ಸಿಯುಕೆಯಲ್ಲಿ ವಿಶ್ವ ಸಾಮಾಜಿಕ ಕಾರ್ಯ ದಿನಾಚರಣೆ

ಕಲಬುರಗಿ:ಮಾ.20:”ಸಾಮಾಜಿಕ ಕಾರ್ಯದ ವಿದ್ಯಾರ್ಥಿಗಳು ಕಡಿಮೆ ಸಂಬಳದ ಉದ್ಯೋಗಗಳನ್ನು ಹುಡುಕುವ ಬದಲು ತಮ್ಮದೇ ಆದ ಸಾಮಾಜಿಕ ಉದ್ಯಮವನ್ನು ಪ್ರಾರಂಭಿಸಬಹುದು” ಎಂದು ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ ಪುಣೆಯ ಸಂಶೋಧನಾ ಕೇಂದ್ರದ ನಿರ್ದೇಶಕ ಪೆÇ್ರ. ಬಿ.ಟಿ ಲಾವಣಿ ಹೇಳಿದರು.
ಇಂದು ಅವರು ಸಿಯುಕೆಯ ಸಮಾಜಕಾರ್ಯ ವಿಭಾಗ ಆಯೋಜಿಸಿದ್ದ ವಿಶ್ವ ಸಮಾಜಕಾರ್ಯ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಪ್ರತಿಯೊಬ್ಬ ಸಮಾಜ ಸೇವಕರು ಸಾಮಾಜಿಕ ಉದ್ಯಮವನ್ನು ನಡೆಸುವ ಕೌಶಲ್ಯವನ್ನು ಹೊಂದಿದ್ದಾರೆ. ಭಾರತದಲ್ಲಿ ಸಾಕಷ್ಟು ಸಾಮಾಜಿಕ ಉದ್ಯಮಗಳ ಅಗತ್ಯವಿದೆ. ಅವರು ಕೃಷಿಯಲ್ಲಿನ ಉದ್ಯಮಶೀಲತೆಯ ಅವಕಾಶಗಳನ್ನು ಸಹ ಬಳಸಿಕೊಂಡು ಉದ್ಯಮಿಗಳಾಗಬಹುದು” ಎಂದು ಹೇಳಿದರು.
ಸಿಯುಕೆಯ ಸಮಾಜಕಾರ್ಯ ವಿಭಾಗ ಆಯೋಜಿಸಿದ್ದ ವಿಶ್ವ ಸಮಾಜಕಾರ್ಯ ದಿನಾಚರಣೆ ಮತ್ತು ವಸ್ತುಪ್ರದರ್ಶನವನ್ನು ಸನ್ಮಾನ್ಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ಅವರು ಮಾತನಾಡಿ “ಸಮಾಜ ಸೇವಕರಾದ ನೀವು ಸಾಮಾಜಿಕ ಚಟುವಟಿಕೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದಿರಿ. ತಾವು ಜನರ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರ ವಹಿಸುತ್ತೀರಿ. ಮಹಿಳೆಯರು, ಮಕ್ಕಳು ಮತ್ತು ರೈತರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ವಿಜ್ಞಾನ ನಿಕಾಯದ ಡೀನ್ ಪೆÇ್ರ.ಚನ್ನವರ್ ಆರ್‍ಎಂ ಅವರು ಮಾತನಾಡಿ, “ಸುಸ್ಥಿರ ಅಭಿವೃದ್ಧಿಯಲ್ಲಿ ಸಮಾಜ ಸೇವಕರು ಪ್ರಮುಖ ಪಾತ್ರ ವಹಿಸುತ್ತಾರೆ” ಎಂದರು.
ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಪೆÇ್ರ.ಪವಿತ್ರಾ ಆರ್. ಆಲೂರ್ ಮಾತನಾಡಿ, “ಸಮಾಜಕಾರ್ಯ ದಿನಾಚರಣೆಯಿಂದ ಸಾಮಾಜಿಕ ಬೆಳವಣಿಗೆಯಲ್ಲಿ ಅದರ ಪಾತ್ರದ ಬಗ್ಗೆ ಜನರಲ್ಲಿ ಅರಿವು ಮೂಡುತ್ತದೆ. ಈ ವರ್ಷದ ಆಚರಣೆಯ ಘೊಷವಾಖ್ಯ ‘ಪರಿವರ್ತನೀಯ ಬದಲಾವಣೆಗಾಗಿ ಹಂಚಿಕೆಯ ಭವಿಷ್ಯ’. ಇದು ಸಮುದಾಯದ ನೇತೃತ್ವದ ವಿಧಾನಗಳು, ಸ್ಥಳೀಯ ಬುದ್ಧಿವಂತಿಕೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದ ಸಹಬಾಳ್ವೆಯನ್ನು ಒತ್ತಿಹೇಳುತ್ತದೆ” ಎಂದು ಹೇಳಿದರು.
ವಿದ್ಯಾರ್ಥಿಗಳು ಸುಸ್ಥಿರ ಸಿಯುಕೆ ಮಾದರಿ, ಸಾಮಾಜಿಕ ನ್ಯಾಯ ಮಾದರಿ ಮತ್ತು ಶಿಕ್ಷಣದ ಮೌಲ್ಯವನ್ನು ಪ್ರದರ್ಶಿಸುವ ಮಾದರಿ, ಸಮಾಜ ಸುಧಾರಕರು ಮತ್ತು ಕಾರ್ಯಕರ್ತರು, ಮಾದರಿ ಶಾಲೆ, ಕ್ಷೇಮ ಕೇಂದ್ರ, ಮಕ್ಕಳ ಮಾರ್ಗದರ್ಶನ ಕೇಂದ್ರ, ಮಾದರಿ ಕಾರ್ಖಾನೆಯಂತಹ ವಿವಿಧ ಸಾಮಾಜಿಕ ಕಾರ್ಯ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ ಜನರು, ಶಾಲಾ ಮಕ್ಕಳು, ಚಿಕ್ಕ ಮಕ್ಕಳು ವಸ್ತುಪ್ರದರ್ಶನ ನೋಡಲು ಆಗಮಿಸಿದ್ದು, ಅವರು ಕುತೂಹಲ ಮಾದರಿಗಳನ್ನು ವಿಕ್ಷಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಉದ್ಯಮಿಗಳನ್ನು ಕ್ಯಾಂಪಸ್‍ನಲ್ಲಿ ಅಂಗಡಿಗಳನ್ನು ಹಾಕಿದ್ದರು. ಈ ಉಪಕ್ರಮವು ಉತ್ಪಾದಕರು ಮತ್ತು ರೈತರು ತಮ್ಮ ಸರಕುಗಳನ್ನು ನೇರವಾಗಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿತು. ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮತ್ತು ಇತರರು ಆಹಾರ ಮಳಿಗೆಯನ್ನು ನಡೆಸಿದರು. ಅವರು ‘ಗೆಸ್ ದಿ ಪರ್ಸನ್,’ ‘ಪಿರಮಿಡ್ ಬಾಲ್, ‘ಸ್ಪ್ಲಾಶ್ ಬಾಲ್,’ ‘ಮೆಮೊರಿ ಟೆಸ್ಟ್,’ ‘ಪಜಲ್ ಗೇಮ್,’ ‘ವಾಟರ್ ಬಾಲ್,’ ಮತ್ತು ‘ಹಾರರ್ ರೂಮ್ ಸೇರಿದಂತೆ ಹಲವಾರು ಆಟಗಳನ್ನು ಆಯೋಜಿಸಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಸಾವಯವ ಕೃಷಿಕ ಹಣಮಂತ ಬೆಳಗುಂಪಿ ಹಾಗೂ ಕಲ್ಬುರಗಿಯ ಮಾರ್ಗದರ್ಶಿ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ಆನಂದರಾಜ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಯೋಜಕ ಡಾ.ಶಿವಮೂರ್ತಿ ಸ್ವಾಗತಿಸಿ, ಬಿನ್ಷಾ ಕಾರ್ಯಕ್ರಮ ನಿರೂಪಿಸಿ, ಎಲ್ದೋಸ್ ವಂದಿಸಿದರು.