್ರ ಚೌದರಿ, ರೊಹಿತ ಜೋಶಿ, ಭಾಗ್ಯಶ್ರೀ, ಮಹಾದೇವನ, ವಿದ್ಯಾರ್ಥಿಗಳು ಮತ್ತು ಸಿಬ್ಬಂದ್ಧಿ ಹಾಜರಿದ್ದರು.